• October 14, 2024

ಬೆಳ್ತಂಗಡಿ: ವಸಂತ ಬಂಗೇರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ : ವಸಂತ ಗಿಳಿಯಾರ್ ಹಾಗೂ ಇತರರ ವಿರುದ್ಧ ದೂರು ನೀಡಿದ ವಸಂತ ಬಂಗೇರ ಅಭಿಮಾನಿ ಬಳಗ

 ಬೆಳ್ತಂಗಡಿ: ವಸಂತ ಬಂಗೇರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ : ವಸಂತ ಗಿಳಿಯಾರ್ ಹಾಗೂ ಇತರರ ವಿರುದ್ಧ ದೂರು ನೀಡಿದ ವಸಂತ ಬಂಗೇರ ಅಭಿಮಾನಿ ಬಳಗ

 

ಬೆಳ್ತಂಗಡಿ: ಇತ್ತೀಚೆಗೆ ಬೆಳ್ತಂಗಡಿ ಮಾಜಿ ಶಾಸಕರಾದ ಕೆ ವಸಂತ ಬಂಗೇರರ ಬಗ್ಗೆ ಅವಹೇಳನಕಾರಿ ಪೋಸ್ಟ ನ್ನು ವಸಂತ ಗಿಳಿಯಾರ್ ಎಂಬವರು ತನ್ನ ಫೇಸ್ ಬುಕ್ ಖಾತೆಯಲ್ಲಿ ಹರಿಬಿಟ್ಟಿರುವ ವಿರುದ್ದ ವಸಂತ ಬಂಗೇರರ ಅಭಿಮಾನಿ ಬಳಗ ಆಕ್ರೋಶ ವ್ಯಕ್ತಪಡಿಸಿ, ವಸಂತ ಗಿಳಿಯಾರ್ ಮತ್ತು ಇತರರ ವಿರುದ್ಧ ವಸಂತ ಬಂಗೇರರ ಅಭಿಮಾನಿ ಬಳಗ ಬೆಳ್ತಂಗಡಿ ಠಾಣೆಗೆ ದೂರನ್ನು ನೀಡಿದರು.

ಬೆಳ್ತಂಗಡಿ ತಾಲೂಕಿನ ಕೆಲವು ವ್ಯಕ್ತಿಗಳು ಈ ಮೆಸೇಜನ್ನು ಹಲವಾರು ವ್ಯಕ್ತಿಗಳಿಗೆ ಫಾರ್ವರ್ಡ್ ಮಾಡಿದ್ದು, ವಸಂತ ಗಿಳಿಯಾರ್ ರವಾನಿಸಿದ ಸಂದೇಶ ವಸಂತ ಬಂಗೇರದ್ದೇ ಎಂದು ರವಾನೆಯಾಗುತ್ತಿದೆ. ಬೆಳ್ತಂಗಡಿ ತಾಲೂಕಿನಾದ್ಯಂತ ಪ್ರಚಾರ ಪಡಿಸಿ ಬೆಳ್ತಂಗಡಿ ತಾಲೂಕಿನ ಜನತೆಯಲ್ಲಿ ದ್ವೇಷದ ಬೀಜವನ್ನು ಬಿತ್ತಿ ಬೆಳ್ತಂಗಡಿ ತಾಲೂಕಿನ ಕೋಮು ಸೌಹಾರ್ಧತೆಗೆ ಭಂಗವನ್ನು ತರುವ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಇಂತಹ ಸಂದೇಶವನ್ನು ವಸಂತ ಬಂಗೇರರು ರವಾನಿಸಿಲ್ಲ ವಸಂತ ಗಿಳಿಯಾರ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದೇವೆ ಎಂದು ವಸಂತ ಬಂಗೇರರ ಅಭಿಮಾನಿ ಬಳಗ ಬೆಳ್ತಂಗಡಿ ಗುರುನಾರಾಯಣ ಸಭಾಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Related post

Leave a Reply

Your email address will not be published. Required fields are marked *

error: Content is protected !!