ಇಂದಬೆಟ್ಟು: ಕೆಸರ್ ಡೊಂಜಿದಿನ ಕಾರ್ಯಕ್ರಮ: ಪ್ರವೀಣ್ ನನ್ನು ಮಾತ್ರ ಕೊಲೆ ಮಾಡಿಲ್ಲ, ಹಿಂದುತ್ವಗಳ ಕೊಲೆ ಮಾಡುತ್ತಿದ್ದಾರೆ- ಪ್ರಮೋದ್ ಮುತಾಲಿಕ್:
ಇಂದಬೆಟ್ಟು : ವಿಶ್ವ ಹಿಂದೂ ಪರಿಷತ್ ಭಜರಂಗದಳ ನಡ- ಕನ್ಯಾಡಿ, ನಾವೂರು , ಇಂದಬೆಟ್ಟು, ಕಡಿರುದ್ಯಾವರ, ಮಿತ್ತಬಾಗಿಲು, ಮಲವಂತಿಗೆ ಘಟಕ ಇದರ ನೇತೃತ್ವದಲ್ಲಿ ಶ್ರೀ ಗಂಗಯ್ಯ ಮುಗೇರ ದೇವನಾರಿ ಇಂದಬೆಟ್ಟುವಿನಲ್ಲಿ ನಡೆದ ಕೆಸರ್ ಡೊಂಜಿದಿನ ಕ್ರೀಡಾಕೂಟದ ಸಮಾರೋಪ ಸಮಾರಂಭವು ಇಂದು ಜರುಗಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಇಂದಬೆಟ್ಟು ವಿ.ಹಿಂ.ಪ ಅಧ್ಯಕ್ಷ ಕೆ ಚಂದ್ರಶೇಖರ ಇವರು ವಹಿಸಿದ್ದರು
ಕರ್ನಾಟಕ ಶ್ರೀ ರಾಮಸೇನೆ ಸ್ಥಾಪಕಾಧ್ಯಕ್ಷರು ಪ್ರಮೋದ್ ಮುತಾಲಿಕ್ ಇವರು ದಿಕ್ಸೂಚಿ ಭಾಷಣದಲ್ಲಿ ಕೆಸರ್ ಡೊಂಜಿ ದಿನ ಎನ್ನುವ ಕಾರ್ಯಕ್ರಮ ನೋಡಲು ಚೆಂದ. ಕಾಂತರ ಚಿತ್ರದಲ್ಲಿ ಮೂಡಿರುವ ಕಂಬಳ ಚಿತ್ರಣ ನೋಡಲು ಸಂತೋಷವಾಗುತ್ತದೆ. ಅತ್ಯಂತ ವೈಭವದಿಂದ ಚೆಂಡೆ ಭಜನೆಗಳ ಮುಖಾಂತರ ನನ್ನನ್ನು ಇಲ್ಲಿಗೆ ಭರಮಾಡಿಕೊಂಡಿದ್ದಾರೆ. ಅದು ನನಗಲ್ಲ ಅದು ನನ್ನ ಹಿಂದುತ್ವಕ್ಕೋಸ್ಕರ ವಿಜೃಂಭಣೆ. 6 ಗ್ರಾಮದ ಜನರು ಸೇರಿದ್ದಾರೆ ಅಂದರೆ ಅದು ಒಗ್ಗಟ್ಟಿಗಾಗಿ ಕೃಷಿಗಾಗಿ,ರೈತನ ನೆನಪಿಗಾಗಿ ಈ ಕೂಟ.ಹಿಂದೂಗಳನ್ನು ಮತಾಂತರ ಮಾಡಿದರು, ದಾಳಿ ಮಾಡಿದರು, ಹೆಣ್ಣು ಮಕ್ಕಳಿಗೆ ಲೈಂಗಿಕ ದೌರ್ಜನ್ಯ ವೆಸಗಿದರು ಆದರೆ ನಮಗಾಗಿ ಪ್ರಾಣ ಕೊಟ್ಟು ಸ್ವಾತಂತ್ರ್ಯ ತಂದು ಕೊಟ್ಟವರಲ್ಲಿ ಛತ್ರಪತಿ ಶಿವಾಜಿಯೊಬ್ಬರು. ಹಿಂದೂ ಕಾರ್ಯಕರ್ತ ಪ್ರವೀಣ್ ನನ್ನು ಮಾತ್ರ ಹತ್ಯೆ ಮಾಡಿದ್ದಲ್ಲ, ಹಿಂದುತ್ವಗಳ ಕೊಲೆ ಮಾಡುತ್ತಿದ್ದಾರೆ. ಹಿಂದೂ ಎನ್ನುವ ನಮ್ಮ ಮನೆಯನ್ನು ಒಡೆಯಬೇಡಿ ಎಂದು ಹಿಂದುತ್ವದ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದರು.
