ಸಮೃದ್ಧಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಪದಾಧಿಕಾರಿಗಳಿಗೆ ಉದಯೋನ್ಮುಖ ಕಾರ್ಯಗಾರ 2025

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದ ಪಿನಾಕಿ ಸಭಾಂಗಣದಲ್ಲಿ ಜನವರಿ 25 ರಂದು ಸಮೃದ್ಧಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಬೆಳ್ತಂಗಡಿ, ಪುತ್ತೂರು ಮತ್ತು ಮಂಗಳೂರಿನ ಶಾಖೆಗಳ ಪದಾಧಿಕಾರಿಗಳಿಗೆ ಒಂದು ದಿನದ ಕಾರ್ಯಗಾರವನ್ನು ಯಶಸ್ವಿಯಾಗಿ ಆಯೋಜಿಸಿತು.
13 ವರ್ಷಗಳ ಇತಿಹಾಸ ಹೊಂದಿರುವ ಈ ಸಂಸ್ಥೆ, ‘ಸಾಧನೆ ಸಾಧಕನ ಸೊತ್ತೇ ಹೊರತು ಸೋಮಾರಿಯ ಸೊತ್ತಲ್ಲ’ ಎಂಬಂತೆ ಡಾ. ವಿ. ಸಮೃದ್ಧಿ ಮಂಜುನಾಥ್ ಅವರ ದಕ್ಷ ನಾಯಕತ್ವದಲ್ಲಿ ರಾಜ್ಯದಾದ್ಯಂತ ಹಲವಾರು ಶಾಖೆಗಳನ್ನು ಸ್ಥಾಪಿಸಿ, ನಿರುದ್ಯೋಗಿಗಳಿಗೆ ಉತ್ತಮ ವೇತನದ ಉದ್ಯೋಗಾವಕಾಶಗಳನ್ನು ಒದಗಿಸುತ್ತಿದೆ. ಗ್ರಾಹಕರಿಗೆ ಸೇವೆ ಸಲ್ಲಿಸಲು ಪ್ರತಿಷ್ಠಿತ ಸ್ಥಾನ ಪಡೆದಿರುವ ಈ ಸಂಸ್ಥೆ, ಯಾವುದೇ ಕಪ್ಪು ಚುಕ್ಕೆ ಇಲ್ಲದೆ ತನ್ನ ಸಾಧನೆಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿದೆ.
ಆದರೆ, ಇತ್ತೀಚೆಗೆ ಸಂಸ್ಥೆಯ ಹೆಸರನ್ನು ಹಾಳುಮಾಡಲು ಕೆಲವು ವ್ಯಕ್ತಿಗಳು ನಕಾರಾತ್ಮಕ ಪ್ರಚಾರವನ್ನು ಹಬ್ಬಿಸುತ್ತಿರುವುದು ಗಮನಕ್ಕೆ ಬಂದಿದೆ. ಇದಕ್ಕೆ ವಿರೋಧವಾಗಿ ಸಂಘಟಿತ ಹೋರಾಟ ನಡೆಸುವುದು ಮತ್ತು ಸಮೃದ್ಧಿಯ ಆಶಯ ಹಾಗೂ ಸಾಧನೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದಿಂದ ಈ ಕಾರ್ಯಗಾರವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಶ್ರೀ ಮಂಜುನಾಥಗೌಡ ಉಡ್ತಾಜೆ, ಶ್ರೀ ರಾಘವೇಂದ್ರ ಪೂಜಾರಿ ಉಡುಪಿ, ಶ್ರೀ ಅಮರೇಶ್ ರಾವ್ ಶಿವಮೊಗ್ಗ, ಕ್ಲಸ್ಟರ್ ಹೆಡ್ ಶ್ರೀ ಆಶೋಕ್ ಪುತ್ತೂರು, ಪ್ರಬಂಧಕರಾದ ಶ್ರೀ ಅಶ್ವಥ್ ಹೆಗ್ಡೆ, ಕೋರ್ ಕಮಿಟಿ ಸದಸ್ಯರು ಮತ್ತು ನೂರಾರು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶ್ರೀ ಜನಾರ್ದನ ಕಾನರ್ಪ ಅವರ ನಿರೂಪಣೆ ಹಾಗೂ ಶ್ರೀ ಹರೀಶ ಮುದ್ದಿನಡ್ಕ ಅವರ ಧನ್ಯವಾದದ ಮಾತುಗಳೊಂದಿಗೆ ಕಾರ್ಯಕ್ರಮ ರಾಷ್ಟ್ರಗೀತೆಯ ಮೂಲಕ ಯಶಸ್ವಿಯಾಗಿ ಸಂಪನ್ನವಾಯಿತು.