ಕಲ್ಲೇರಿ ಸ.ಹಿ.ಪ್ರಾ ಶಾಲೆಯಲ್ಲಿ ಡಿ.3 ರಂದು ರಜತಮಹೋತ್ಸವದ ಸಂಭ್ರಮ
ಕಲ್ಲೇರಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲೇರಿ( ಜನತಾ ಕಾಲೋನಿ) ಇದರ “ರಜತ ಮಹೋತ್ಸವ ಸಮಾರಂಭವ” ವು ಡಿ.3 ರಂದು ಜರುಗಲಿದೆ.
ಡಿ.3 ರಂದು ಸ.ಹಿ.ಪ್ರಾ.ಶಾಲೆ ಕಲ್ಲೇರಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು ಅಶ್ರಫ್ ಕಲ್ಲೇರಿ ಇವರು ಧ್ವಜಾರೋಹಣ ಗೈಯಲಿದ್ದಾರೆ.
ನಂತರ ಅಂಗನವಾಡಿ ಪುಟಾಣಿಗಳಿಂದ ಮತ್ತು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು, ಬೆಳಿಗ್ಗೆ 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ.
ಸಭಾ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಶಾಸಕ ಹರಿಶ್ ಪೂಂಜ ಇವರು ಭಾಗವಹಿಸಲಿದ್ದಾರೆ. ತಣ್ಣೀರುಪಂತ ಗ್ರಾ.ಪಂ ಅಧ್ಯಕ್ಷೆ ಇಸ್ರತ್ ಬಾನು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ರಾಜ್ಯ ಸಭಾ ಸದಸ್ಯರು, ಪೂಜ್ಯ ರಾಜಶ್ರೀ ಡಾ ಡಿ ವೀರೇಂದ್ರ ಹೆಗ್ಗಡೆಯವರು, ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್, ಪ್ರತಾಪ್ ಸಿಂಹ ನಾಯಕ್ ಮೊದಲಾದ ಗಣ್ಯರು ಭಾಗಿಯಾಗಲಿದ್ದಾರೆ.
ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ನಾಟಕ ನಡೆಯಲಿದ್ದು, ಸ.ಹಿ.ಪ್ರಾ.ಶಾಲೆ ಕಲ್ಲೇರಿ ಇಲ್ಲಿಯ ವಿದ್ಯಾರ್ಥಿಗಳು ಅಭಿನಯಿಸುವ, ನಿರಂಜನ್ ರೈ ಮಠಂತಬೆಟ್ಟು ವಿರಜಿತ , ಕೇಶವ ಮಚ್ಚಿಮಲೆ ಇವರ ನಿರ್ದೇಶನದಲ್ಲಿ , ಬೊಮ್ಮಯ್ಯ ಬಂಗೇರ ಇವರ ಸಾರಥ್ಯದಲ್ಲಿ ತುಳು ಹಾಸ್ಯಮಯ ನಾಟಕ ಪೊಟ್ಟನ ಪೊಡಿ ಮರ್ದ್ ನಡೆಯಲಿದೆ.
ನಂತರ ನಮನ ಮಿತ್ರ ಮಂಡಳಿ ಕಲ್ಲೇರಿ ಇದರ ಕಲಾವಿದರ ಅಭಿನಯದ ಗಡಿನಾಡ ಕಲಾನಿಧಿ ಕೃಷ್ಣ ಜಿ ಮಂಜೇಶ್ವರ ವಿರಜಿತ ಕೇಶವ ಮಚ್ಚಿಮಲೆ ಇವರ ನಿರ್ದೇಶನದಲ್ಲಿ ಬೊಮ್ಮಯ್ಯ ಬಂಗೇರ ಇವರ ಸಾರಥ್ಯದಲ್ಲಿ ತುಳು ಹಾಸ್ಯ ಮಯ ನಾಟಕ ಏರ್ ಎಂಚಾಂದ್ ಏರೆಗ್ ಗೊತ್ತುನಾಟಕ ಪ್ರದರ್ಶನಗೊಳ್ಳಲಿದೆ.