• September 13, 2024

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ ’: ಪತ್ರಿಕಾಗೋಷ್ಠಿ !

 ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ ’: ಪತ್ರಿಕಾಗೋಷ್ಠಿ !


ದಕ್ಷಿಣ ಗುಜರಾತನಿಂದ ತಮಿಳುನಾಡಿನ ಜಿಂಜಿವರೆಗೆ 1600 ಕಿಲೋಮೀಟರ್ ಉದ್ದದ ರಾಜ್ಯವನ್ನು ರಚಿಸುವ ಮೂಲಕ ಮೊಗಲ್ ಸಾಮ್ರಾಜ್ಯವನ್ನು ಅಂತ್ಯಕ್ಕೆ ಅಡಿಪಾಯ ಹಾಕಿದ ಛತ್ರಪತಿ ಶಿವಾಜಿ ಮಹಾರಾಜರು ಓರ್ವ ಮಹಾನ ಸಾಮ್ರಾಟ ಮತ್ತು ರಾಷ್ಟ್ರನಿರ್ಮಾತೃರಾಗಿದ್ದರು; ಆದರೆ ಹಿಂದೂವಿರೋಧಕರು ಅವರ ಮಹಾನ ಕಾರ್ಯವನ್ನು ಅದುಮಿಟ್ಟು, ಅವರು ಓರ್ವ ಸಾಮಾನ್ಯ ಮರಾಠಾ ಯೋಧನೆಂದು ಇತಿಹಾಸದಲ್ಲಿ ತೋರಿಸಲಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ಮಹಾನತೆಯನ್ನು ಕಡಿಮೆ ಮಾಡುವ ಕೆಲಸ ನಡೆಯುತ್ತಿದೆ. ನಮ್ಮ ಇತಿಹಾಸವನ್ನು ವಿದ್ರೂಪಗೊಳಿಸಿ ಸ್ವಾತಂತ್ರ್ಯದ ನಂತರ ಬಹುಸಂಖ್ಯಾತ ಹಿಂದೂಗಳ ಮೇಲೆ ಮೊಗಲರನ್ನು ವೈಭವೀಕರಣಗೊಳಿಸುವ ಸುಳ್ಳು ಇತಿಹಾಸವನ್ನು ಹೇರಲಾಯಿತು .ಹೀಗೆ ಅನೇಕ ಹಿಂದೂವಿರೋಧಿ ನರೇಟಿವ್ ಈಗಲೂ ರಚಿಸಿ ಹಿಂದೂಗಳಲ್ಲಿ ಗೊಂದಲ, ಭೇದ ಮತ್ತು ಕೀಳರಿಮೆ ಸೃಷ್ಟಿಸಿ ಹಿಂದೂಗಳನ್ನು ನಿಷ್ಕ್ರಿಯಗೊಳಿಸಲಾಗುತ್ತಿದೆ. ಇದರ ವಿರುದ್ಧ ಹಿಂದೂಗಳು ಈಗ ಎಚ್ಚರಗೊಂಡು ಹಿಂದೂವಿರೋಧಿ ನರೇಟಿವ್ ಗುರುತಿಸಬೇಕು. ಅದರ ಅಭ್ಯಾಸ ಮಾಡಿ, ಈ ಹಿಂದೂವಿರೋಧಿ ನರೇಟಿವ ಬಣ್ಣ ಬಯಲು ಮಾಡಬೇಕು ಎಂದು ` ಸೇವ್‌ ಕಲ್ಚರ ಸೇವ್‌ ಭಾರತ ಫೌಂಡೇಶನ’ ಸಂಸ್ಥಾಪಕರು, ಲೇಖಕ, ಇತಿಹಾಸಕಾರ ಮತ್ತು ಭಾರತದ ಮಾಜಿ ಮಾಹಿತಿ ಆಯುಕ್ತರಾದ ಉದಯ ಮಾಹೂರಕರ ಇವರು ಪ್ರತಿಪಾದಿಸಿದರು.

           ಅವರು ಫೋಂಡಾ. ಗೋವಾದಲ್ಲಿ ನಡೆಯುತ್ತಿರುವ 'ವೈಶ್ವಿಕ ಹಿಂದೂ ರಾಷ್ಟ್ರ ಅಧಿವೇಶನ'ದ ನಾಲ್ಕನೇ ದಿನದಂದು ಶ್ರೀ ವಿದ್ಯಾಧಿರಾಜ ಸಭಾಗೃಹದಲ್ಲಿ  ಆಯೋಜಿಸಲಾಗಿದ್ದ ಪತ್ರಿಕಾ ಪರಿಷತ್ತಿನಲ್ಲಿ ‘ಹಿಂದೂವಿರೋಧಿ ನರೇಟಿವ್ ಗೆ ಪ್ರತ್ಯುತ್ತರ’ ಈ ವಿಷಯದಲ್ಲಿ ಮಾತನಾಡುತ್ತಿದ್ದರು.

