• September 21, 2024

ನಾರಾವಿ: ಭಾರತೀಯ ಜೈನ್ ಮಿಲನ್ ವತಿಯಿಂದ, ಆಟಿಡೊಂಜಿ ಕೂಟ ಮತ್ತು ತುಳುಕೂಟ

 ನಾರಾವಿ: ಭಾರತೀಯ ಜೈನ್ ಮಿಲನ್ ವತಿಯಿಂದ, ಆಟಿಡೊಂಜಿ ಕೂಟ ಮತ್ತು ತುಳುಕೂಟ

ನಾರಾವಿ: ಜೈನ್ ಮಿಲನ್ ವಲಯ-8 ರ ವತಿಯಿಂದ ಜುಲೈ 31ನೇ ಭಾನುವಾರದಂದು ನಾರಾವಿ ಧರ್ಮಶ್ರೀ ಸಭಾ ಭವನದಲ್ಲಿ ಆಟಿಡೊಂಜಿ ಕೂಟ ಮತ್ತು ತುಳುಕೂಟ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.

ಉದ್ಘಾಟಕರು ಮತ್ತು ಮುಖ್ಯ ಅತಿಥಿಗಳು ಶ್ರೀ ಪಂಚ ಪರಮೇಷ್ಠಿಗಳ ಭಾವಚಿತ್ರಕ್ಕೆ ದೀಪ ಬೆಳಗಿಸಿ ಕಲಸೆಗೆ ಭತ್ತವನ್ನು ಸುರಿದು ಚೆನ್ನೆಮಣೆ ಆಟವನ್ನು ಆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು

ಕಾರ್ಯಕ್ರಮದ ಉದ್ಘಾಟಕರಾಗಿ ಭಾರತೀಯ ಜೈನ್ ಮಿಲನ್ ನ ಮಾನ್ಯ ರಾಜ್ಯಾಧ್ಯಕ್ಷರು ಹಾಗೂ ಮಂಗಳೂರು ಕ್ರೆಡೈ ಅಧ್ಯಕ್ಷರಾದ ವೀರ್ ಪುಷ್ಪರಾಜ್ ಜೈನ್ ರವರು ಭಾಗವಹಿಸಿ ನಾರಾವಿ ಜೈನ್ ಮಿಲನ್ ವತಿಯಿಂದ ಪ್ರೀತಿಪೂರ್ವಕವಾಗಿ ‘ಗೌರವಾರ್ಪಣಾ ಸನ್ಮಾನ’ವನ್ನು ಸ್ವೀಕರಿಸಿ ಉದ್ಘಾಟನಾ ಮಾತುಗಳನ್ನಾಡಿದರು.

ಮುಖ್ಯ ಅತಿಥಿಯಾಗಿ ವೀರ್ ರಘುಚಂದ್ರ ಚೌಟರವರು ಭಾಗವಹಿಸಿ ಹಿಂದಿನ ಕಾಲದ ಆಟಿ ಸಮಯದ ಜೈನರ ಸಂಪ್ರದಾಯ ಮತ್ತು ಸಂಸ್ಕೃತಿಯ ಆಚಾರ-ವಿಚಾರಗಳ ಬಗ್ಗೆ ಉಪನ್ಯಾಸವನ್ನು ನೀಡಿದರು.

ಈ ಸಂದರ್ಭ ವೇದಿಕೆಯಲ್ಲಿ ಭಾರತೀಯ ಜೈನ್ ಮಿಲನ್ ನ ವಲಯ ನಿರ್ದೇಶಕರಾದ ವೀರ್ ಸೋಮಶೇಖರ್ ಶೆಟ್ಟಿ, ನಾರಾವಿ ಬಸದಿಯ ಆಡಳಿತ ಮೊಕ್ತೇಸರರಾದ ವೀರ್ ನಿರಂಜನ್ ಅಜ್ರಿ ಮತ್ತು ನಾರಾವಿ ಜೈನ್ ಮಿಲನ್ ನ ಖಜಾಂಚಿ ವೀರಾಂಗನಾ ಕುಸುಮ ವಿನಯ್ ಹೆಗ್ಡೆ ಉಪಸ್ಥಿತರಿದ್ದರು. ನಾರಾವಿ ಜೈನ್ ಮಿಲನ್ ನ ಗೌರವ ಸಲಹೆಗಾರರಾದ ವೀರ್ ಶಿಶುಪಾಲ್ ಜೈನ್ ರವರು ಅತಿಥಿ ಗಣ್ಯರನ್ನು ಸ್ವಾಗತಿಸಿದರು.ಅಧ್ಯಕ್ಷರಾದ ವೀರ್ ಅಶೋಕ್ ಕುಮಾರ್ ಈದು ಇವರು ಆಟಿಕೂಟ ಮತ್ತು ತುಳುಕೂಟದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ವೀರ್ ಅಭಿಜಿತ್ ಜೈನ್ ನಾರಾವಿ ವಂದನಾರ್ಪಣೆಗೈದರು.

ಅಂದಿನ ಈ ವಿಶೇಷ ಕಾರ್ಯಕ್ರಮದಲ್ಲಿ ತುಳು ಸಭಾ ಕಾರ್ಯಕ್ರಮದ ಜೊತೆಗೆ ಜೈನ್ ಮಿಲನ್ ಬಂಧುಗಳಿಗೆ ವಿಶೇಷ ತುಳು ಗಾಯನ ಕೂಟ ಮತ್ತು ತುಳು ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ವಿಶೇಷವಾಗಿ ತೆರೆಮರೆಗೆ ಸೇರಿದಂತಹ ತುಳುನಾಡಿನ ಹಳೆಯ ಕಾಲದ ಕೃಷಿ ಸಲಕರಣೆಗಳು ಮತ್ತು ವಸ್ತು ಸಾಮಗ್ರಿಗಳ ಪ್ರದರ್ಶನ ನಡೆಯಿತು.ಕಾರ್ಯಕ್ರಮದ ಕೊನೆಗೆ ನಾರಾವಿ ಜೈನ್ ಮಿಲನ್ ನ ಶ್ರಾವಕಿಯರು ಸ್ವತಃ ತಯಾರಿಸಿದ ಸುಮಾರು 35 ಬಗೆಯ ಆಟಿದ ಕಾಲದ ವಿಶೇಷ ತಿಂಡಿ ತಿನಸುಗಳನ್ನು ಕಾರ್ಯಕ್ರಮಕ್ಕೆ ಆಗಮಿಸಿದ ಮಿಲನ್ ಬಂಧುಗಳು ಸವಿಯುವುದರೊಂದಿಗೆ ವಿಶಿಷ್ಟವಾಗಿ ಕಾರ್ಯಕ್ರಮ ಸಂಪನ್ನಗೊಂಡಿತು.ನಾರಾವಿ ಜೈನ್ ಮಿಲನ್ ನ ಕಾರ್ಯಕಾರಿ ಸದಸ್ಯರಾದ ವೀರ್ ನಿರಂಜನ್ ಜೈನ್ ಈದು ಮತ್ತು ವೀರ್ ಪ್ರಶಾಂತ್ ಕುಮಾರ್ ಅಳಿಯೂರು ಕಾರ್ಯಕ್ರಮ ನಿರ್ವಹಿಸಿದರು.

Related post

Leave a Reply

Your email address will not be published. Required fields are marked *

error: Content is protected !!