ದ. ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿಗೊಳಪಟ್ಟ ಕಾಶಿಪಟ್ಣ ಗ್ರಾಮದಲ್ಲಿ ಕಳೆದ ಹತ್ತು ವರ್ಷಗಳಿಂದ ಧಾರ್ಮಿಕ ಮತ್ತು ಲೌಕಿಕ ವಿದ್ಯಾಭ್ಯಾಸಗಳನ್ನು ಸಮನ್ವಯವಾಗಿ ನೀಡುತ್ತಿರುವ ಕರ್ನಾಟಕದ ಹೆಮ್ಮೆಯ ಸಂಸ್ಥೆ ಶಹೀದ್ ಸಿ.ಎಂ ಅಬ್ದುಲ್ಲ ಮುಸ್ಲಿಯಾರ್ ಫೌಂಡೇಶನ್ ದಾರುನ್ನೂರ್ ಎಜುಕೇಶನ್ ಸೆಂಟರ್ ಕಾಶಿಪಟ್ಣ ಇದರ ದಶಮಾನೋತ್ಸವ ಸಂಭ್ರಮ, ಧಾರ್ಮಿಕ ಪದವಿ ಪ್ರದಾನ ಸಮಾರಂಭ ನ.1 ರಿಂದ 3 ರ ವರೆಗೆ ನಡೆಯಲಿದೆ ಎಂದು ಸಂಸ್ಥೆಯ ಕೋಶಾಧಿಕಾರಿ ಉಸ್ಮಾನ್ ಹಾಜಿ ಏರ್ ಇಂಡಿಯಾ ತಿಳಿಸಿದರು. ಸಂಸ್ಥೆಯಲ್ಲಿ ಶುಕ್ರವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು […]
ತಿರುವನಂತಪುರಂ ಅಕ್ಟೋಬರ್ 06: ಶಬರಿಮಲೆ ಯಾತ್ರೆಯ ಋತು ಪ್ರಾರಂಭವಾಗಲಿದ್ದು, ಈ ಹಿನ್ನಲೆ ಸಿಎಂ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಲಾಗಿದ್ದು, ಈ ಬಾರಿ ಶಬರಿಮಲೆಗೆ ಆನ್ಲೈನ್ ಬುಕ್ಕಿಂಗ್ಗೆ ಮಾತ್ರ ಅವಕಾಶ ನೀಡಲು ನಿರ್ಧರಿಸಲಾಗಿದೆ. ಒಂದು ದಿನದಲ್ಲಿ ಗರಿಷ್ಠ 80,000 ಮಂದಿಗೆ ಮಾತ್ರ ಅಯ್ಯಪ್ಪನ ದರ್ಶನಕ್ಕೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ಶಬರಿಮಲೆ ಮಂಡಲ-ಮಕರವಿಳಕ್ ಮಹೋತ್ಸವದ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವರ್ಚುವಲ್ ಕ್ಯೂ ಬುಕಿಂಗ್ ಸಮಯದಲ್ಲಿ ಪ್ರಯಾಣದ ಮಾರ್ಗವನ್ನು […]Read More
ಜಗಜ್ಜನನೀ ದುರ್ಗೆಯ ನವ ಶಕ್ತಿಯರಲ್ಲಿ ಎರಡನೇ ಸ್ವರೂಪವು ಬ್ರಹ್ಮಚಾರಿಣಿಯದಾಗಿದೆ. ಇಲ್ಲಿ ’ಬ್ರಹ್ಮ’ ಶಬ್ದದ ಅರ್ಥ ತಪಸ್ಸು ಎಂದು. ಬ್ರಹ್ಮ ಚಾರಿಣಿ ಅರ್ಥಾತ್ ತಪಸ್ಸನ್ನು ಆಚರಿಸುವವಳು. ಪಾರ್ವತಿಯು ಶಿವನನ್ನು ಪಡೆಯಲು ಕಠಿಣ ತಪಸ್ಸನ್ನು ಮಾಡಿದಳು. ಹೀಗಾಗಿಯೇ ತಾಯಿಯ ಈ ರೂಪಕ್ಕೆ ಬ್ರಹ್ಮಚಾರಿಣಿ ಎಂಬ ಹೆಸರು ಬಂತು.