• October 16, 2024

ಬಳಂಜ ವೈಭವದ ಶಾರದೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

 ಬಳಂಜ ವೈಭವದ ಶಾರದೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

 

ಬಳಂಜ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಬಳಂಜ ಹಾಗೂ ಊರವರ ಸಹಕಾರದೊಂದಿಗೆ ಅ.6 ರಂದು ನಡೆಯುವ ಎರಡನೇ ವರ್ಷದ ಶಾರದೋತ್ಸವದ ಆಮಂತ್ರಣ ಪತ್ರಿಕೆಯನ್ನು ಪ್ರಗತಿಪರ ಕೃಷಿಕ,ನ್ಯಾಯವಾದಿ ಸತೀಶ್ ರೈ ಬಾರ್ದಡ್ಕ ಅವರು ಬಳಂಜ ಸಂಘದಲ್ಲಿ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು ಕಾರ್ಯಕ್ರಮದ ಯಶಸ್ಸಿಗೆ ಊರವರ ಕೂಡುವಿಕೆ ಮತ್ತು ಸಹಕಾರ ಮುಖ್ಯ.ಕಾರ್ಯಕ್ರಮ ಯಾವುದೇ ವಿಘ್ನವಿಲ್ಲದೆ ಅತ್ಯಂತ ಯಶಸ್ಸಿಯಾಗಿ ನಡೆಯಲಿ ಎಂದರು.

ಕಾರ್ಯಕ್ರಮದಲ್ಲಿ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಗೌರವಾಧ್ಯಕ್ಷ ಹೆಚ್.ಧರ್ಣಪ್ಪ ಪೂಜಾರಿ, ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್,ನಿಕಟಪೂರ್ವಾಧ್ಯಕ್ಷ ಪ್ರವೀಣ್ ಕುಮಾರ್ ಹೆಚ್.ಎಸ್,ಮಾಜಿ ಅಧ್ಯ ತಿಮ್ಮಪ್ಪ ಪೂಜಾರಿ ತಾರಿಪಡ್ಪು,ಕಾರ್ಯದರ್ಶಿ ಜಗದೀಶ್ ಪೂಜಾರಿ ಬಳ್ಳಿದಡ್ಡ, ನಿರ್ದೇಶಕರಾದ ಸಂತೋಷ್ ಕುಮಾರ್ ಕಾಪಿನಡ್ಕ,ದಿನೇಶ್ ಕೋಟ್ಯಾನ್ ಕುದ್ರೊಟ್ಟು,ರಂಜಿತ್ ಪೂಜಾರಿ ಮಜಲಡ್ಡ,ದಿನೇಶ್ ಪೂಜಾರಿ ಅಂತರ,ಯೋಗೀಶ್ ಯೈಕುರಿ,ಸದಾನಂದ ಪೂಜಾರಿ ಬೊಂಟ್ರೋಟ್ಟು,ಜಗದೀಶ್ ತಾರಿಪಡ್ಪು, ಪ್ರವೀಣ್ ಡಿ ಕೋಟ್ಯಾನ್,ರಕ್ಷಿತ್ ಬಗ್ಯೋಟ್ಟು, ಸದಸ್ಯ ಗೀರೀಶ್ ಬಂಗೇರ ನಿಟ್ಟಡ್ಕ,ಯುವ ಸಾಹಿತಿ ಚಂದ್ರಹಾಸ್ ಬಳಂಜ, ಯುವ ಬಿಲಗಲವ ವೇದಿಕೆ ಅಧ್ಯಕ್ಷ ಶರತ್ ಅಂಚನ್,ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಭಾರತಿ ಸಂತೋಷ್ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!