• October 14, 2024

ಬಜಗೋಳಿ ಪದವಿಪೂರ್ವ ಕಾಲೇಜಿನ ದಶಮಾನೋತ್ಸವ ವಾರ್ಷಿಕ ವಿಶೇಷ ಶಿಬಿರ

 ಬಜಗೋಳಿ ಪದವಿಪೂರ್ವ ಕಾಲೇಜಿನ ದಶಮಾನೋತ್ಸವ ವಾರ್ಷಿಕ ವಿಶೇಷ ಶಿಬಿರ

 

ಬಜಗೋಳಿ: ವಿದ್ಯಾರ್ಥಿ ಯುವ ಜನರ ದೃಷ್ಟಿ, ಗ್ರಾಮಭಾರತದಲ್ಲಿ ಸರ್ವೋದಯದ ಸೃಷ್ಟಿ ಶಿರೋನಾಮೆಯಡಿಯಲ್ಲಿ ನಡೆಯಲ್ಪಡುವ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಹತ್ತನೇ ವರ್ಷದ ವಾರ್ಷಿಕ ವಿಶೇಷ ಶಿಬಿರ – 2022 ರ ಉದ್ಘಾಟನಾ ಕಾರ್ಯಕ್ರಮವು ಸರಕಾರಿ ಪ್ರೌಢಶಾಲೆ ಬಜಗೋಳಿಯ ಸಭಾಂಗಣದಲ್ಲಿ ಜರುಗಿತು.

ಗ್ರಾಮ ಪಂಚಾಯತ್ ಮುಡಾರು ಇದರ ಅಧ್ಯಕ್ಷರಾದ ಶ್ರೀ ಸುರೇಶ್ ಶೆಟ್ಟಿ ಧ್ವಜಾರೋಹಣವನ್ನು ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ಕಾರ್ಯಕ್ರಮದ ಉದ್ಘಾಟಕರಾದ ನಿಕಟ ಪೂರ್ವ ರಾಜ್ಯ ಎನ್.ಎಸ್.ಎಸ್ ಅಧಿಕಾರಿಗಳು, ಪದವಿ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರು ಆಗಿರುವ ಡಾ. ಗಣನಾಥ ಎಕ್ಕಾರು ಇವರು ದೀಪ ಪ್ರಜ್ವಲನೆ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ
ಮಾತನಾಡಿ ಪ್ರತಿಯೊಬ್ಬ ಮನುಷ್ಯನ ವೈಯಕ್ತಿಕ ಬದುಕಿನಲ್ಲಿ ಆದರ್ಶಗಳು ಮೌಲ್ಯಗಳು ಮೇಳೈಸಬೇಕಾದರೆ ಶಿಸ್ತು ರೂಢಿಗೊಳ್ಳಬೇಕು, ಜ್ಞಾನ, ಕೌಶಲ್ಯ, ಆರೋಗ್ಯ, ಸಮಯದ ಸರಿಯಾದ ಪರಿಪಾಲನೆ ಜೊತೆಗೆ ಮನುಷ್ಯನನ್ನು ಒಬ್ಬ ಉತ್ತಮ ನಾಗರಿಕನನ್ನಾಗಿ ರೂಪಿಸಿಕೊಳ್ಳಲು ವ್ಯಕ್ತಿಗತ ಶಿಸ್ತು ಅತ್ಯಗತ್ಯ, ಇಂತಹ ಶಿಸ್ತನ್ನು ರಾಷ್ಟ್ರೀಯ ಸೇವಾ ಯೋಜನೆಯು ಶಿಕ್ಷಣದ ಜೊತೆಜೊತೆಗೆ ನೀಡುತ್ತಿದ್ದು ವಿದ್ಯಾರ್ಥಿ ಸಮಾಜ ರೂಢಿಸಿಕೊಂಡು ಸಮಾಜಮುಖಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಕೃಷ್ಣಕುಮಾರ್ N E. ಇವರ ವತಿಯಿಂದ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ 6 ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು

ಎನ್ .ಎಸ್ .ಎಸ್. ಘಟಕದ ವತಿಯಿಂದ 3ಬಾರಿ ಹಿಮಾಲಯ ಪರ್ವತಾರೋಹಣ ಶಿಬಿರದಲ್ಲಿ ಭಾಗವಹಿಸಿದ್ದ ಕುಮಾರಿ ಸುಮಲತಾ ಹಾಗೂ ಸಂಸ್ಥೆಯ ಕಾರ್ಯಕ್ರಮಗಳನ್ನು ಯೂಟ್ಯೂಬ್ ಗಳಲ್ಲಿ ಪ್ರಚಾರಗೊಳಿಸುತ್ತಿರುವ ಹಾಗೂ ಕಾಲೇಜಿನ ಕೈತೋಟಗಳ ಸುಂದರೀಕರಣದಲ್ಲಿ ಪ್ರಮುಖ ಪಾತ್ರವಹಿಸಿದ ಪ್ರಶಾಂತ್ ಆಚಾರ್ಯ ಇವರನ್ನು ಸನ್ಮಾನಿಸಲಾಯಿತು

ಇದೇ ಸಂದರ್ಭದಲ್ಲಿ ಕಳೆದ ಹತ್ತು ವರ್ಷಗಳ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರಗಳ ಯಶಸ್ಸಿಗೆ ಕಾರಣಕರ್ತರಾದ ಶ್ರೀ ಮಹಾವೀರ ಜೈನ್ ಹಾಗೂ ಉಮೇಶ್ ರಾವ್ , ಕೃಷ್ಣ ಕುಮಾರ್ N.E ಹಾಗೂ ವಿಶ್ರಾಂತ ಪ್ರಾಂಶುಪಾಲ ಗಣೇಶ್ ಬರ್ಲಾಯ ಇವರನ್ನು ಸನ್ಮಾನಿಸಲಾಯಿತು

ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಮಹಾವೀರ ಜೈನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ ಪಿ ಲಕ್ಷ್ಮೀನಾರಾಯಣ ಸ್ವಾಗತಿಸಿ
ಉಪನ್ಯಾಸಕರಾದ ಬಾಲಕೃಷ್ಣ ರಾವ್ ವಂದಿಸಿದರು , ಶ್ರೀಮತಿ ಶ್ಯಾಮಲಾ ಕಾರ್ಯಕ್ರಮ ನಿರೂಪಿಸಿದರು

ವೇದಿಕೆಯಲ್ಲಿ ಪ್ರೌಢಶಾಲಾ ವಿಭಾಗದ ಮುಖ್ಯಸ್ಥರಾದ ಶ್ರೀ ಬಸವರಾಜ ತಾವರಗಿ, ವಿಶ್ರಾಂತ ಪ್ರಾಂಶುಪಾಲರಾದ ಶ್ರೀ ಗಣೇಶ್ ಬರ್ಲಾಯ, ಶ್ರೀ ಉಮೇಶ್ ರಾವ್, ಶ್ರೀ ಕೃಷ್ಣಕುಮಾರ್ N .E ಶ್ರೀ ಚಂದ್ರಶೇಖರ್, ಶ್ರೀ ಕೃಷ್ಣ ಎಲ್. ಶೆಟ್ಟಿ, ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!