• September 13, 2024

ಉಜಿರೆ : ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಪ್ರಧಾನ ಕಚೇರಿಗೆ ಭೇಟಿ ನೀಡಿದ ನಟಿ ಶೃತಿ:

 ಉಜಿರೆ : ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಪ್ರಧಾನ ಕಚೇರಿಗೆ ಭೇಟಿ ನೀಡಿದ ನಟಿ ಶೃತಿ:

ಉಜಿರೆ: ಚತುರ್ಭಾಷಾ ಚಲನಚಿತ್ರ ನಟಿ ಶೃತಿಯವರು ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಪ್ರಧಾನ ಕಚೇರಿ ಉಜಿರೆಗೆ ನ.15ರಂದು ಭೇಟಿ ನೀಡಿದರು.

ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎನ್ ಜನಾರ್ಧನರವರು ಚಿತ್ರನಟಿ ಶೃತಿಯವರನ್ನು ಸ್ವಾಗತಿಸಿ ಸಿರಿಸಂಸ್ಥೆಯ ಕಿರು ಪರಿಚಯವನ್ನು ಮಾಡಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶೃತಿಯವರು ಪೂಜ್ಯ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ಕನಸಿನ  ಕೂಸಾಗಿರುವ  ಸಿರಿ ಸಂಸ್ಥೆಯು ಇಲ್ಲಿ ದುಡಿಯುತ್ತಿರುವ ಪ್ರತಿಯೋರ್ವ ಮಹಿಳೆಗೂ ಸ್ವಾವಲಂಬನೆಯ ಬದುಕನ್ನು ನೀಡಿ ಸುಖೀ ಜೀವನವನ್ನು ನಡೆಸಲು ಸ್ಪೂರ್ತಿಯಾಗಿದೆ. ಪೂಜ್ಯ ದಂಪತಿಗಳ ಆಸರೆಯಲ್ಲಿ ಸಹಸ್ರಾರು ಮಹಿಳೆಯರ ಬಾಳು ಬೆಳಕಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸಿರಿ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರಾದ ರಾಜೇಶ್ ಪೈ, ಕೊರಗಜ್ಜ ಚಲನಚಿತ್ರದ ನಿರ್ಮಾಪಕರಾದ ವಿದ್ಯಾಧರ್, ಸಿರಿ ಸಂಸ್ಥೆಯ ಆಡಳಿತ ಮತ್ತು ಲೆಕ್ಕಪತ್ರ ವಿಭಾಗದ ನಿರ್ದೇಶಕರಾದ ಪ್ರಸನ್ನ, ಎಸ್ ಕೆ ಡಿ ಆರ್ ಡಿಪಿ ಬೆಳ್ತಂಗಡಿ ತಾಲೂಕು ಯೋಜನಾಧಿಕಾರಿ ಸುರೇಂದ್ರ ಹಾಗೂ ಸಿರಿ ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಜೀವನ್ ಕುಮಾರ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.

Related post

Leave a Reply

Your email address will not be published. Required fields are marked *

error: Content is protected !!