ಮಿತ್ತಬಾಗಿಲು: ದಿಡುಪೆ ಬಸ್ ನಿಲ್ದಾಣದ ಹಿಂಬದಿ ಮರಕ್ಕೆ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ

ಮಿತ್ತಬಾಗಿಲು: ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ದಿಡುಪೆ ಬಸ್ ನಿಲ್ದಾಣದ ಹಿಂಬಂಧಿಯಲ್ಲಿರುವ ಮರಕ್ಕೆ ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆ.26 ರಂದು ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೃತ ವ್ಯಕ್ತಿ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕುಕ್ಕಾಜೆ ನಿವಾಸಿ ಜಯಂತ ಗೌಡ(45)ಎಂದು ಗುರುತಿಸಲಾಗಿದೆ.
ದಿಡುಪೆಯ ಶ್ರೀಧರ್ ಗೌಡ ಎಂಬವರ ಮನೆಗೆ ಸಂಬಂಧಿಯಾಗಿರುವ ಇವರು ಗುರುವಾರ ಬಂದಿದ್ದು, ಶುಕ್ರವಾರ ವಾಪಸ್ ಮಂಗಳೂರಿಗೆ ಕೆಲಸಕ್ಕೆ ಹೋಗುವುದಾಗಿ ಮನೆಯವರಲ್ಲಿ ಹೇಳಿ ಹೋಗಿದ್ದಾರೆ. ಆದರೆ ದಿಡುಪೆ ಬಸ್ ನಿಲ್ದಾಣದಲ್ಲಿ ಆ.26 ರಂದು ರಾತ್ರಿ ಹಿಂಬಾಗದ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.