ದೇವಿಯ ಸ್ವರೂಪವು ಪೂರ್ಣ ಜ್ಯೋತಿರ್ಮಯ ಹಾಗೂ ಅತ್ಯಂತ ಭವ್ಯವಾಗಿದೆ. ಬಲಗೈಯಲ್ಲಿ ಜಪಮಾಲೆಯನ್ನು ಮತ್ತು ಎಡಗೈಯಲ್ಲಿ ಕಮಂಡಲವನ್ನು ಹಿಡಿದುಕೊಂಡಿರುತ್ತಾಳೆ. ಬ್ರಹ್ಮಚಾರಿಣಿ ದೇವಿಯು ಸಾಕ್ಷಾತ್ ಬ್ರಹ್ಮ ಸ್ವರೂಪ ಅಂದರೆ ತಪಸ್ಸಿನ ರೂಪ. ಈ ತಾಯಿಯು […]Read More
ಚಂದ್ಕೂರು: ಅ.11-12 ರಂದು ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ: ಊದು
ಚಂದ್ಕೂರು: ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ನಡ ಲಾಯಿಲ ವತಿಯಿಂದ,ನವರಾತ್ರಿ ಮಹೋತ್ಸವ ದ ಪ್ರಯುಕ್ತ, ಅಕ್ಟೋಬರ್ 11 ಶುಕ್ರವಾರ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ದ ಪ್ರಾಂಗಾಣದಲ್ಲಿ ಊದು ಪೂಜೆ ಹಾಗೂ ಶನಿವಾರ 12 ರಂದು ಹುಲಿ ಕುಣಿತ ಪ್ರದರ್ಶನವು ನಡೆಯಲಿದೆ. ಈ ಕಾರ್ಯಕ್ರಮ ದ ನೇರಪ್ರಸಾರ ನಮನ ಚಾನೆಲ್ ನಲ್ಲಿ ಮೂಡಿಬರಲಿದೆ.Read More
ಬಳಂಜ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಬಳಂಜ ಹಾಗೂ ಊರವರ ಸಹಕಾರದೊಂದಿಗೆ ಅ.6 ರಂದು ನಡೆಯುವ ಎರಡನೇ ವರ್ಷದ ಶಾರದೋತ್ಸವದ ಆಮಂತ್ರಣ ಪತ್ರಿಕೆಯನ್ನು ಪ್ರಗತಿಪರ ಕೃಷಿಕ,ನ್ಯಾಯವಾದಿ ಸತೀಶ್ ರೈ ಬಾರ್ದಡ್ಕ ಅವರು ಬಳಂಜ ಸಂಘದಲ್ಲಿ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಕಾರ್ಯಕ್ರಮದ ಯಶಸ್ಸಿಗೆ ಊರವರ ಕೂಡುವಿಕೆ ಮತ್ತು ಸಹಕಾರ ಮುಖ್ಯ.ಕಾರ್ಯಕ್ರಮ ಯಾವುದೇ ವಿಘ್ನವಿಲ್ಲದೆ ಅತ್ಯಂತ ಯಶಸ್ಸಿಯಾಗಿ ನಡೆಯಲಿ ಎಂದರು. ಕಾರ್ಯಕ್ರಮದಲ್ಲಿ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಗೌರವಾಧ್ಯಕ್ಷ ಹೆಚ್.ಧರ್ಣಪ್ಪ ಪೂಜಾರಿ, ಅಧ್ಯಕ್ಷ […]Read More
ಅಕ್ಟೋಬರ್ 12 ರಂದು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯಲ್ಲಿ ದೇವಿಗೆ ನವರಾತ್ರಿ ಪೂಜೆ:
ಆರಿಕೋಡಿ: ಕಾರ್ಣಿಕ ಕ್ಷೇತ್ರವಾದ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಗೆ ನವರಾತ್ರಿ ಪೂಜೆ, ನಾಗತಂಬಿಲ, ಮಹಾಪೂಜೆ ಮತ್ತು ಆಯುಧಪೂಜೆಯು(ವಾಹನ ಪೂಜೆ) ಅಕ್ಟೋಬರ್ 12 ರಂದು ಶನಿವಾರ ಜರುಗಲಿದೆ. ಆ ಪ್ರಯುಕ್ತ ಶಾಲಾ ಮಕ್ಕಳಿಗೆ ಪುಸ್ತಕ, ಪೆನ್ ಮತ್ತು ಬಳಪ ವಿತರಣೆ ನಡೆಯಲಿದ್ದು, ಮಹಿಳೆಯರಿಗೆ ರವಿಕೆ ಕಣ ಮತ್ತು ಬಳೆ ವಿತರಣೆ, ವಾಹನ ಪೂಜೆ ಮಾಡಿಸುವವರು 1 ತೆಂಗಿನಕಾಯಿ, ಲಿಂಬೆ, ಹೂವು ಇತ್ಯಾದಿ ಸಾಮಾಗ್ರಿಗಳನ್ನು ತರುವುದಾಗಿ ತಿಳಿಸಲಾಗಿದೆRead More
ಬೆಳ್ತಂಗಡಿ: ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ಇಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶ್ರೀ ವಿಶ್ವಕರ್ಮ ಜಯಂತಿ ಆಚರಣೆಯು ಜರುಗಿತು. ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಶಾಸಕ ಹರೀಶ್ ಪೂಂಜ ವಹಿಸಿ ಮಾತನಾಡಿದರು. ಈ ವೇಳೆ ಕೇಳದ ಪೇಟೆ ಸ.ಹಿ ಪ್ರಾ ಶಾಲಾ ಪ್ರಭಾರ ಮುಖ್ಯ ಶಿಕ್ಷಕ ಪ್ರಶಾಂತ್ ಎ , ಬೆಳ್ತಂಗಡಿ ವಿಶ್ವಕರ್ಮಾಭ್ಯುದಯ ಸಭಾ ಅಧ್ಯಕ್ಷ ಗಣೇಶ್ ಆಚಾರ್ಯ ಬಲ್ಯಾಯಕೋಡಿ, ಉಪ ತಹಸೀಲ್ದಾರ್ ರವಿಕುಮಾರ್ ಉಪಸ್ಥಿತರಿದ್ದರುRead More
ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಪಟ್ರಮೆಯಲ್ಲಿ ಸಂಕ್ರಮಣದ ಪ್ರಯುಕ್ತ ಸನಾತನದ ಸಾಧಕರಾದ ಆನಂದ ಗೌಡ
ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಪಟ್ರಮೆಯಲ್ಲಿ ಸಂಕ್ರಮಣದ ಪ್ರಯುಕ್ತ ಸನಾತನದ ಸಾಧಕರಾದ ಶ್ರೀ ಆನಂದ ಗೌಡ ಇವರು ವಿಶೇಷ ಧಾರ್ಮಿಕ ಪ್ರವಚನವನ್ನು ನೀಡಿದರು. ಹಿಂದೂ ಧರ್ಮ ಅತ್ಯಂತ ಪ್ರಾಚೀನ ಧರ್ಮ ಹಾಗೂ ವೈಜ್ಞಾನಿಕ ಧರ್ಮ, ಅನಾದಿಕಾಲದಿಂದ ಅನಂತಕಾಲದವರೆಗೂ ಇರುವ ಧರ್ಮ. ಇಂತಹ ಮಹಾನ್ ಧರ್ಮದಲ್ಲಿ ಜನಿಸಿದ ಹಿಂದೂಗಳು ಇವತ್ತು ಧರ್ಮಾಚರಣೆಯಿಂದಾಗುವ ಲಾಭವನ್ನು ಪಡೆಯುವಲ್ಲಿ ದೂರ ಉಳಿದಿದ್ದಾರೆ. ದಿನನಿತ್ಯದ ಆಚರಣೆಗಳನ್ನು, ಹಬ್ಬಗಳನ್ನು, ವೃತಗಳನ್ನು ಇವತ್ತು ಸಾಮಾಜಿಕ ಕಾರ್ಯಕ್ರಮದ ಹಾಗೆ ಆಚರಿಸುವುದನ್ನು ನಾವು ನೋಡುತ್ತೇವೆ. ಇದರಿಂದ ಆಧ್ಯಾತ್ಮಿಕ ಲಾಭವನ್ನು ಪಡೆಯುವಲ್ಲಿ […]Read More
ಬಂದಾರು : ಸೆ 15 ಬಂದಾರು ಗ್ರಾಮದ ಮೈರೋಳ್ತಡ್ಕ ಸದಾಶಿವ ಯುವಕ ಮಂಡಲ (ರಿ.) ಮೈರೋಳ್ತಡ್ಕ ಮತ್ತು ದಿವ್ಯಶ್ರೀ ಮಹಿಳಾ ಮಂಡಲ (ರಿ.) ಮೈರೋಳ್ತಡ್ಕ ಇದರ ಸಂಯುಕ್ತ ಆಶ್ರಯದಲ್ಲಿ 35ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಹಾಗೂ ಆಟೋಟ ಸ್ಪರ್ಧೆ, ಶ್ರೀ ಕುರಾಯ ಸದಾಶಿವ ಮಕ್ಕಳ ಭಜನಾ ತಂಡದಿಂದ ನೃತ್ಯ ಭಜನೆ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮವನ್ನು ಕುರಾಯ ಶ್ರೀ ಸದಾಶಿವ ದೇವಸ್ಥಾನದ ಪ್ರಧಾನ ಅರ್ಚಕರಾದ ರವಿ ಭೀಮ್ ಭಟ್ […]Read More
ಬೆಳ್ತಂಗಡಿ; ಕರ್ನಾಟಕ ರಾಜ್ಯದ ಬಹುತೇಕ ಕಡೆಗಳಲ್ಲಿ ಇಸ್ಲಾಂ ನ ಪ್ರಭೆ ಪಸರಿಸಿದ್ದ ಸಯ್ಯಿದ್ ತಾಜುಲ್ ಉಲಮಾ ಉಳ್ಳಾಳ ತಂಙಳ್ ಅವರ ಸುಪುತ್ರರಾಗಿ ಕೂರತ್ ತಂಙಳ್ ಅವರು ಲೌಖಿಕ ಬದುಕಿನಿಂದ ಬಹುದೂರ ಇದ್ದು ಕೇವಲ ಆಧ್ಯಾತ್ಮಿಕತೆಯನ್ನೇ ಮೈಗೂಡಿಸಿಕೊಂಡು ಜೀವಿಸಿದ್ದ ಮಹಾನ್ ಪಂಡಿತರಾಗಿದ್ದರು ಎಂದು ಸಅದಿಯಾ ಕಾಲೇಜಿನ ಪ್ರಾಚಾರ್ಯ ಕೆ.ಸಿ ರೋಡ್ ಹುಸೈನ್ ಸಅದಿ ಹೇಳಿದರು. ಕಾಜೂರು ಆಡಳಿತ ಸಮಿತಿ ವತಿಯಿಂದ ಕಾಜೂರಿನಲ್ಲಿ ನಡೆದ ಸಯ್ಯಿದ್ ಕೂರತ್ ತಂಙಳ್ ಅನುಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.ಸಯ್ಯುದ್ ಕಾಜೂರು ತಂಙಳ್ ಅವರು […]Read More