• November 21, 2024

ಪುತ್ತೂರು: ಅಭಿನವ ಭಾರತ ಮಿತ್ರಮಂಡಳಿ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ” ಹಲಾಲ್ ವ್ಯಾಖ್ಯಾನ” ಅಭಿಯಾನ

 ಪುತ್ತೂರು:  ಅಭಿನವ ಭಾರತ ಮಿತ್ರಮಂಡಳಿ ಹಾಗೂ   ಹಿಂದೂ ಜನಜಾಗೃತಿ ಸಮಿತಿಯ  ವತಿಯಿಂದ ” ಹಲಾಲ್ ವ್ಯಾಖ್ಯಾನ” ಅಭಿಯಾನ

 

ಪುತ್ತೂರು: ಹಿಂದೂ ಜನಜಾಗೃತಿ ಸಮಿತಿಯು ದ್ವಿದಶಕ ಪೂರ್ಣಗೊಳಿಸಿದ ಸಂದರ್ಭದಲ್ಲಿ ಪುತ್ತೂರಿನ ಟೌನ್ ಬ್ಯಾಂಕ್ ಹಾಲ್ ನಲ್ಲಿ ಇಂದು “ಹಲಾಲ್ ವ್ಯಾಖ್ಯಾನ” ದ ಆಯೋಜನೆಯನ್ನು ಅಭಿನವ ಭಾರತ ಮಿತ್ರ ಮಂಡಳಿ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಪ್ರಮುಖ ವಕ್ತಾರರಾಗಿ ಧಾರ್ಮಿಕ ಉಪನ್ಯಾಸಕರಾದ ಕೃಷ್ಣ ಉಪಾಧ್ಯಾಯ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ರಮೇಶ ಶಿಂದೆ ಮತ್ತು ಹಿಂದೂ ಜನಜಾಗೃತಿಯ ರಾಜ್ಯ ಸಮನ್ವಯಕಾರದ ಗುರುಪ್ರಸಾದ್ ಗೌಡ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಉಪಾಧ್ಯಾಯ, ಧಾರ್ಮಿಕ ಉಪನ್ಯಾಸಕರು ಮಾತನಾಡುತ್ತಾ ಹಿಂದೂ ಜನಜಾಗೃತಿ ಸಮಿತಿಯಲ್ಲಿ ಇರುವ ಪ್ರತಿಯೊಬ್ಬ ಹಿಂದೂ ಕಾರ್ಯಕರ್ತ ಪ್ರತಿದಿನ ಸಾವಿರಾರು ರೂಪಾಯಿ ಸಂಪಾದನೆ ಮಾಡುವ ಸಾಮರ್ಥ್ಯವಿರುವವರು ಆಗಿದ್ದಾರೆ. ಆದರೆ ಇವರು ರಾಷ್ಟ್ರ ಮತ್ತು ಧರ್ಮಕ್ಕಾಗಿ ಇವರ ಸಂಪೂರ್ಣ ಜೀವನವನ್ನು ಅರ್ಪಿಸಿ ಸನ್ಯಾಸಿಯಂತೆ ಜೀವನ ಮಾಡುತ್ತಿದ್ದಾರೆ.ಇಂದಿನ ಕಾರ್ಯಕ್ರಮ ರಾಜಕೀಯ ಹಿತಾಸಕ್ತಿ, ಸ್ವ ಹಿತಾಸಕ್ತಿಯ ಉದ್ದೇಶ ಇಟ್ಟುಕೊಂಡು ಮಾಡುವುದಲ್ಲ. ಬದಲಾಗಿ ಕೇವಲ ಹಿಂದೂ ಜನ ಜಾಗೃತಿ, ಸಮಾಜ ರಕ್ಷಣೆ, ಮತ್ತು ತಮ್ಮ ಆಧ್ಯಾತ್ಮಿಕ ಉನ್ನತಿಯಾಗಿ ಗುರುಕೃಪೆಯಾಗಬೇಕೆಂದು ಆಯೋಜಿಸಲಾಗಿದೆ. ಕೆಲವು ಕಾರ್ಯಕ್ರಮದಲ್ಲಿ ಹಿಂದೂ ಭಾಂದವರು ಹಿಂದೂಗಳ ಅಂಗಡಿಯಿಂದ ವ್ಯಾಪಾರ ಮಾಡಬೇಕು ಎಂದು ಹೇಳುತ್ತಾರೆ ಆದರೆ ಹಿಂದೂಗಳ ಅಂಗಡಿಯಲ್ಲಿ ಹಲಾಲ್ ವಸ್ತುಗಳು ಸಿಗುತ್ತವೆ. ಹಾಗಾಗಿ ನಾವು ಹಿಂದೂಗಳು ಹಿಂದೂಗಳಿಗಾಗಿ ವ್ಯಾಪಾರದಲ್ಲಿ “ಹಲಾಲ್” ರಹಿತ ವಸ್ತುಗಳನ್ನು ಬಳಸಿಕೊಳ್ಳುವ ಮೂಲಕ ಪರ್ಯಾಯ ವ್ಯವಸ್ತೆಯನ್ನು ಮಾಡಿ ಹಲಾಲ್ ಅರ್ಥವ್ಯವಸ್ಥೆಯನ್ನು ಸಂಪೂರ್ಣವಾಗಿ ಬಹಿಷ್ಕರಿಸಬೇಕು ಎಂದು ಹೇಳಿದರು.

