ಮಲವಂತಿಗೆ: ಬೆಳಕು ಕಾಣದ ಎಳನೀರು ಪ್ರದೇಶಕ್ಕೆ ವಿದ್ಯುತ್ ಸಂಪರ್ಕ: 75 ವರ್ಷಗಳ ಕಾಲ ಎಳನೀರು ಜನತೆ ಅನುಭವಿಸಿದ ನೋವುಗಳಿಗೆ ಸಿಕ್ಕಿದೆ ಪ್ರತಿಫಲ
ಮಲವಂತಿಗೆ: ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಎಳನೀರು ಎಂಬಲ್ಲಿ ಸುಮಾರು 30 ಮನೆಗೆ ವಿದ್ಯುತ್ ಸಂಪರ್ಕವನ್ನು ಹೊಂದಿದಂತಹ ಸುಂದರ ಮತ್ತು ಅವಿಸ್ಮರಣೀಯವಾದಂತಹ ಸಂಭ್ರಮಾಚರಣೆಯ ಕಾರ್ಯಕ್ರಮವು ಬೆಳ್ತಂಗಡಿ ತಾಲೂಕಿನ ಎಳನೀರು ಗ್ರಾಮದಲ್ಲಿ ಮಾ.29 ರಂದು ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರೀಶ್ ಪೂಂಜ ವಹಿಸಿ, ಭಾವನೆಗಳು ಅರಳುವುದು ಸಹಜ. 75 ವರ್ಷಗಳ ಕಾಲ ಎಳನೀರು ಭಾಗದ ಜನರು ಅನುಭವಿಸಿದಂತಹ ನೋವು ಭಾವನೆಗಳನ್ನು ವ್ಯಕ್ತಪಡಿಸದಂತಹ ಸಂದರ್ಭದಲ್ಲಿ ಇದೀಗ 75 ವರ್ಷಗಳ ಕಾಲ ಕಳೆದ ನೋವನ್ನು ಮರೆಮಾಚಿ ಅವಿಸ್ಮರಣೀಯ ಅದ್ಭುತ ಬೆಳಕಿನೊಂದಿಗೆ ಎಳನೀರು ಇಡೀ ಬೆಳ್ತಂಗಡಿ ಗೆ ಬೆಳಕನ್ನು ನೀಡುವ ಕಾರ್ಯ ಮಾಡಿ ಬೆಳೆದು ನಿಂತಿದೆ ಎಂದು ಶ್ಲಾಘನೀಯ ವ್ಯಕ್ತಪಡಿಸಿದರು.
ಈ ವೇಳೆ ಪ್ರಕಾಶ್ ಅವರು ಮಾತನಾಡಿ ಎಳನೀರು ಎಂಬ ಸಂಕಷ್ಟದ ಊರಿನಲ್ಲಿ ಬೆಳಕು ನೀಡುವಂತಹ ಕಾರ್ಯ ನಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾ.ಪಂ ಅಧ್ಯಕ್ಷೆ ಅನಿತಾ, ಉಪಾಧ್ಯಕ್ಷರು ದಿನೇಶ್, ಬೂತ್ ಸಮಿಯ ಅಧ್ಯಕ್ಷರು, ಸದಸ್ಯರು , ಪ್ರಕಾಶ್, ಬೂತ್ ಕಾರ್ಯದರ್ಶಿ ವಿಜಯ್, ಉಪಸ್ಥಿತರಿದ್ದರು.
ರಾಜೇಂದ್ರ ಸ್ವಾಗತಿಸಿದರು. ಜಿತೇಂದ್ರ ಕುಮಾರ್ ಪ್ರಾರ್ಥಿಸಿದರು.