• September 21, 2024

ಕಾಂತಾರ ಸಿನೆಮಾದಲ್ಲಿರುವ “ವರಾಹ ರೂಪಂ” ಹಾಡು ಬಳಸದಂತೆ ಕಾಂತಾರ ಚಿತ್ರತಂಡಕ್ಕೆ ಕೋರ್ಟ್ ಸೂಚನೆ: ಕಾಂತಾರ ಚಿತ್ರಕ್ಕೆ ಆಘಾತ ನೀಡಿದ ಕೋರ್ಟ್

 ಕಾಂತಾರ ಸಿನೆಮಾದಲ್ಲಿರುವ “ವರಾಹ ರೂಪಂ” ಹಾಡು ಬಳಸದಂತೆ ಕಾಂತಾರ ಚಿತ್ರತಂಡಕ್ಕೆ ಕೋರ್ಟ್ ಸೂಚನೆ: ಕಾಂತಾರ ಚಿತ್ರಕ್ಕೆ ಆಘಾತ ನೀಡಿದ ಕೋರ್ಟ್

ಕಾಂತಾರ ಸಿನಿಮಾ ಎಲ್ಲೆಡೆ ತನ್ನ ಹವಾ ಎಬ್ಬಿಸಿ ಬಿಟ್ಟಿದೆ. ಕಾಂತಾರ ಸಿನಿಮಾದಲ್ಲಿರುವ ಫೇಮಸ್ ಹಾಡು ವರಾಹ ರೂಪಂ ವಿವಾದ ಹುಟ್ಟಿಸಿತ್ತು. ಈ ಹಾಡನ್ನು ಕಾಂತಾರ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ಮಲಯಾಳಂ ಭಾಷೆಯ ನವರಸಂ ಹಾಡಿನಿಂದ ಕಾಪಿ ಮಾಡಿದ್ದಾರೆ ಎಂಬ ಆರೋಪವನ್ನು ಚಿತ್ರತಂಡ ಎದುರಿಸಿತ್ತು.

ಕಾಂತಾರ ಸಿನಿಮಾದ ವರಾಹ ರೂಂ ಎನ್ನುವ ಫೇಮಸ್ ಟ್ಯೂನ್ ಅನ್ನು 5 ವರ್ಷ ಹಳೆಯ ಮಲಯಾಳಂ ಸಿನಿಮಾದಿಂದ ಕದ್ದಿದ್ದಾರೆ ಎಂಬ ಮಾತು ಬಂದಿತ್ತು. ಈ ಕುರಿತು ಮಲಯಾಳಂ ನ ತೈಕ್ಕುಡಂ ಬ್ರಿಡ್ಜ್ ಚಿತ್ರತಂಡ ಕೋರ್ಟ್ ಮೆಟ್ಟಿಲೇರಿತ್ತು. ಈ ಕೇಸ್ ವಿಚಾರಣೆ ನಡೆಸಿದ ಕೇರಳದ ಕೋಝಿಕೋಡ್ ನ್ಯಾಯಾಲಯ ವರಾಹ ರೂಪಂ ಹಾಡಿಗೆ ತಡೆಯಾಜ್ಞೆ ನೀಡಿದೆ. ಹೌದು ಈ ವಿಚಾರವನ್ನು ತೈಕ್ಕುಡಂ ಬ್ರಿಡ್ಜ್ ತನ್ನ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಹಂಚಿಕೊಂಡಿದೆ. ನಿರ್ಮಾಪಕ, ನಿರ್ದೇಶಕ, ಸಂಗೀತ ಸಂಯೋಜಕ ಜೊತೆಗೆ ಸಂಗೀತ, ಜಿಯೋ ಸವನ್ ಮತ್ತು ಇತರರು ತೈಕ್ಕುಡಂ ಬ್ರಿಡ್ಜ್ ಅನುಮತಿ ಪಡೆಯದೇ ಹಾಡನ್ನು ಬಳಸುವಂತಿಲ್ಲ.

Related post

Leave a Reply

Your email address will not be published. Required fields are marked *

error: Content is protected !!