 ಈ ಸಂದರ್ಭದಲ್ಲಿ ವ್ಯಾಸಪೀಠದ ಮೇಲೆ  ಉತ್ತರ ಪ್ರದೇಶದ 'ಪ್ರಾಚ್ಯಮ್' ಸಂಸ್ಥಾಪಕರು ಮತ್ತು ಚಿಂತಕರಾದ ಶ್ರೀ. ಪ್ರವೀಣ ಚತುರ್ವೇದಿ, ಹರಿಯಾಣದ ವಿವೇಕಾನಂದ ಕಾರ್ಯ ಸಮಿತಿಯ ಅಧ್ಯಕ್ಷರು ಹಾಗೂ  ಚಿಂತಕರಾದ ಶ್ರೀ. ನೀರಜ ಅತ್ರಿ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಉಪಸ್ಥಿತರಿದ್ದರು.

   ಹಿಂದೂವಿರೋಧಿ ನರೆಟಿವ ವಿಷಯದ ಬಗ್ಗೆ ಶ್ರೀ. ಮಾಹೂರಕರ ಮುಂದೆ ಮಾತನಾಡುತ್ತಾ,  'ಹಿಂದೂಗಳಿಗೆ ನರೇಟಿವ್ (ಸುಳ್ಳು  ಕಥೆಗಳ) ಯುದ್ಧವನ್ನು ಗೆಲ್ಲಲು ಕಲಿಸಬೇಕಾಗುವುದು. ಹಿಂದೂಗಳ ಸಂಯಮ ಸ್ವಭಾವದಿಂದ ಹಾಗೂ ಹೋರಾಟವೃತ್ತಿಯ ಅಭಾವದಿಂದಾಗಿ, ಅವರು ಯಾವಾಗಲೂ ನರೇಟಿವ  ಯುದ್ಧದಲ್ಲಿ ಸೋಲುತ್ತಿದ್ದಾರೆ. ಸ್ವಾತಂತ್ರ್ಯ ದೊರೆತಾದಿನಿಂದಲೇ ಈ ಚಿತ್ರಣವಿದೆ. 2002 ರ ಗುಜರಾತ ಗಲಭೆಯ ಮೊದಲು ಗೋಧ್ರಾದಲ್ಲಿ ಸಾಬರಮತಿ ರೈಲಿನಲ್ಲಿ  59 ಹಿಂದೂಗಳು ಕೊಲ್ಲಲ್ಪಟ್ಟರು; ಆದರೆ ಮಾನ್ಯ  ನರೇಂದ್ರ ಮೋದಿ, ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಭಾಜಪದವರು ಮುಸ್ಲಿಮ್ ವಿರೋಧಿ  ಅಲೆಯನ್ನು ತರಲು ಈ ಕೃತ್ಯವನ್ನು  ನಡೆಸಿದ್ದಾರೆ ಎಂದು ಕಮ್ಯುನಿಸ್ಟ ಮತ್ತು ಇಸ್ಲಾಮಿಕ ರಣನೀತಿಕಾರರು ಹೇಳಿದರು. ಪ್ರತ್ಯಕ್ಷದಲ್ಲಿ ಮುಸಲ್ಮಾನರ ಗುಂಪು ರೈಲಿನ ಬೋಗಿಯನ್ನು ಸುಟ್ಟಿರುವುದಾಗಿ ಗುಜರಾತ ಉಚ್ಚನ್ಯಾಯಾಲಯದ ತೀರ್ಪಿನ ನಂತರವೇ ಬಂದಿತು.
          ಈ ಸಂದರ್ಭದಲ್ಲಿ ` *ಪ್ರಾಚ್ಯಮ್’ ಸಂಸ್ಥಾಪಕರು ಹಾಗೂ ಚಿಂತಕರಾದ ಶ್ರೀ. ಪ್ರವೀಣ ಚತುರ್ವೇದಿಯವರು* ಮಾತನಾಡುತ್ತಾ, ಹಿಂದೂ ಧರ್ಮ ಪ್ರೇಮ, ಕರುಣೆ ಮತ್ತು ವೈಶ್ವಿಕ  ಬಾಂಧವ್ಯದ ಸಂಕೇತವಾಗಿದೆ. ಅವರನ್ನು  ಪ್ರಪಂಚದಾದ್ಯಂತ ನಿಂದನೆ ಮಾಡುತ್ತಿದ್ದಾರೆ. ವಿಶೇಷವಾಗಿ ಹಿಂದೂ ಯುವಕರಲ್ಲಿ ಗೊಂದಲವಿದೆ, ಪರಸ್ಪರರಲ್ಲಿ ತಿರಸ್ಕಾರದ ಭಾವನೆ ಹೆಚ್ಚಲು ಜಾತೀಯತೆ, ಬ್ರಾಹ್ಮಣವಾದಿ ಪಿತೃಪ್ರಭುತ್ವದಂತಹ ಪದಗಳನ್ನು ಸಿದ್ಧಪಡಿಸಲಾಗಿದೆ. ಈ  ಸುಳ್ಳು ಕಥೆಗಳನ್ನು  ವಿರೋಧಿಸಲು ಕೇವಲ  ಅವರಲ್ಲಿರುವ  ಸುಳ್ಳುತನವನ್ನು ಬಹಿರಂಗಪಡಿಸಿಯೇ ಮಾಡಬಹುದು. ಉದಾಹರಣೆಗೆ ನಮ್ಮಲ್ಲಿ ಜಾತಿ ಎನ್ನುವ ಕಲ್ಪನೆಯಿರಲಿಲ್ಲ ಕೇವಲ ವರ್ಣವಿತ್ತು; ಆದರೆ ಬ್ರಿಟಿಶರು ನಮಗೆ ವಿಭಜಿಸಲು ಜಾತಿ ವ್ಯವಸ್ಥೆಯನ್ನು ಸೃಷ್ಟಿಸಿದರು.  ಅದಕ್ಕೂ ಮುಂದುವರಿದು ಭಾರತ,  ಹಿಂದೂ ಧರ್ಮ, ಸಂಸ್ಕೃತಿ, ಸಾವಿರಾರು ವರ್ಷಗಳಲ್ಲಿ ಎಲ್ಲ ಕ್ಷೇತ್ರದ ಹಿಂದೂಗಳು ಮಾಡಿರುವ ಕೃತಿಗಳನ್ನು ಮಂಡಿಸಿ, ಇದನ್ನು ಸಾಧ್ಯಗೊಳಿಸಬಹುದು, ಎಂದರು.

