2024 ಮಾರ್ಚ್ ತಿಂಗಳಿನಲ್ಲಿ ಕೊಕ್ಕಡ ಶ್ರೀ ವೈದ್ಯನಾಥೇಶ್ವರ ದೇವಾಲಯದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ: ಸುದ್ದಿಗೋಷ್ಠಿ
ಕೊಕ್ಕಡ: ಸುಮಾರು ಸಾವಿರ ವರ್ಷಗಳ ಇತಿಹಾಸವಿರುವ , ಸೀಮೆದೇವಾಲಯವಾಗಿರುವ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಾಲಯವು ಹರಿಹರ ಸಂಗಮ ಕ್ಷೇತ್ರ ವಾಗಿದ್ದು ಧನ್ವಂತರಿ ಕ್ಷೇತ್ರವೆಂದು ಹೆಸರುವಾಸಿಯಾಗಿದೆ. ಜೀರ್ಣೋದ್ಧಾರ ಕಾರ್ಯದಲ್ಲಿ ವೈದ್ಯನಾಥೇಶ್ವರ ದೇವರ ಗರ್ಭಗುಡಿ, ನಮಸ್ಕಾರ ಮಂಟಪ, ವಿಷ್ಣುಮೂರ್ತಿದೇವರ ಗರ್ಭಗುಡಿ ಹೀಗೆ ಹಲವಾರು ಗರ್ಭಗುಡಿಗಳು ಕಾರ್ಯಗತಗೊಳ್ಳುತ್ತಿದ್ದು, 2024 ನೇ ಮಾರ್ಚ್ ತಿಂಗಳಲ್ಲಿ ಶ್ರೀ ದೇವರ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಜರುಗಲಿದೆ ಎಂದು ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ವೇದಮೂರ್ತಿ ಬಾಲಕೃಷ್ಣ ಕೆದಿಲಾಯ ತಿಳಿಸಿದರು.
ಅವರು ಕೊಕ್ಕಡ ಶ್ರೀ ವೈದ್ಯನಾಥೇಶ್ವರ ದೇವಾಲಯದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೇವಾಲಯದ ಎಲ್ಲಾ ಅಭಿವೃದ್ಧಿ ಕಾರ್ಯಗಳು ಅಂದಾಜು 25 ಕೋಟಿ ಗೂ ಮಿಕ್ಕಿದ ವೆಚ್ಚದಲ್ಲಿ ತ್ವರಿತವಾಗಿ ನಡೆಯಬೇಕಾಗಿದ್ದು ಊರಪರವೂರ ಭಕ್ತಾಧಿಗಳ ಸಂಪೂರ್ಣ ಸಹಕಾರವನ್ನು ಶ್ರೀ ದೇವಾಲಯದಿಂದ ಅಪೇಕ್ಷಿಸುತ್ತಿದೆ. ಭಕ್ತರು ಸಂಪೂರ್ಣ ಸಹಕಾರ ಕೋರುವಂತೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ರಾಧಾಕೃಷ್ಣ ಯಡಪಾಡ್ಡಿತ್ತಾಯ, ಕೋಶ ಧಿಕಾರಿ ಸುಬ್ರಮಣ್ಯ ಉಪರ್ಣ, ಉಪಾಧ್ಯಕ್ಷರು ಕುಶಲಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.