• September 8, 2024

ಬ್ರಾಹ್ಮರಿ ಪ್ರೊಡಕ್ಷನ್ಸ್ ಅರ್ಪಿಸುವ “ಕಾಣದ ಪ್ರೀತಿ” ಆಲ್ಬಂ ಸಾಂಗ್ ಬಿಡುಗಡೆ

 ಬ್ರಾಹ್ಮರಿ ಪ್ರೊಡಕ್ಷನ್ಸ್ ಅರ್ಪಿಸುವ “ಕಾಣದ ಪ್ರೀತಿ” ಆಲ್ಬಂ ಸಾಂಗ್ ಬಿಡುಗಡೆ

ಧನುಶ್ ನೆಕ್ಕಿಲಾರ್ ಇವರ ಬರಹ ಹಾಗೂ ನಿರ್ದೇಶನದಲ್ಲಿ, ಅನಂತ್ ರಾಜ್ ಪುತ್ತೂರು ಇವರ ಸಾಹಿತ್ಯದಲ್ಲಿ, ಸಂಗೀತಗಾರ ನಿಯಾಝ್ ನಿಜ್ಜು ಇವರ ಅದ್ಬುತವಾದ ಕಂಠದಲ್ಲಿ ಮೂಡಿಬಂದ ಬ್ರಾಹ್ಮರಿ ಪ್ರೊಡಕ್ಷನ್ಸ್ ಅರ್ಪಿಸುವ “ಕಾಣದ ಪ್ರೀತಿ” ಆಲ್ಬಂ ಸಾಂಗ್ ಅ.23 ರಂದು ಬಿಡುಗಡೆಗೊಂಡಿದೆ.

ಈ ವೀಡಿಯೋ ಸಾಂಗ್ ನಲ್ಲಿ ತೆರೆಯ ಮರೆಯಲ್ಲಿ ಹುಟ್ಟಿದ ಮುದ್ದಾದ ಎರಡು ಮನಸ್ಸುಗಳ ಪ್ರೀತಿಯ ಬಳ್ಳಿ ಕೊನೆಯಾಗುವ ದೃಶ್ಯ ವನ್ನು ನಟನಾಗಿ ಬಾಲಚಂದ್ರ ನೆಕ್ಕಿಲಾರ್ , ನಟಿಯಾಗಿ ಧನ್ಯಶ್ರೀ ಹಾಗೂ ಜೊತೆಯಲ್ಲಿ ಪುನೀತ್ ಪುತ್ತೂರು , ಹಾಗೂ ಕವಿತಾ ಇವರು ಮನಮುಟ್ಟುವಂತೆ ತೋರಿಸಿಕೊಟ್ಟಿದ್ದಾರೆ.

ಪ್ರದೀಪ್ ನಾಯ್ಕ್ ಇವರ ಛಾಯಾಗ್ರಹಣದ ಕೈಚಳಕ ಹಾಗೂ ಸುಂದರವಾಗಿ ಮೂಡಿದ ಎಡಿಂಗ್, ನಿರ್ಮಾಪಕ ಸಹನ್ ಯುವರಾಜ್ , ಸಹ ನಿರ್ಮಾಪಕರಾದ ಕವಿತಾ ಶ್ರೀನಿವಾಸ್, ಚರಣ್ ರಾಜ್, ಜ್ಯೋತಿ ವಿಜಯ್, ರಕ್ಷಿತ್ ಪುತ್ತೂರು, ಹರ್ಷಿತ್ ಪುತ್ತೂರು ಇವರ ಸಹಕಾರದಲ್ಲಿ, ಪರಿಶ್ರಮದಲ್ಲಿ ಯಶಸ್ವಿಯಾಗಿ ಬಿಡುಗಡೆಗೊಂಡದ್ದು, 4 ಸಾವಿರಕ್ಕೂ ಅಧಿಕ ಮಂದಿ ಕಾಣದ ಪ್ರೀತಿ ಅನ್ನುವ ಆಲ್ಬಂ ಸಾಂಗ್ ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!