ಡಿ.3 ಮತ್ತು 4 ರಂದು ಪ್ರಪ್ರಥಮ ಬಾರಿಗೆ ದುಬೈನಲ್ಲಿ ನಡೆಯಲಿದೆ ಅಂತರಾಷ್ಟ್ರೀಯ ಜಿನ ಸಮ್ಮಿಲನ
ಮಂಗಳೂರು: ಧರ್ಮದ ರಕ್ಷಣೆ ಹಾಗೂ ಬೆಳವಣಿಗೆಯ ಬೆಳಗನ್ನು ಗಡಿನಾಡಿನಾಚೆ ಬೆಳಗಲು ಸುಹಾಸ್ತಿ ಯುವ ಜೈನ್ ಮಿಲನ್ ಅವರು ಜಿನ ಸಮ್ಮಿಲನ ಕಾರ್ಯಕ್ರಮವನ್ನು ಡಿ.3 ಮತ್ತು 4 ರಂದು ದುಬೈನ್ ನಲ್ಲಿ ಜರುಗಲಿದೆ.
ಪ್ರಪ್ರಥಮ ಬಾರಿಗೆ ವಿದೇಶದಲ್ಲಿ ನಡೆಯುತ್ತಿರುವ ಜೈನ್ ಸಮುದಾಯದ ಹೆಮ್ಮೆಯ ಕಾರ್ಯಕ್ರಮ ಹಲವಾರು ರೂಪು ರೇಶೆಗಳಲ್ಲಿ ನಡೆಯಲಿದೆ.
ಡಿ.3 ರಂದು ಸಂಜೆ ಸ್ವಸ್ತಿ ಶ್ರೀ ಪರಮಪೂಜ್ಯ ಲಕ್ಷ್ಮೀಸೇನಾ ಭಟ್ಟಾಚಾರ್ಯ ಮಹಾಸ್ವಾಮೀಜಿ ಎನ್ ಆರ್ ಪುರ ಇವರು ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮವನ್ನು ಸುರೇಂದ್ರ ಕುಮಾರ್ ಧರ್ಮಸ್ಥಳ ಇವರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ನಾಡೋಜ ಹಂಪ ನಾಗರಾಜಯ್ಯ ಇವರು ವಹಿಸಲಿದ್ದಾರೆ.
ಮುಖ್ಯಾತಿಥಿಗಳಾಗಿ ಅನಿತಾ ಸುರೇಂದ್ರ ಕುಮಾರ್, ಪುಷ್ಪರಾಜ್ ಜೈನ್, ಪುಟ್ಟಸ್ವಾಮಿ ಜೈನ್, ಸಂದೇಶ್ ಅಂಗಡಿ ಬೆಟ್ಟು, ಪ್ರಸನ್ನ ಕುಮಾರ್ ಮೈಸೂರು, ಮಾಜಿ ಸಚಿವರು ಅಭಯಚಂದ್ರ ಜೈನ್ ಭಾಗಿಯಾಗಲಿದ್ದಾರೆ.
ಇದೇ ಸಂದರ್ಭದಲ್ಲಿ ಜಯಲಕ್ಷ್ಮಿ ಅಭಯ್ ಕುಮಾರ್, ಡಾ ಪದ್ಮಪ್ರಸಾದ್ , ನೆರಂಕಿ ಪಾರ್ಶ್ವನಾಥ್ ವೆಬ್ಸೈಟ್ ಬಿಡುಗಡೆಗೊಳಿಸಲಿದ್ದು, ನಂತರ ಸಾಂಸ್ಕೃತಿ ಕಾರ್ಯಕ್ರಮಗಳು ಜರುಗಲಿದೆ.
ಡಿ.4 ರಂದು ಬೆಳಿಗ್ಗೆ 8.30 ರಿಂದ ಡಾ ಸ್ನೇಹಶ್ರೀ ನಿರ್ಮಲ್ ಕುಮಾರ್ ಅವರಿಂದ ಭಜನೆ, ನೀವ್ ಆಗ್ತೀರ ಸಮ್ಯಕ್ ಜ್ಞಾನಿ ಕಾರ್ಯಕ್ರಮ, ಸಾಂಗ್, ಗೇಮ್, ಸಂವಾದ, ಅವಾರ್ಡ್ ಕಾರ್ಯಕ್ರಮಗಳು ಜರುಗಲಿದೆ.
ಹೀಗೆ ಹತ್ತು ಹಲವು ಕನಸುಗಳ ಹೊತ್ತುಕೊಂಡ ಬೇರೆ ಬೇರೆ ನಾಡಿನ ಸಂಸ್ಕೃತಿ, ಆಚಾರ , ವಿಚಾರಗಳು ದುಬೈ ಜಿನ ಸಮ್ಮಿಲನದಲ್ಲಿ ಮೇಳೈಸಲಿವೆ.