ಈ ವೇಳೆ ಶಾಸಕ ಹರೀಶ್ ಪೂಂಜ ಮಾತನಾಡಿ ಹಿಂದುತ್ವದ ಮುಖಾಂತರ ನಾನು ಶಾಸಕನಾಗಿ ಬಂದೆ. 5 ವರ್ಷ ಆಡಳಿತ ಮಾಡಿದ್ದೇನೆ ಆದರೆ ನನಗೆ ಪ್ರೇರಣೆ ಪ್ರಮೋದ್ ಮುತಾಲಿಕ್ ಜಿ ಯವರ ಭಾಷಣಗಳು.ಕಿರಿ ವಯಸ್ಸಿನಿಂದಲೇ ಇವರ ಭಾಷಣವನ್ನು ಕೇಳುತ್ತಾ ಬಂದಿದ್ದೇನೆ. ನಾನು ಹಿಂದುತ್ವಕ್ಕಾಗಿಯೇ ಬದುಕುತ್ತೇನೆ ಎಂದು ಹಿಂದುತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿ.ಹಿಂ.ಪ ಪುತ್ತೂರು ಜಿಲ್ಲಾ ಉಪಾಧ್ಯಕ್ಷ ರು ಭಾಸ್ಕರ್ ಧರ್ಮಸ್ಥಳ ಮಾತನಾಡಿ ಒಂದು ಸಂಘಟನೆ ಯಾವ ರೀತಿಯಾಗಿರಬೇಕು ಎಂದು ತಿಳಿಸಿಕೊಟ್ಟವರು ಪ್ರಮೋದ್ ಮುತಾಲಿಕ್ ರವರು. ಮುತಾಲಿಕ್ ರವರು ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆಯಲ್ಲಿ ಎಲ್ಲಿ ಚುನಾವಣೆಗು ನಿಂತರು ನಾವು ಗೆಲ್ಲಿಸುತ್ತೇವೆ. ಇಂದು ಯಶಸ್ವಿಯಾಗಿ ಕಾರ್ಯಕ್ರಮ ನಡೆದಿದೆ. ಸಾಕಷ್ಟು ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಇದು ಹಿಂದೂ ರಾಷ್ಟ್ರ ಎಂದು ಹಿಂದುತ್ವವನ್ನು ಶ್ಲಾಘಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿ.ಹಿಂ.ಪ ಕರ್ನಾಟಕ ದಕ್ಷಿಣ ಪ್ರಾಂತ್ಯದ ಕಾರ್ಯದರ್ಶಿ ಶರಣ್ ಪಂಪ್ ವೆಲ್, ಕರ್ನಾಟಕ ದಕ್ಷಿಣ ಪ್ರಾಂತ್ಯದ ಸಂಹಸಂಯೋಜಕರು ರಘು ಸಕಲೇಶಪುರ, ತುಳುಕೂಟ ಬರೋಡ ಅಧ್ಯಕ್ಷರು ಶಶಿಧರ್ ಶೆಟ್ಟಿ ಬರೋಡ, ವಿ.ಹಿಂ.ಪ ಬೆಳ್ತಂಗಡಿ ಪ್ರಖಂಡ ಶ್ರೀಧರ ಗುಡಿಗಾರ್, ಬಜರಂಗದಳ ಬೆಳ್ತಂಗಡಿ ಪ್ರಖಂಡ ಸಂಯೋಜಕರು ಸಂತೋಷ್ ಅತ್ತಾಜೆ, ವಿ.ಹಿಂ.ಪ ಇಂದಬೆಟ್ಟು ಗೌರವಾಧ್ಯಕ್ಷ ಜೀವಂಧರ್ ಜೈನ್ ಪಾದೆ, ವಿಶ್ವ ಹಿಂದೂ ಪರಿಷತ್ 6 ಗ್ರಾಮ ಸಮಿತಿಯ ಅಧ್ಯಕ್ಷರುಗಳು ಉಪಸ್ಥಿತರಿದ್ದರು.