“ಹಲಾಲ್” ಕೇವಲ ಧರ್ಮಕ್ಕೆ ಸಂಬಂಧಿಸದೆ ಇಂದು ಇಸ್ಲಾಮಿ ಆರ್ಥಿಕ ವ್ಯವಸ್ಥೆಯಾಗುತ್ತಿದೆ. ಹಲಾಲ್ ಮೂಲಕ ವಿಶ್ವದ ಮೇಲೆ ಸಂಪೂರ್ಣ ನಿಯಂತ್ರಣ ಮಾಡುವ ಪ್ರಯತ್ನವಾಗಿದೆ. ಭಾರತದಲ್ಲಿ ಪರ್ಯಾಯ ಸಮಾನಾಂತರ ಅರ್ಥವ್ಯವಸ್ಥೆಯನ್ನು ನಿರ್ಮಾಣ ಮಾಡುವುದಾಗಿದೆ. ಮಾಂಸದಿಂದ ಪ್ರಾರಂಭವಾದ ಹಲಾಲ್ ಇಂದು ಔಷಧಿ, ಕಟ್ಟಡ, ಬಟ್ಟೆ, ಪ್ರವಾಸೊದ್ಯಮ, ಸ್ಟಾಕ್ ಮಾರ್ಕೆಟ್, ಹೀಗೆ ಎಲ್ಲ ಕ್ಷೇತ್ರವನ್ನು ವ್ಯಾಪಿಸಿ ವಿಶ್ವದ 2 ಯುಎಸ್ ಟ್ರಿಲಿಯನ್ ಡಾಲರ್ economy ಆಗಿದೆ. ಭಾರತದಲ್ಲಿ 4 ಲಕ್ಷ ಕೋಟಿ ಮಾಂಸದ ವ್ಯಾಪಾರದ ಮೇಲೆ ನಿಯಂತ್ರಣ ಸಾಧಿಸಲಾಗಿದೆ. ಭಾರತದಲ್ಲಿ FSSAI, FDA ನಂತರ ಪ್ರಮಾಣಪತ್ರ ನೀಡುವ ಸರಕಾರಿ ಸಂಸ್ಥೆಗಳು ಇರುವಾಗ ಪ್ರತ್ಯೇಕ ಮತದ ಆಧಾರದ ಮೇಲೆ ಪ್ರಮಾಣಪತ್ರ ನೀಡಿ, ಹಣ ಸಂಗ್ರಹ ಮಾಡುವುದು ಅತ್ಯಂತ ಅಪಾಯಕಾರಿಯಾಗಿದೆ.ಇದರ ಹಣ ಭಯೋತ್ಪಾಧನಾ ಚಟುವಟಿಕೆಗಳಿಗೆ ಉಪಯೋಗ ಮಾಡಲಾಗುತ್ತಿದೆ. ಇದು ಹಿಂದೂಗಳ ಮೇಲೆ ಮಾಡಿದ ಜಿಜಿಯಾ ತಲೆದಂಡವಾಗಿದೆ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ರಮೇಶ್ ಶಿಂದೆ ಹೇಳಿದರು.

ಹಾಗೆಯೇ ಹಿಂದೂ ಜನ ಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಗುರುಪ್ರಸಾದ ಗೌಡ ಇವರು ಮಾತನಾಡುತ್ತಾ ಈ ಸಲದ ದೀಪಾವಳಿಯನ್ನು ಹಲಾಲ್ ಮುಕ್ತವಾಗಿ ಆಚರಿಸೋಣ ಮತ್ತು ಇಡೀ ವಿಶ್ವದಲ್ಲಿ ಹಲಾಲ್ ಅರ್ಥವ್ಯವಸ್ಥೆಯನ್ನು ಬಹಿಷ್ಕರಿಸೋಣ ಎಂದು ಹೇಳಿದರು.

ಮಾಜಿ ನಗರ ಸಭೆ ಅದ್ಯಕ್ಷರಾದ ರಾಜೇಶ್ ಬನ್ನೂರು, ಟೌನ್ ಬ್ಯಾಂಕ್ ನಿರ್ದೇಶಕರಾದ ಚಂದ್ರ ಶೇಖರ್ ಬಪ್ಪಲಿಗೆ, ನಗರ ಸಭ ಅದ್ಯಕ್ಷರಾದ ಪುತ್ತೂರಿನ ಪ್ರಥಮ ಪ್ರಜೆ ಜೀವಂದರ್ ಜೈನ್, ಅಂಬಿಕ ಕಾಲೇಜು ಸಂಚಲಾಕರಾದ ಸುಬ್ರಹ್ಮಣ್ಯ ನಟ್ಟೋಜ,ಹಿಂದೂ ಜಾಗರಣ ವೇದಿಕೆ ಪ್ರಾಂತ್ಯ ಪ್ರಮುಖರಾದ ಚಿನ್ಮಯಿ , ಪುತ್ತಿಲ ಹಿಂದೂ ಮುಖಂಡರಾದ ಅರುಣ್ ಕುಮಾರ್, ನಗರ ಸಭೆಯ ಉಪಾಧ್ಯಕ್ಷರಾದ ವಿಧ್ಯಗೌರಿ ಪುತ್ತೂರು ಮತ್ತಿತರ ಗಣ್ಯ ವ್ಯಕ್ತಿಗಳು ಮತ್ತು ಸುಮಾರು 170ಕ್ಕೊ ಹೆಚ್ಚು ಧರ್ಮಾಭಿಮಾನಿಗಳು ಸಹಭಾಗಿಯಾಗಿದ್ದರು.

Related post

Leave a Reply

Your email address will not be published. Required fields are marked *

error: Content is protected !!