• December 8, 2024

ಡೆಂಗ್ಯೂ ರೋಗಿಗೆ ರಕ್ತದ ಪ್ಲಾಸ್ಮಾ ಬದಲು ಮೊಸಂಬಿ ಜ್ಯೂಸ್ ಡ್ರಿಪ್ ಹಾಕಿದ ವೈದ್ಯರು: ರೋಗಿ ಸಾವು, ಆಸ್ಪತ್ರೆ ಸೀಲ್

 ಡೆಂಗ್ಯೂ ರೋಗಿಗೆ ರಕ್ತದ ಪ್ಲಾಸ್ಮಾ ಬದಲು ಮೊಸಂಬಿ ಜ್ಯೂಸ್ ಡ್ರಿಪ್ ಹಾಕಿದ ವೈದ್ಯರು: ರೋಗಿ ಸಾವು, ಆಸ್ಪತ್ರೆ ಸೀಲ್

 

ಯಾವುದೇ ಸಮಸ್ಯೆ ಎದುರಾದರೂ ಮೊದಲು ವೈದ್ಯರನ್ನು ಭೇಟಿಯಾಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವುದು ಸಹಜ. ವೈದ್ಯರು ಏನೇ ಸಲಹೆ ಸೂಚನೆಗಳನ್ನು ನೀಡಿದರು ಕೂಡ ಕಣ್ಮುಚ್ಚಿ ಅವರು ಹೇಳಿದ್ದನ್ನು ಶಿರಸಾ ಪಾಲಿಸುವ ಪ್ರಮೇಯ ಹೆಚ್ಚಿನವರಿಗೆ ಇದೆ. ಏಕೆಂದರೆ ಪ್ರತಿಯೊಬ್ಬರಿಗೂ ಆರೋಗ್ಯವೇ ಮುಖ್ಯ ಆದರೆ ಜನರು ನಂಬಿ ಸೇವೆ ಪಡೆಯುವ ಆಸ್ಪತ್ರೆಯಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸಿದರೆ ಜನರ ಜೀವಕ್ಕೆ ಕುತ್ತು ಬರುವುದರಲ್ಲಿ ಸಂಶಯವಿಲ್ಲ.

ಡೆಂಗ್ಯೂ ರೋಗಿಗೆ ರಕ್ತದ ಪ್ಲೇಟ್ ಲೆಟ್ ನೀಡುವ ಬದಲಿಗೆ ಹಣ್ಣಿನ ರಸವನ್ನು ವರ್ಗಾಯಿಸಿದ ಆರೋಪದ ಮೇಲೆ ಉತ್ತರಪ್ರದೇಶದ ಖಾಸಗಿ ಆಸ್ಪತ್ರೆಯೊಂದರನ್ನು ಸೀಲ್ ಮಾಡಿರುವ ಘಟನೆ ನಡೆದಿದೆ.

ಉತ್ತರ ಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ ಪ್ಲೇಟ್ ಲೆಟ್ ಗಳನ್ನು ಬೇರೆ ಕಡೆಯಿಂದ ತರಿಸಿ ನೀಡಲಾಗುತ್ತಿತ್ತು ಎಂದು ತಿಳಿದು ಬಂದಿದೆ. ರಕ್ತದ ಪ್ಲೇಟ್ ಲೆಟ್ ನೀಡುವ ಬದಲಿಗೆ ಹಣ್ಣಿನ ರಸವನ್ನು ವರ್ಗಾಯಿಸಿದ ಘಟನೆ ನಡೆದಿದ್ದು, ಇದರ ಕುರಿತಾದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದರಿಂದ ಜಿಲ್ಲಾಡಳಿತವು ಕ್ರಮ ಕೈಗೊಂಡಿದೆ.

ಡೆಂಗ್ಯೂ ನಿಂದ ಬಳಲುತ್ತಿದ್ದ ಪ್ರದೀಪ್ ಪಾಂಡೆ ಅವರನ್ನು ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಅವರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಯಾವುದೇ ಎಫ್ ಐ ಆರ್ ಕೂಡ ದಾಖಲಾಗಿಲ್ಲ ಎಂಬುವುದು ಅಚ್ಚರಿಯ ಜೊತೆಗೆ ಅನುಮಾನ ಹುಟ್ಟುಹಾಕಿದೆ. ಆದರೆ ಆಸ್ಪತ್ರೆಯ ಮೂಲಗಳು ರೋಗಿ ಪ್ರದೀಪ್ ಪಾಂಡೆ ಎಂಬುವವರ ಪ್ಲೇಟ್ ಲೆಟ್ ಗಳ ಮಟ್ಟ 17,000ಕ್ಕೆ ಇಳಿದಿದ್ದರಿಂದ ಅವರ ಸಂಬಂಧಿಕರಿಗೆ ರಕ್ತದ ಪ್ಲೇಟ್ ಲೆಟ್ ವ್ಯವಸ್ಥೆ ಮಾಡಲು ಕೇಳಲಾಗಿತ್ತು ಎಂದು ಆಸ್ಪತ್ರೆಯ ಮಾಲಿಕ ಸೌರಭ್ ಮಿಶ್ರಾ ಹೇಳಿದ್ದಾರೆ.

ಇದಲ್ಲದೆ ಎಸ್ ಆರ್ ಎನ್  ಆಸ್ಪತ್ರೆಯಿಂದ ಐದು ಯೂನಿಟ್ ಪ್ಲೇಟ್ ಲೆಟ್ ಗಳನ್ನು ತಂದು ಕೊಟ್ಟಿದ್ದು ಮೂರು ಯೂನಿಟ್ ಗಳ ವರ್ಗಾವಣೆವರೆಗೂ ರೋಗಿ ಪ್ರತಿಕ್ರಿಯಿಸುತ್ತಲೇ ಇದ್ದುದಾಗಿ ತಿಳಿಸಿದ್ದಾರೆ. ಹಾಗಾಗಿ ಪ್ಲೇಟ್ ಲೆಟ್ ಯೂನಿಟ್ ನಿಡುವುದನ್ನು ನಿಲ್ಲಿಸಿರುವುದಾಗಿ ಮಿಶ್ರಾ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ನಿರ್ದೇಶನದ ಮೇರೆಗೆ ಆಸ್ಪತ್ರೆಗೆ ಸೀಲ್ ಮಾಡಲಾಗಿದೆ.

Related post

Leave a Reply

Your email address will not be published. Required fields are marked *

error: Content is protected !!