     *ಚಿಂತಕ ಶ್ರೀ. ನೀರಜ ಅತ್ರಿಯವರು* ಮಾತನಾಡಿ, ವಿಕೃತ ನೆರೆಟಿಟ್ ಒಂದು ಮಗ್ಗಲು ಹೇಗಿದೆಯೆಂದರೆ, ಸಂಪೂರ್ಣವಾಗಿ  ವಿಫಲ ಮತ್ತು  ವಿನಾಶಕಾರಿ ಘಟನೆಗಳು ಕೂಡ ಸಾಮಾಜಿಕ ನ್ಯಾಯ ಅಥವಾ ಸಮಾವೇಶದ ಪ್ರಯತ್ನಗಳಂತೆ ಮಂಡಿಸಲಾಗುತ್ತದೆ. ಇದರ ಇತ್ತೀಚಿನ ಉದಾಹರಣೆಯೆಂದರೆ ಮಾನವ ಶರೀರವನ್ನು ನಾಶ ಮಾಡುವ `ಜೆಂಡರ್‍‌ಆರ್ಫಿಮೇಶನ್' ಹೆಸರಿನ ಪ್ರಕ್ರಿಯೆ! ಇದರಲ್ಲಿ ಚಿಕಿತ್ಸೆಯೆಂದು ಸಂಪೂರ್ಣ ಅವೈಜ್ಞಾನಿಕ ಪದ್ಧತಿಯನ್ನು ಮಂಡಿಸಲಾಗುತ್ತಿದೆ. ನಮ್ಮ ದೇಶ, ನಮ್ಮ ಸಮಾಜ ಮತ್ತು ಭಾವೀ ಪೀಳಿಗೆಯನ್ನು ಸುರಕ್ಷಿತವಾಗಿಡಲು ಆಳವಾದ ಅಭ್ಯಾಸ ಮತ್ತು ಸಂಶೋಧನೆ ಮಾಡಿದೇ ಯೋಗ್ಯ ಮಾಹಿತಿಯನ್ನು ಸಮಾಜಕ್ಕೆ ತಲುಪಿಸುವುದೇ ಮಾಧ್ಯಮಗಳ ಜವಾಬ್ದಾರಿಯಾಗಿದೆ.

Related post

Leave a Reply

Your email address will not be published. Required fields are marked *

error: Content is protected !!