ಭಾರತೀಯ ಮಜ್ದೂರ್ ಸಂಘ ಕೊಕ್ಕಡ ವಲಯ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿ ಮಜ್ದೂರ್ ಸಂಘದ ಕೊಕ್ಕಡ ವಲಯದ ನೂತನ ಕಛೇರಿಯ ಉದ್ಘಾಟನಾ ಕಾರ್ಯಕ್ರಮ
ಕೊಕ್ಕಡ: ಭಾರತೀಯ ಮಜ್ದೂರ್ ಸಂಘ ಕೊಕ್ಕಡ ವಲಯ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿ ಮಜ್ದೂರ್ ಸಂಘದ ಕೊಕ್ಕಡ ವಲಯದ ನೂತನ ಕಛೇರಿಯ ಉದ್ಘಾಟನಾ ಕಾರ್ಯಕ್ರಮ ಕೊಕ್ಕಡ ಅನುಗ್ರಹ ಕಾಂಪ್ಲೆಕ್ಸ್ ನಲ್ಲಿ ಜರುಗಿತು.
ಉದ್ಘಾಟನೆಯನ್ನು ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಕೃಷ್ಣ ಭಟ್ ನೇರೆವೇರಿಸಿ, ಕಾರ್ಮಿಕರ ಏಳಿಗೆಗಾಗಿ ಈ ಸಂಘಟನೆ ಶ್ರಮಿಸಲಿ ಎಂದು ಹಾರೈಸಿದರು.
ಈ ಸಂಧರ್ಭದಲ್ಲಿ ಉದ್ಯಮಿಗಳಾದ ಬಾಲಕೃಷ್ಣ ನೈಮಿಷ ಸೌತಡ್ಕ ,ಬಿಎಂಎಸ್ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್, ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್. ಯು ,ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ಉದಯ ಕುಮಾರ್ ಬಿ.ಕೆ,ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯೋಗೀಶ್ ಕೊಕ್ಕಡ ,ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಪವಿತ್ರಾ , ಸೌತಡ್ಕ ಶ್ರೀ ಮಹಾಗಣಪತಿ ದೇವಾಲಯದ ಆಡಳಿತ ಮಂಡಳಿಯ ಟ್ರಸ್ಟಿನ ಸದಸ್ಯರಾದ ಪುರಂದರ ಕೊಕ್ಕಡ, ಬಿಎಂಎಸ್ ಕಟ್ಟಡ ಕಾರ್ಮಿಕ ಮಜ್ದೂರ್ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರ್ ನಾಥ್ ಕಲ್ಮಂಜ , ಬಿಎಂಎಸ್ ಬೆಳ್ತಂಗಡಿ ತಾಲೂಕು ಸಂಯೋಜಕರಾದ ಸಾಂತಪ್ಪ ಕಲ್ಮಂಜ ಹಾಗೂ ಕೊಕ್ಕಡ ವಲಯದ ಸಂಯೋಜಕರಾದ ಚಂದ್ರಶೇಖರ ಗಾಣಗಿರಿ ಹಾಗೂ ಬಿಎಂಎಸ್ ಗ್ರಾಮ ಸಮಿತಿ ಪ್ರಮುಖರಾದ ಉಮೇಶ್ ಗೌಡ ಕಳೆಂಜ, ಶಶೀಂದ್ರ ಅಚಾರ್ ಅರಸಿನಮಕ್ಕಿ,ಜನಾರ್ದನ ಅರಸಿನಮಕ್ಕಿ,ಸುಬ್ರಾಯ ಗೌಡ ಶಿಶಿಲ ಹಾಗೂ ಬಿಎಂಎಸ್ ರಿಕ್ಷಾ ಚಾಲಕ ಸಂಘದ ಅಧ್ಯಕ್ಷರಾದ ಜಯರಾಮ್ ಗೌಡ , ರಾಜೇಶ್ ಹಾಗೂ ಪದಾಧಿಕಾರಿಗಳು, ಬಿಎಂಎಸ್ ಸದಸ್ಯರು, ಸಿಬ್ಬಂದಿಯಾದ ಕುಮಾರಿ ಅಕ್ಷತಾ, ಕಾರ್ಮಿಕ ಬಂಧುಗಳು ಉಪಸ್ಥಿರಿದ್ದರು.
ಸಂಯೋಜಕರಾದ ಸಾಂತಪ್ಪ ಕಾರ್ಯಕ್ರಮ ನಿರೂಪಿಸಿ ಮತ್ತು ಸ್ವಾಗತಿಸಿದರು.. ಬಿಎಂಎಸ್ ನ ರಾಜ್ಯ ಕಾರ್ಯದರ್ಶಿಯಾದ ಜಯರಾಜ ಸಾಲಿಯಾನ್ ಧನ್ಯವಾದವಿತ್ತರು.