ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಮೈರೋಲ್ತಡ್ಕ ಇಲ್ಲಿ ಮಾರಿಗುಡಿ ದೇವರ ಕಾರ್ಯಕ್ರಮಕ್ಕೆ ತಾಲೂಕಿನ ಧಾರ್ಮಿಕ ಮುಂದಾಳು ಶ್ರೀ ಕಿರಣ್ ಚಂದ್ರ ಪುಷ್ಪಗಿರಿ ಇವರು ಭೇಟಿ ನೀಡಿ ಪ್ರಸಾದ ಸ್ವೀಕರಿಸಿ ದೇವರ ಅನುಗ್ರಹಕ್ಕೆ ಪಾತ್ರರಾದರು. ಈ ಸಂದರ್ಭದಲ್ಲಿ ಊರಿನ ಪ್ರಮುಖರು ಉಪಸ್ಥಿತರಿದ್ದರು
ಫೆ.14 ರಂದು ಅದ್ದೂರಿಯಾಗಿ ಸಂಪನ್ನಗೊಂಡ ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಿಯ ವಾರ್ಷಿಕ ಉತ್ಸವ:ದಾಖಲೆಯನ್ನೇ
ಆರಿಕೋಡಿ: ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯಲ್ಲಿ ಅದ್ದೂರಿಯಾಗಿ ನಡೆದ ವಾರ್ಷಿಕ ಉತ್ಸವವು ವಿವಿಧ ಸಾಂಸ್ಕೃತಿಕ, ಧಾರ್ಮಿಕ, ನೇಮೋತ್ಸವದ ಮೂಲಕ ಯಶಸ್ವಿಗೊಂಡು ಫೆ.14 ರಂದು ಸಂಪನ್ನಗೊಂಡಿತು. ಫೆ.10-14 ರವರೆಗೆ ಜಗನ್ಮಾತೆ, ಆದಿಶಕ್ತಿ ಶ್ರೀ ಚಾಮುಂಡೇಶ್ವರಿ ತಾಯಿಗೆ ವಿವಿಧ ಪೂಜಾ ಪುನಸ್ಕಾರಗಳು ಭಕ್ತಿಯಿಂದ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಹರೀಶ್ ಆರಿಕೋಡಿಯವರ ನೇತೃತ್ವದಲ್ಲಿ ಜರುಗಿತು. ಅದರಲ್ಲೂ ಫೆ.14 ರಂದು ನಡೆದ ಅಗೆಲು ಸೇವೆಯಲ್ಲಿ ದಾಖಲೆಯನ್ನು ಮೀರಿಸಿದೆ ಭಕ್ತಸಾಗರ ರಾಜ್ಯದ ಮೂಲೆ ಮೂಲೆಗಳಿಂದ ಜನಸಾಗರ, ಚಲನಚಿತ್ರ ನಟ , ರಾಜಕೀಯ ವ್ಯಕ್ತಿಗಳು […]Read More
ಬೆಳ್ತಂಗಡಿಯಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ ತಾಲೂಕು ಮಟ್ಟದ ಮಂದಿರ ಅಧಿವೇಶನ:ದೇವಸ್ಥಾನಗಳ ಅಭಿವೃದ್ಧಿಗಾಗಿ ಹಿಂದೂಗಳು ತಮ್ಮ
ಬೆಳ್ತಂಗಡಿ : ಭಾರತಾದ್ಯಂತ ಮಂದಿರ ಮಹಾಸಂಘದ ಕಾರ್ಯಕ್ಕೆ ಹಿಂದೂಗಳ ಅತ್ಯುತ್ತಮ ಬೆಂಬಲದಿಂದ ಸಿಕ್ಕಿದ ಯಶಸನ್ನು ಹೇಳಿದರು. ಕರ್ನಾಟಕ ರಾಜ್ಯದ ದೇವಸ್ಥಾನಗಳ ಅಭಿವೃದ್ಧಿಗಾಗಿ ಹಿಂದೂಗಳು ತಮ್ಮ ಕೈ ಜೋಡಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಶ್ರೀ ಚಂದ್ರ ಮೊಗೇರ ಇವರು ಕರೆ ನೀಡಿದರು. ದೇವಸ್ಥಾನಗಳ ಸಂಸ್ಕೃತಿ ರಕ್ಷಣೆಗಾಗಿ ಕರ್ನಾಟಕ ಮಂದಿರ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಆಯೋಜನೆಯಲ್ಲಿ ‘ ತಾಲೂಕು ಮಟ್ಟದ ಮಂದಿರ ಅಧಿವೇಶನ’ವು ಶ್ರೀ ಸುಬ್ರಹ್ಮಣ್ಯ ಸ್ಥಾಣಿಕ ಬ್ರಾಹ್ಮಣ ಸಭಾಭವನ, ಲಾಯಿಲ ಬೆಳ್ತಂಗಡಿಯಲ್ಲಿ ಇಂದು […]Read More
ಡಿಸೆಂಬರ್ 16, 2023 ರಲ್ಲಿ ‘ಕರ್ನಾಟಕ ರಾಜ್ಯ ಪ್ರಥಮ ಮಂದಿರ ಅಧಿವೇಶನ’ ಬೆಂಗಳೂರಿನಲ್ಲಿ ನಡೆದಿತ್ತು. ಅದೇ ರೀತಿ ಗೋವಾ, ಮಹಾರಾಷ್ಟ್ರ ರಾಜ್ಯಗಳಲ್ಲಿಯೂ ಈ ಅಧಿವೇಶನಗಳು ನಡೆದಿವೆ. ಅದರ ನಂತರ ಮಹಾಸಂಘದ ಕಾರ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಎರಡು ವರ್ಷದಲ್ಲಿ ಸಂಪೂರ್ಣ ದೇಶದಾದ್ಯಂತ ತಲುಪುತ್ತಿದೆ. ಕರ್ನಾಟಕ ಮಂದಿರ ಮಹಾಸಂಘದ ಮಾಧ್ಯಮದಿಂದ ರಾಜ್ಯದ 800 ಕ್ಕೂ ಹೆಚ್ಚಿನ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ, ಹಾಗೂ 15 ಸಾವಿರಗಿಂತಲೂ ಹೆಚ್ಚಿನ ದೇವಸ್ಥಾನಗಳ ಸಂಘಟನೆಯಾಗಿದೆ. ಮಂದಿರ ವಿಶ್ವಸ್ಥರ ಸಂಘಟನೆ, ಮಂದಿರಗಳ ಸುವ್ಯವಸ್ಥಾಪನೆ, […]Read More
ಸಂಪೂರ್ಣ ಶಿಲಾಮಯವಾಗಿ ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪುನರ್ ಪ್ರತಿಷ್ಠೆ
ಸಂಪೂರ್ಣ ಶಿಲಾಮಯವಾಗಿ ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಪ್ರಯುಕ್ತ ನವದುರ್ಗಾ ಲೇಖನ ಯಜ್ಞ ಆಯೋಜಿಸಲಾಗಿದ್ದು ಈ ಲೇಖನವನ್ನು ಬರೆಯುವ ಕಾರ್ಯಕ್ರಮವು ಯಶಸ್ವಿಯಾಗಿದ್ದು ಈ ಪ್ರಯುಕ್ತ ಈ ದಿನ ಫೆ. 4 ರಂದು ನವಚಂಡೀಯಾಗ ಹಮ್ಮಿಕೊಂಡಿದ್ದು ಭಕ್ತಿಪೂರ್ವಕವಾಗಿ ದೇವಸ್ಥಾನದ ಪ್ರಧಾನ ತಂತ್ರಿಗಳಾದ ಕುಮಾರಗುರು ತಂತ್ರಿ ಹಾಗೂ ಶ್ರೀನಿವಾಸ ತಂತ್ರಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು. ಈ ದಿನ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಪೇಜಾವರ ಅಧೋಕ್ಷಜ […]Read More
