• October 14, 2024

ಕಲಾ ತಪಸ್ವಿ ಸಾಂಸ್ಕೃತಿಕ ತಂಡದಿಂದ ಶ್ರೀ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ಮುದ್ದು ಶ್ರೀ ಕೃಷ್ಣ ಭಾವಚಿತ್ರ ಸ್ಪರ್ಧೆ-2023″

 ಕಲಾ ತಪಸ್ವಿ ಸಾಂಸ್ಕೃತಿಕ ತಂಡದಿಂದ ಶ್ರೀ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ಮುದ್ದು ಶ್ರೀ ಕೃಷ್ಣ ಭಾವಚಿತ್ರ ಸ್ಪರ್ಧೆ-2023″

 

ಕಲಾ ತಪಸ್ವಿ ಸಾಂಸ್ಕೃತಿಕ ತಂಡವು ಅನೇಕ ಯುವ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ವೇದಿಕೆಗಳನ್ನು ಕಲ್ಪಿಸಿಕೊಟ್ಟ ತಂಡ. ಸುಮಾರು 40 ಬಹುಮುಖ ಪ್ರತಿಭೆಗಳನ್ನೊಳಗೊಂಡ ಈ ತಂಡದಲ್ಲಿ ಸಂಗೀತ, ನೃತ್ಯ, ಜಾದು, ಮಿಮಿಕ್ರಿ, ಪ್ರಹಸನ, ಶೋಡೋಪ್ಲೇ, ಹೀಗೆ ವಿವಿಧ ಕಲಾಪ್ರಕಾರಗಳನ್ನು ಪ್ರತಿಭೆಗಳು ತೋರ್ಪಡಿಸಿ ಈಗಾಗಲೇ ಹಲವು ವೇದಿಕೆಗಳಲ್ಲಿ ಮೆಚ್ಚುಗೆ ಗಳಿಸಿದ್ದಾರೆ.

ಪ್ರತಿಭೆಗಳಿಗೆ ಹೊಸ ಅವಕಾಶ ಕಲ್ಪಿಸಿ ಅವರ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ತಂಡ ಇದೀಗ ಮತ್ತೊಂದು ಹೊಸತನದತ್ತ ಹೆಜ್ಜೆ ಹಾಕಿದೆ.
ಮುದ್ದಾದ ಮುಕುಂದನನ್ನ ನೋಡುವುದೇ ಚಂದ ..
ಕೃಷ್ಣ ವೇಷದಲ್ಲಿ ಮಕ್ಕಳ ಕಲರವದೇ ಆನಂದ.
ಕಲಾತಪಸ್ವಿ ಸಾಂಸ್ಕೃತಿಕ ತಂಡ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಪ್ರಸ್ತುತ ಪಡಿಸುತ್ತಿದೆ “ಮುದ್ದು ಶ್ರೀ ಕೃಷ್ಣ ಭಾವಚಿತ್ರ ಸ್ಪರ್ಧೆ-2023″.

ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ವಯಸ್ಸಿನ ಮಿತಿಯಿರುವುದಿಲ್ಲ. ದಿನಾಂಕ 05-09-2023ರ ಮೊದಲು ಸ್ಪರ್ಧೆಗೆ ಭಾಗವಹಿಸಿರಬೇಕು. ಫಲಿತಾಂಶ ಹಾಗೂ ಬಹುಮಾನ ವಿತರಣ ಕಾರ್ಯಕ್ರಮ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭದಿನದಂದು ನಡೆಯಲಿದೆ.
ವಿಜೇತರಿಗೆ ಬಹುಮಾನದ ರೂಪವಾಗಿ
ಪ್ರಥಮ :3,001 ನಗದು + ಶ್ರೀಕೃಷ್ಣ ಟ್ರೋಫಿ +ಪ್ರಶಸ್ತಿ ಪತ್ರ
ದ್ವಿತೀಯ : 2,001 ನಗದು + ಶ್ರೀಕೃಷ್ಣ ಟ್ರೋಫಿ + ಪ್ರಶಸ್ತಿ ಪತ್ರ
ತೃತೀಯ : 1,001 ನಗದು + ಶ್ರೀಕೃಷ್ಣ ಟ್ರೋಫಿ + ಪ್ರಶಸ್ತಿ ಪತ್ರ
ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :ಜೈದೀಪ್ ಅಮೈ 7090615880

Related post

Leave a Reply

Your email address will not be published. Required fields are marked *

error: Content is protected !!