ಹಿಂದೂ ಜನಜಾಗೃತಿ ಸಮಿತಿಯ ದ್ವಿದಶಕ ವರ್ಧಂತ್ಯೋತ್ಸವದ ಪ್ರಯುಕ್ತ ಹಿಂದೂ ರಾಷ್ಟ್ರ ಸಂಕಲ್ಪಾಭಿಯಾನ: ಹಿಂದೂಗಳ ಸಮಸ್ಯೆಗಳಿಗೆ ಒಂದೇ ಪರಿಹಾರ “ಹಿಂದೂರಾಷ್ಟ್ರ” – ಚೇತನ್ ರಾಜಹಂಸ
ಬೆಳ್ತಂಗಡಿ: ಹಿಂದೂ ರಾಷ್ಟ್ರ ಸಂಕಲ್ಪ ಅಭಿಯಾನದ ನಿಮಿತ್ತ ಶ್ರೀ ಜನಾರ್ದನ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾ ಮಂಟಪ, ಉಜಿರೆ ಹಾಗೂ ಸುವರ್ಣ ಆರ್ಕೆಡ್ ಸಂತೆಕಟ್ಟೆ ಬಳಿ ಬೆಳ್ತಂಗಡಿಯಲ್ಲಿ ಪ್ರವಚನ ನಡೆಯಿತು.
ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಚೇತನ್ ರಾಜಹಂಸ ಇವರು ಧರ್ಮಾಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುತ್ತಾ – ಸಮಾಜದಲ್ಲಿ ಇಂದು ಭ್ರಷ್ಟಾಚಾರ, ಮತಾಂತರ, ಲವ್ ಜಿಹಾದ್,ಗೋಹತ್ಯೆ ಮುಂತಾದವುಗಳು ತಾಂಡವವಾಡುತ್ತಿದೆ. ಇದಕ್ಕೆ ಕಾನೂನಿನಲ್ಲಿ ತಡೆಹಿಡಿಯುವ ಅವಕಾಶವಿದ್ದರೂ ವ್ಯವಸ್ಥೆ ಸರಿಯಿಲ್ಲದ ಕಾರಣ ಇದರ ತೊಂದರೆಯನ್ನು ಪ್ರತಿಯೊಬ್ಬರು ಅನುಭವಿಸುತಿದ್ದಾರೆ. ಕಾನೂನಿನ ಮುಖಾಂತರ ಹೋರಾಟ ಮಾಡಲು ಕೋರ್ಟಿನಲ್ಲಿ ಸುಮಾರು 3 ಕೋಟಿಯಷ್ಟು ಕೇಸ್ ಗಳು (ಅರ್ಜಿಗಳು) ಇತ್ಯರ್ಥ ಆಗದೆ ಬಾಕಿ ಉಳಿದಿದೆ. ಇದರಿಂದ ನಮ್ಮ ಸಮಸ್ಯೆಗೆ ಪರಿಹಾರ ಸಿಗಲೂ ಸಾಧ್ಯವಿದೆಯೇ? ಈ ಎಲ್ಲಾ ಸಮಸ್ಯೆಗಳಿಗೆ ಪ್ರತಿಯೊಬ್ಬ ಹಿಂದೂಗಳಲ್ಲಿ ಹಿಂದೂರಾಷ್ಟ್ರ ಸ್ಥಾಪನೆಯ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ಇದಕ್ಕಾಗಿ ಧರ್ಮಾದಿಷ್ಠಿತ ಹಿಂದೂರಾಷ್ಟ್ರ ಸ್ಥಾಪನೆಯೊಂದೇ ಗುರಿ ಎಂದು ಧರ್ಮಾಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು.
ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಗುರುಪ್ರಸಾದ್ ಗೌಡ ಇವರು ಮಾತನಾಡುತ್ತಾ – ಹೇಗೆ ಸೂರ್ಯೋದಯ ಆಗುವಾಗ ಕತ್ತಲೆ ತನ್ನಷ್ಟಕ್ಕೆ ದೂರವಾಗುತ್ತದೆಯೋ ಅದೇ ರೀತಿ ಹಿಂದೂರಾಷ್ಟ್ರ ಸ್ಥಾಪನೆಯಾದರೆ ತನ್ನಷ್ಟಕ್ಕೇ ಭ್ರಷ್ಟಾಚಾರ, ಲವ್ ಜಿಹಾದ್, ಮತಾಂತರ, ಗೋಹತ್ಯೆ ಇದು ನಿಲ್ಲಲಿಕ್ಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ “ಹಿಂದೂ ರಾಷ್ಟ್ರ” ಸ್ಥಾಪನೆಯ ಪ್ರತಿಜ್ಞೆಯನ್ನು ಮಾಡಲಾಯಿತು.
ಕಾರ್ಯಕ್ರಮದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕರಾದ ಚಂದ್ರ ಮೊಗೇರ, ಸನಾತನ ಸಂಸ್ಥೆಯ ದಕ್ಷಿಣ ಕರ್ನಾಟಕ ಜಿಲ್ಲೆಗಳ ಧರ್ಮ ಪ್ರಚಾರಕರು ಮಂಜುಳ ಗೌಡ ಹಾಗೂ ಪ್ರಕಾಶ್ ನೊಚ್ಚ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಜಿರೆ,ವಕೀಲರು ವಸಂತ ಮರಕಡ, ತಿಮ್ಮಪ್ಪಗೌಡ ಬೆಳಾಲು ವಿಶ್ವ ಪರಿಷದ್, ವಕೀಲರು ಉದಯ ಬಿ ಕೆ, ತಾಲೂಕು ಮುಖ್ಯ ಪಶುವೈದ್ಯಾಧಿಕಾರಿ ಡಾಕ್ಟರ್ ರವಿಕುಮಾರ್, ಸಿ ಎ ಆನಂದ್ ಗೌಡ. ಕೃಷ್ಣೇಗೌಡ ಜೆ ಇ ಮುಂಡಾಜೆ ಇವರೂ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.