ಕಾಜೂರು ಉರೂಸ್ ಪ್ರಯುಕ್ ಪ್ರತಿದಿನ ಉಪನ್ಯಾಸ ಮಾಲಿಕೆ: ಪ್ರಮುಖ ವಿದ್ವಾಂಸರಿಂದ ಧರ್ಮ ಸಂದೇಶ,
ಬೆಳ್ತಂಗಡಿ; ಇತಿಹಾಸ ಪ್ರಸಿದ್ಧ ಸರ್ವಧರ್ಮೀಯ ಸಮನ್ವಯ ಶ್ರದ್ಧಾ ಕೇಂದ್ರ ಕಾಜೂರು ಮಖಾಂ ಶರೀಫ್ ಉರೂಸ್ ಪ್ರಯುಕ್ತ ಜ.24 ರಿಂದ ಪ್ರತಿದಿನ ರಾತ್ರಿ ಪ್ರಖ್ಯಾತ ಧಾರ್ಮಿಕ ವಿದ್ವಾಂಸರಿಂದ ಪ್ರವಚನ ಕಾರ್ಯಕ್ರಮ ನಡೆಯುತ್ತಿದೆ. ಸಯ್ಯಿದ್ ಕಾಜೂರು ತಂಙಳ್ ರಿಂದ ಉದ್ಘಾಟನೆಗೊಂಡ ಈ ಪ್ರವಚನ ಮಾಲಿಕೆಯಲ್ಲಿ ಕಿಲ್ಲೂರು ಖತೀಬ್ ಶಂಶೀರ್ ಸಖಾಫಿ ಪರಪ್ಪು, ಮುಹಮ್ಮದ್ ತೌಸೀಫ್ ಸಅದಿ ಹರೇಕಳ, ಯಾಸಿರ್ ಸಖಾಫಿ ಅಲ್ಅಝ್ಹರಿ ಮಲಪ್ಪುರಂ, ಅಬೂಬಕ್ಕರ್ ಸಿದ್ದೀಕ್ ಜಲಾಲಿ ಕಕ್ಕಿಂಜೆ, ಅಬ್ದುಲ್ ಅಝೀಝ್ ಅಶ್ರಫಿ ಪಾಣತ್ತೂರು, ಮುಹಮ್ಮದ್ ಇರ್ಷಾದ್ ಸಖಾಫಿ […]Read More
ಕನ್ಯಾಡಿ:ಮಹಾ ಕುಂಭಮೇಳದಲ್ಲಿ ಕನ್ಯಾಡಿ ಧರ್ಮಸ್ಥಳ ಇಲ್ಲಿಯ ಪೀಠಾಧ್ಯಕ್ಷರಾದ ಸದ್ಗುರು ಶ್ರೀ ಶ್ರೀ ಶ್ರೀ
ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಂ ಕನ್ಯಾಡಿ ಧರ್ಮಸ್ಥಳ ಇಲ್ಲಿಯ ಪೀಠಾಧ್ಯಕ್ಷರಾದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ರಥೋತ್ಸವRead More
ಜಾತ್ರೆ-ಉತ್ಸವಗಳ ವೇಳೆ ದೇವಸ್ಥಾನಗಳ ಬಳಿ ವ್ಯಾಪಾರ ವಹಿವಾಟಿಗೆ ಕೇವಲ ಹಿಂದೂಗಳಿಗೆ ಅವಕಾಶ ನೀಡಿ
ಬೆಂಗಳೂರು : ದೇವಸ್ಥಾನಗಳ ಜಾತ್ರೆ, ಉತ್ಸವ ಇತ್ಯಾದಿ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ನಿಯಮದಂತೆ ದೇವರ ಮೇಲೆ ಶ್ರದ್ಧೆ ಇರುವವರಿಗೆ ಮಾತ್ರ ವಹಿವಾಟು ಮಾಡಲು ಅವಕಾಶ ನೀಡಬೇಕು ಮತ್ತು ಅನ್ಯ ಮತೀಯರಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಮತ್ತು ದೇವಸ್ಥಾನಗಳ ರಕ್ಷಣೆಗಾಗಿ ಮಂದಿರ ಅಧಿವೇಶನದಲ್ಲಿ ತೆಗೆದುಕೊಂಡ ನಿರ್ಣಯಗಳ ಬಗ್ಗೆ ಕರ್ನಾಟಕ ಮಂದಿರ ಮಹಾಸಂಘದ ವತಿಯಿಂದ ಜನವರಿ 21, ಮಂಗಳವಾರ ಧಾರ್ಮಿಕ ದತ್ತಿ ಇಲಾಖೆ ಸಚಿವರಾದ ರಾಮಲಿಂಗಾ ರೆಡ್ಡಿ ಇವರಿಗೆ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ […]Read More
ಬಾಂಗ್ಲಾದೇಶಿ ಹಿಂದೂಗಳಿಗೆ ನ್ಯಾಯದೊರಕಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಸಲು ಭಾರತಾದ್ಯಂತ ಮೌನ ಪ್ರತಿಭಟನೆ !ಹಿಂದೂಗಳ
ಬೆಳ್ತಂಗಡಿ.: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಿರಂತರ ದಾಳಿ ನಡೆಯುತ್ತಿದ್ದು ಇದುವರೆಗೆ 230 ಜನರು ಸಾವನ್ನಪ್ಪಿದ್ದಾರೆ. ಬಾಂಗ್ಲಾದೇಶದ 64 ಜಿಲ್ಲೆಗಳ ಪೈಕಿ 52 ಜಿಲ್ಲೆಗಳಲ್ಲಿ ಹಿಂದೂ ವಿರೋಧಿ ಹಿಂಸಾಚಾರದ ಘಟನೆಗಳು ನಡೆದಿವೆ. ಶೇಖ್ ಹಸೀನಾ ಸರಕಾರ ರಾಜೀನಾಮೆ ನೀಡಿದ ನಂತರ ಹಿಂದೂಗಳ ಮೇಲಿನ ಹಲ್ಲೆಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ, ಹಿಂದೂ ಯುವಕ, ಉತ್ಸವ್ ಮಂಡಲನನ್ನು ತಥಾಕಥಿತ ಧರ್ಮನಿಂಧನೆಯ ಆರೋಪದ ಮೇಲೆ ಜಿಹಾದಿ ಜನಸಮೂಹವು ನೇರವಾಗಿ ಪೊಲೀಸ್ ಠಾಣೆಗೆ ನುಗ್ಗಿ ಆ ಯುವಕನ ಎರಡೂ ಕಣ್ಣುಗಳನ್ನು ಕಿತ್ತು ಹಾಕಿದೆ. ಬಾಂಗ್ಲಾದೇಶದಲ್ಲಿ […]Read More
ಬೆಂಗಳೂರು : ಬಹುತ್ ಸಹಲಿಯಾ, ಅಬ್ ನಹೀ ಸಹೇಂಗೆ; ಹಿಂದೂ ಹಕ್ ಲೇಕರ್ ರಹೇಂಗೆ ! ‘ಸಮಯ ಕೀ ಮಜ್ಬೂರೀ ಹೆ.. ಸನಾತನ ಬೋರ್ಡ್ ಝರೂರೀ ಹೆ ! ಈ ಪ್ರಭಾವಶಾಲಿ ಘೋಷಣೆಯೊಂದಿಗೆ ಪೂ. ದೇವಕಿನಂದನ ಠಾಕೂರ ಇವರು ಉಪಸ್ಥಿತ ಹಿಂದುಗಳನ್ನು ಜಾಗೃತ ಗೊಳಿಸಿದರು. ಸನಾತನ ಎಂದಿಗೂ ಸ್ವತಂತ್ರವಾಗಿರಬೇಕೆಂದು ಕರ್ನಾಟಕದಲ್ಲಿ ಸನಾತನ ಬೋರ್ಡ್ ಸ್ಥಾಪನೆ ಆಗಲು ಕರ್ನಾಟಕ ಸರ್ಕಾರಕ್ಕೆ ಆಗ್ರಹಿಸಲಾಯಿತು. ಸಂಸ್ಕೃತಿ ರಕ್ಷಣೆಯಾಗಬೇಕಾದರೆ ದೇವಸ್ಥಾನಗಾಳ ರಕ್ಷಣೆ ಆಗಬೇಕು ಮತ್ತು ಇದು ಹಿಂದೂಗಳು ಒಂದಾದರೆ ಮಾತ್ರ ಸಾಧ್ಯ […]Read More