• July 27, 2024

ಮಂಗಳೂರು: ಸಮುದ್ರದ ದಡದ ಬಳಿ ನಿಲ್ಲಿಸಲಾಗಿದ್ದ ಬೋಟ್ ಗಳಲ್ಲಿ ಆಕಸ್ಮಿಕ ಬೆಂಕಿ: ಧಗ ಧಗ ಉರಿದ ಬೋಟ್

 ಮಂಗಳೂರು: ಸಮುದ್ರದ ದಡದ ಬಳಿ ನಿಲ್ಲಿಸಲಾಗಿದ್ದ ಬೋಟ್ ಗಳಲ್ಲಿ ಆಕಸ್ಮಿಕ ಬೆಂಕಿ:   ಧಗ ಧಗ ಉರಿದ ಬೋಟ್

ಮಂಗಳೂರು: ಸಮುದ್ರದ ದಡದ ಬಳಿ ನಿಲ್ಲಿಸಲಾಗಿದ್ದ 3 ಕ್ಕಿಂತ ಅಧಿಕ ಬೋಟ್ ಗಳು ಬೆಂಕಿಗಾಹುತಿಯಾದ ಘಟನೆ ಬೆಂಗರೆ ಪ್ರದೇಶದಲ್ಲಿ ಅ.28 ರಂದು ನಡೆದಿದೆ.

ನಿಲ್ಲಿಸಲಾಗಿದ್ದ ಎರಡು ಬೋಟ್ ಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಬೋಟ್ ಗಳು ಸಂಪೂರ್ಣವಾಗಿ ಸುಟ್ಟುಹೋಗಿದೆ. ಡಿಯೂ ಡಮನ್ ನಂತಹ ದ್ವೀಪ ಪ್ರದೇಶಕ್ಕೆ ಸರಕು ಸಾಮಾಗ್ರಿಗಳನ್ನು ಕೊಂಡೊಯ್ಯಲು ಈ ಬೋಟ್ ಗಳನ್ನು ಬಳಸಲಾಗುತ್ತಿತ್ತು ರಿಪೇರಿಗೆಂದು ನಿಲ್ಲಿಸಿದ್ದ ವೇಳೆ ಈ ಘಟನೆ ನಡೆದಿದೆ.

ಅಗ್ನಿಶಾಮಕ ದಳ ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಬೋಟ್ ಗಳಿಗೆ ಬೆಂಕಿ ಹತ್ತಿಕೊಳ್ಳಲು ಕಾರಣ ಏನು ಎಂಬುದು ತಿಳಿದು ಬಂದಿಲ್ಲ.

Related post

Leave a Reply

Your email address will not be published. Required fields are marked *

error: Content is protected !!