• October 16, 2024

ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆಯ ಪ್ರಯುಕ್ತ ಉಜಿರೆಯಲ್ಲಿ ಗಾಲಿಕುರ್ಚಿ ಜಾಥಾ.

 ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆಯ ಪ್ರಯುಕ್ತ ಉಜಿರೆಯಲ್ಲಿ ಗಾಲಿಕುರ್ಚಿ ಜಾಥಾ.

 

ಸೇವಾಭಾರತಿ (ರಿ.),ಕನ್ಯಾಡಿ-ಸೇವಾಧಾಮ ಇದರ ನೇತೃತ್ವದಲ್ಲಿ ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ರಾಷ್ಟ್ರೀಯ ಸೇವಾ ಯೋಜನೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆ ಇವುಗಳ ಸಹಭಾಗಿತ್ವದಲ್ಲಿ ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆಯ ಪ್ರಯುಕ್ತ ಗಾಲಿಕುರ್ಚಿ ಜಾಥಾ ಮತ್ತು ಬೆನ್ನುಹುರಿ ಅಪಘಾತದ ಬಗ್ಗೆ ಮಾಹಿತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭವು ಸಪ್ಟೆಂಬರ್ 21 ರಂದು ಶ್ರೀ ಶಾರದಾ ಮಂಟಪ, ಉಜಿರೆಯಲ್ಲಿ ನಡೆಯಿತು.

ಕರ್ನಾಟಕ ಸರಕಾರದ ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಪ್ರತಾಪಸಿಂಹ ನಾಯಕ್ ಇವರು ಹಸಿರು ನಿಶಾನೆಯನ್ನು ತೋರಿಸಿ ಜಾಥಾಕ್ಕೆ ಚಾಲನೆಯನ್ನು ನೀಡಿದರು. ಬೆನ್ನುಹುರಿ ಅಪಘಾತದ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿಗಾಗಿ SDM PG Centre ಪಾರ್ಕಿಂಗ್ ನಿಂದ ಪ್ರಾರಂಭಿಸಿ ಉಜಿರೆ ಸರ್ಕಲ್ ಮುಖಾಂತರ ಶ್ರೀ ಶಾರದಾ ಮಂಟಪಕ್ಕೆ ಜಾಥಾವನ್ನು ಮಾಡಲಾಯಿತು. ಒಟ್ಟು 21 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರೊಂದಿಗೆ ಸೇವಾಭಾರತಿ ಹಿತೈಷಿಗಳು, ಸಿಬ್ಬಂದಿವರ್ಗ ಹಾಗೂ ಉಜಿರೆಯ ಎಸ್ ಡಿ ಎಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸ್ವಯಂಸೇವಕರು ಸೇರಿದಂತೆ 150 ಮಂದಿ ಜಾಥಾದಲ್ಲಿ ಭಾಗವಹಿಸಿದ್ದರು.

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಹರೀಶ್ ಪೂಂಜ ಕಾರ್ಯಕ್ರಮವನ್ನು ಉದ್ಘಾಟಿಸಿ, ಸೇವಾಧಾಮ ಸಂಸ್ಥೆಯು ಮಾಡುತ್ತಿರುವ ಸೇವಾ ಕಾರ್ಯಗಳ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಒಟ್ಟು 6 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಸೆಲ್ಫ್ ಕೇರ್ ಕಿಟ್ ಮತ್ತು ಇಬ್ಬರಿಗೆ ಬೆಡ್ ಗಳನ್ನು ಪ್ರಭಾಕರ ಮಹಾವೀರ ಏಜೆನ್ಸಿ, ಉಜಿರೆ ಇವರು ಹಸ್ತಾಂತರಿಸಿದರು. ದಿವ್ಯಾಂಗರಿಗೆ ತಜ್ಞ ವೈದ್ಯರೊಂದಿಗೆ ಸಮಾಲೋಚನೆಯನ್ನು ನಡೆಸಲಾಯಿತು .

ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತಸರರಾದ ಶ್ರೀ ಶರತ್ ಕೃಷ್ಣಪಡ್ವೆಟ್ನಾಯ, ರೊ| ಪ್ರಕಾಶ್ ಪ್ರಭು ರೋಟರಿ ಕ್ಲಬ್ ಬೆಳ್ತಂಗಡಿ, ಡಾ| ಮಹೇಶ್ ಶೆಟ್ಟಿ ಯೋಜನಾಧಿಕಾರಿಗಳು ರಾಷ್ಟ್ರೀಯ ಸೇವಾ ಯೋಜನೆ SDM ಕಾಲೇಜು ಉಜಿರೆ, ಶ್ರೀ ಕೆ. ಪುರಂದರ ರಾವ್ ಸೇವಾಧಾಮ ಸಂಚಾಲಕರು, ಶ್ರೀಮತಿ ದೀಪಾ ಆರ್ ಪಿ ಯೋಜನಾಧಿಕಾರಿಗಳು NSS, SDM ಕಾಲೇಜು ಉಜಿರೆ, ಸೇವಾಭಾರತಿ ಕನ್ಯಾಡಿಯ ಅಧ್ಯಕ್ಷರಾದ ಶ್ರೀಮತಿ ಸ್ವರ್ಣಗೌರಿ, ಡಾ| ಆನ್ ಮೇರಿ ಜಾನ್ M D PMR, KMC ಮಂಗಳೂರು ಇವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸೇವಾಧಾಮ ಸಂಸ್ಥಾಪಕರಾದ ಕೆ ವಿನಾಯಕ ರಾವ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಸೇವಾಭಾರತಿಯ ಕಾರ್ಯದರ್ಶಿ ಬಾಲಕೃಷ್ಣ ಸ್ವಾಗತಿಸಿ, NSS ಸ್ವಯಂಸೇವಕಿ ವರ್ಷ ವಿ ಕಾರ್ಯಕ್ರಮವನ್ನು ನಿರೂಪಿಸಿ, NSS ಸ್ವಯಂಸೇವಕ ಸುದರ್ಶನ್ ಧನ್ಯವಾದವಿತ್ತರು.

Related post

Leave a Reply

Your email address will not be published. Required fields are marked *

error: Content is protected !!