ಸೌಜನ್ಯಳ ನ್ಯಾಯಕ್ಕೋಸ್ಕರ ಪ್ರಾಮಾಣಿಕವಾಗಿ ನ್ಯಾಯ ಸಮೃತವಾಗಿ ಹೋರಾಟ ಮಾಡುವ ಸಂಘಟನೆಗಳಿಗೆ ವಿಶ್ವ ಹಿಂದೂ ಪರಿಷದ್ ಬೆಂಬಲ:ಧರ್ಮಸ್ಥಳವನ್ನು ಸೌಜನ್ಯ ಕೊಲೆ ಪ್ರಕರಣ ಹೋರಾಟದ ಹೆಸರಿನಲ್ಲಿ ಅವಹೇಳನ ಮಾಡಿದ್ದಲ್ಲಿ ಅಂತವರ ವಿರುದ್ಧ ನೇರ ಹೋರಾಟಕ್ಕೆ ಇಳಿಯುವ ಎಚ್ಚರಿಕೆ ನೀಡಿದ ವಿ.ಹಿ.ಪ
ಬೆಳ್ತಂಗಡಿ: ಸೌಜನ್ಯ ಕೊಲೆ ಪ್ರಕರಣವನ್ನು ಹಾಲಿ ನ್ಯಾಯಾಧೀಶರ ಮುಖಾಂತರ ನ್ಯಾಯಾಂಗ ತನಿಖೆಗೆ ವಹಿಸಲು ಮತ್ತು ಕೇಂದ್ರ ಸರ್ಕಾರಕ್ಕೆ ದ.ಕ ಜಿಲ್ಲಾ ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿಯ ನೌಕರರ ಸಭಾಭವನದಲ್ಲಿ ಆಗಸ್ಟ್ 2 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಲಾಯಿತು.
ಸೌಜನ್ಯಳ ನ್ಯಾಯಕ್ಕೋಸ್ಕರ ಪ್ರಾಮಾಣಿಕವಾಗಿ ನ್ಯಾಯ ಸಮೃತವಾಗಿ ಹೋರಾಟ ಮಾಡುವ ಸಂಘಟನೆಗಳಿಗೆ ವಿಶ್ವ ಹಿಂದೂ ಪರಿಷದ್ ಬೆಂಬಲ ನೀಡುತ್ತದೆ. ಸೌಜನ್ಯ ಕೊಲೆ ಪ್ರಕರಣ ಆದಷ್ಟು ಬೇಗ ಇತ್ಯರ್ಥವಾಗಿ ನೈಜ ಆರೋಪಿಗಳಿಗೆ ಶಿಕ್ಷೆಯಾಗುವಂತೆ ದೇವಸ್ಥಾನ, ದೈವಸ್ಥಾನ ಮತ್ತು ಮಠ ಮಂದಿರಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸುವಂತೆ ಈ ವೇಳೆ ವಿಶ್ವ ಹಿಂದೂ ಪರಿಷದ್ ಕರೆ ನೀಡಿತು.
ಇತಿಹಾಸ ಪ್ರಸಿದ್ಧ ಕ್ಷೇತ್ರ ಧರ್ಮಸ್ಥಳವನ್ನು ಸೌಜನ್ಯ ಕೊಲೆ ಪ್ರಕರಣ ಹೋರಾಟದ ಹೆಸರಿನಲ್ಲಿ ಅವಹೇಳನ ಮಾಡುವುದು ಅಗೌರವ ತೋರುವುದು ಶ್ರೀ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತರುವಂತಹ ಹೇಳಿಕೆಯನ್ನು ವಿಶ್ವ ಹಿಂದೂ ಪರಿಷದ್ ಬಲವಾಗಿ ವಿರೋಧಿಸುತ್ತಿದ್ದು ದೇವಸ್ಥಾನಕ್ಕೆ ಅವಮಾನ ಮಾಡಿದ್ದಲ್ಲಿ ಇಂದಿಗೂ ಸಹಿಸುವುದಿಲ್ಲ ಸೌಜನ್ಯ ಕೊಲೆ ಪ್ರಕರಣ ಹೋರಾಟವನ್ನು ಮುಂದಿಟ್ಟುಕೊಂಡು ಕೆಲವು ಪ್ರಗತಿಪರ ಬುದ್ದಿಜೀವಿಗಳ ಸಂಘಟನೆಗಳು ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು ಈ ರೀತಿ ಅಪಪ್ರಚಾರ ಅವಮಾನ ಮಾಡಿದ್ದಲ್ಲಿ ಅಂತಹ ಸಂಘಟನೆಗಳಿಗೆ ವಿಶ್ವ ಹಿಂದೂ ಪರಿಷದ್ ನೇರ ಹೋರಾಟದ ಎಚ್ಚರಿಕೆಯನ್ನು ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಾಂತ ಕಾರ್ಯಾಧ್ಯಕ್ಷರಾದ ಡಾ ಎಂಬಿ ಪುರಾಣಿಕ್, ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪುವೆಲ್, ಪ್ರಾಂತ ಸಂಯೋಜಕ್ ಸುನೀಲ್ ಕೆ ಆರ್, ಪ್ರಾಂತ ಸಹ ಸೇವಾ ಪ್ರಮುಖ್ ಗೋಪಾಲ್ ಕುತ್ರಾರ್, ಪ್ರಾಂತ ಸಹಸಂಯೋಜಕರಾದ ಮುರಳಿ ಕೃಷ್ಣ ಹಸಂತಡ್ಕ, ವಿಭಾಗ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ವಿಭಾಗ ಸಾಮರಸ್ಯ ಪ್ರಮುಖ್ ಭಾಸ್ಕರ್ ಧರ್ಮಸ್ಥಳ, ವಿಭಾಗ ಸಹಸಂಯೋಜಕ್ ಪುನೀತ್ ಅತ್ತಾವರ, ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಮಂಗಳೂರು ಜಿಲ್ಲಾಧ್ಯಕ್ಷ ಎಚ್ ಕೆ ಪುರುಷೋತ್ತಮ, ಮಂಗಳೂರು ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್, ಮಂಗಳೂರು ಜಿಲ್ಲಾ ಸಂಯೋಜಕರು ನವೀನ್ ಮೂಡುಶೆಡ್ಡೆ ಉಪಸ್ಥಿತರಿದ್ದರು.