• December 6, 2024

ಉಜಿರೆ: ಸಾನಿಧ್ಯ ಕೇಂದ್ರದ ಮಕ್ಕಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಕನಸಿನ ಮನೆ ನಾವಿಕ ಮೋಹನ್ ಕುಮಾರ್

 ಉಜಿರೆ: ಸಾನಿಧ್ಯ ಕೇಂದ್ರದ ಮಕ್ಕಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಕನಸಿನ ಮನೆ ನಾವಿಕ ಮೋಹನ್ ಕುಮಾರ್

 

ಉಜಿರೆ: ಕನಸಿನ ಮನೆ ನಾವಿಕ, ವಿಜಯ ರತ್ನ ಪ್ರಶಸ್ತಿ ಪುರಸ್ಕೃತ , ಉಜಿರೆಯ ಲಕ್ಷ್ಮೀ ಇಂಡಸ್ಟ್ರೀಸ್ ಮಾಲಕ , ಬದುಕುಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ಅವರ ಹುಟ್ಟುಹಬ್ಬವನ್ನು ಉಜಿರೆಯ ಛತ್ರಪತಿ ಶಿವಾಜಿ ಸೇವಾ ಟ್ರಸ್ಟ್ ವಿಶೇಷವಾಗಿ ಉಜಿರೆಯ ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದಲ್ಲಿ ವಿಶೇಷ ಚೇತನ ಮಕ್ಕಳೊಂದಿಗೆ ಬೆರೆತು ಅ.2 ರಂದು ಜನುಮದಿನವನ್ನು ಆಚರಿಸಿಕೊಂಡರು.

ಸಾನಿಧ್ಯ ಕೇಂದ್ರದ ಸಂತ್ರಸ್ತ ಮಕ್ಕಳಿಂದಲೇ ಕೇಕ್ ಕತ್ತರಿಸುವ ಮೂಲಕ ಮೋಹನ್ ಕುಮಾರ್ ಜನುಮ ದಿನವನ್ನು ವಿನೂತನವಾಗಿ ಆಚರಿಸಿ ಮಾತನಾಡಿದ ಅವರು ಇಂದು ಸಾನಿಧ್ಯ ಕೇಂದ್ರದಲ್ಲಿ ದೇವರ ಮಕ್ಕಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿರುವುದು ನನಗೆ ತುಂಬ ಸಂತಸವನ್ನು ತಂದಿದೆ. ಸಮಾಜ ಸೇವೆಗಳನ್ನು ಮಾಡುತ್ತಾ ಬಂದಿದ್ದರೂ ಸಹ ಅದರ ಹಿಂದೆ ಒಂದಷ್ಟು ವ್ಯಕ್ತಿಗಳಿದ್ದಾರೆ. ನನ್ನ ಜೀವನದಲ್ಲಿ ಇಂದಿನ ದಿನವನ್ನು ಯಾವತ್ತೂ ಮರೆಯುವುದಿಲ್ಲ. ಇನ್ನಷ್ಟು ಸಮಾಜ ಸೇವೆಯನ್ನು ಮಾಡುವ ಅವಕಾಶ ನನಗೆ ಒದಗಿ ಬರಲಿ. ಛತ್ರಪತಿ ಶಿವಾಜಿ ಸೇವಾ ಟ್ರಸ್ಟ್ ಸರ್ವಸದಸ್ಯರಿಗೂ ಧನ್ಯವಾದವನ್ನು ಅರ್ಪಿಸಿದರು.

ಸಾನಿಧ್ಯ ಕೇಂದ್ರದ ಸಲಹೆಗಾರರಾದ ಪ್ರಮೋದ್ ಆರ್ ನಾಯಕ್ ಮಾತನಾಡಿ ಬೆಳ್ತಂಗಡಿ ತಾಲೂಕಿನಲ್ಲಿ ಬದುಕುಕಟ್ಟೋಣ ಬನ್ನಿ ಸಂಸ್ಥೆ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿದೆ. ಮೋಹನ್ ಕುಮಾರ್ ಹಾಗೂ ರಾಜೇಶ್ ಪೈ ನೇತೃತ್ವದಲ್ಲಿ ನೆರೆ ಹಾನಿಗೆ ಒಳಗಾದ ಚಾರ್ಮಾಡಿಯ 12 ಮನೆಗಳಿಗೆ ನೂತನ ಮನೆ ನಿರ್ಮಿಸಿ ಹೊಸ ಬದುಕನ್ನು ಕಟ್ಟಿಕೊಟ್ಟಿದ್ದಾರೆ. ಇತ್ತೀಚೆಗೆ ಬಡ ಅಕ್ಕ ತಂಗಿಯ ವಿದ್ಯಾಭ್ಯಾಸದ ಪೂರ್ಣ ಜವಬ್ದಾರಿಯನ್ನು ಹೊತ್ತು ಮಕ್ಕಳ ಬದುಕಿಗೆ ಬೆಳಕಾಗಿದ್ದಾರೆ. ಮಹಾತ್ಮ ಗಾಂಧಿಜಿಯಂತ ಮಹಾಪುರುಷ ಮೋಹನ್ ಕುಮಾರ್ ಎಂದು ಹೇಳಿದರು.

ಹುಟ್ಟುಹಬ್ಬದ ಪ್ರಯುಕ್ತ ಎಲ್ಲರಿಗೂ ಹಾಟ್ ಬಾಕ್ಸ್ ಹಾಗೂ ಸಿಹಿತಿಂಡಿಯನ್ನು ಹಂಚುವ ಮೂಲಕ ಸಂಭ್ರಮ ಪಟ್ಟರು.

ಈ ಸಂದರ್ಭದಲ್ಲಿ ಮೋಹನ್ ಕುಮಾರ್ ಧರ್ಮಪತ್ನಿ ರೇಷ್ಮಾ, ಉದ್ಯಮಿಗಳಾದ ರಾಜೇಶ್ ಪೈ, ರಾಮಚಂದ್ರ ಶೆಟ್ಟಿ, ಲಕ್ಷ್ಮಣ ಸಪಲ್ಯ , ಪ್ರಮೋದ್ ಆರ್ ನಾಯಕ್, ಶಿವಾಜಿ ಸೇವಾ ಟ್ರಸ್ಟ್ ನ ಅರವಿಂದ್ ಕಾರಂತ್, ಛತ್ರಪತಿ ಶಿವಾಜಿ ಸೇವಾ ಟ್ರಸ್ಟ್ ನ ಸರ್ವಸದಸ್ಯರು, ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರದ ಮಲ್ಲಿಕಾ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಶಶಿಧರ್ ಕಲ್ಮಂಜ ನಿರೂಪಿಸಿದರು.

Related post

Leave a Reply

Your email address will not be published. Required fields are marked *

error: Content is protected !!