• December 8, 2024

ಬೆಳ್ತಂಗಡಿ:ಮಾರಿಗುಡಿಯ ಮುಂಭಾಗದಲ್ಲಿರುವ ಚರಂಡಿಯಲ್ಲಿ ಹರಿದುಹೋಗುತ್ತಿದೆ ಶೌಚಾಲಯದ ನೀರು:ದುರ್ವಾಸನೆಯಿಂದ ಮೂಗುಮುಚ್ಚಿಕೊಂಡು ಹೋಗುವ ಪರಿಸ್ಥಿತಿ: ಕ್ರಮ ಕೈಗೊಳ್ಳಬೇಕಾಗಿದೆ ನಗರ ಪಂಚಾಯತ್

 ಬೆಳ್ತಂಗಡಿ:ಮಾರಿಗುಡಿಯ ಮುಂಭಾಗದಲ್ಲಿರುವ ಚರಂಡಿಯಲ್ಲಿ ಹರಿದುಹೋಗುತ್ತಿದೆ ಶೌಚಾಲಯದ ನೀರು:ದುರ್ವಾಸನೆಯಿಂದ ಮೂಗುಮುಚ್ಚಿಕೊಂಡು ಹೋಗುವ ಪರಿಸ್ಥಿತಿ: ಕ್ರಮ ಕೈಗೊಳ್ಳಬೇಕಾಗಿದೆ ನಗರ ಪಂಚಾಯತ್

 

ಬೆಳ್ತಂಗಡಿಯ ಮಾರಿಗುಡಿ ದೇವಸ್ಥಾನದ ಮುಂಭಾಗದಲ್ಲಿರುವ ಚರಂಡಿಯಲ್ಲಿ ಶೌಚಾಲಯದ ನೀರು ಹರಿದುಹೋಗುತ್ತಿದ್ದು ದುರ್ವಾಸನೆಯಿಂದ ಕೂಡಿದೆ.

ಚರಂಡಿಯಲ್ಲಿ ಮಳೆ ನೀರನ್ನು ಹೊರೆತುಪಡಿಸಿ ಶೌಚಾಲಯದ ನೀರನ್ನು ಹರಿಯ ಬಿಡುತ್ತಿದ್ದು ರಾತ್ರಿ ವೇಳೆ ಸುತ್ತಮುತ್ತಲಿನ ವ್ಯಾಪರಸ್ಥರು, ಮನೆಯವರು, ಪಾದಾಚಾರಿಗಳು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ದುರ್ವಾಸನೆಯಿಂದಾಗಿ ಸೊಳ್ಳೆಗಳು ಉತ್ಪತ್ತಿಗೊಂಡು ಡೆಂಗ್ಯೂ ಹೀಗೆ ಮಾರಣಾಂತಿಕ ಖಾಯಿಲೆಗೆ ಸ್ಥಳೀಯರು ಬಲಿಯಾಗಬೇಕಾದಿತು.

ನಗರ ಪಂಚಾಯತ್ ಗೆ ಒಳಪಟ್ಟ ಈ ಚರಂಡಿಯಲ್ಲಿ ಮಳೆ ನೀರು ಮಾತ್ರ ಹರಿದುಹೋಗುವಂತೆ ಗಮನಹರಿಸಬೇಕಾಗಿದೆ. ಯಾರು ಈ ಚರಂಡಿಯಲ್ಲಿ ಶೌಚಾಲಯದ ನೀರನ್ನು ಹರಿದು ಬಿಡುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಾದರೆ ಸಂಬಂಧಪಟ್ಟವರೆ ಹೊಣೆಯಾಗಬೇಕಾದಿತು ಎಂಬುವುದು ಸ್ಥಳೀಯರ ಆಕ್ರೋಶ

Related post

Leave a Reply

Your email address will not be published. Required fields are marked *

error: Content is protected !!