ಪಡಂಗಡಿ: ಕೆಲಸಕ್ಕಿದ್ದ ವ್ಯಕ್ತಿಗಳಿಬ್ಬರು ತನ್ನ ಮಾಲಕನನ್ನೇ ದರೋಡೆ ಮಾಡಿ ಕಟ್ಟಿಗೆಯಿಂದ ಕಾಲು, ಕೈ ಹಣೆ ಎದೆ ಭಾಗಗಳಿಗೆ ಸೇರಿದಂತೆ ಹಲವು ಕಡೆ ಹಲ್ಲೆ ನಡೆಸಿ ಗೂಗಲ್ ಪೇ ಪಿನ್ ನಂಬರ್ ಪಡೆದು ಮಾಲಕನ ಖಾತರಯಿಂದ 82 ಸಾವಿರ ರೂಪಾಯಿ ಹಣವನ್ನು ವರ್ಗಾಯಿಸಿ, ಅಂಗಲದಲ್ಲಿ ನಿಲ್ಲಿಸಿದ್ದ ಮಹೀಂದ್ರಾ ಇಲೆಕ್ಟ್ರಿಕ್ ಮೊಬಾಲಿಟಿ ತ್ರಿಚಕ್ರ ವಾಹನವನ್ನ ಕಳವು ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಮಾಲಕ ಫೋನ್ ನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸಕ್ಕಿದ್ದ […]
ಬೆಳ್ತಂಗಡಿ: ಬೆಳ್ತಂಗಡಿಯ ಮಹಿಳೆಯೊಬ್ಬರು ಪುತ್ತೂರು ಬೆಟ್ಟಂಪಾಡಿ ಗ್ರಾಮದ ಗುಮ್ಮಟಗದ್ದೆ ತವರು ಮನೆಯಲ್ಲಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಎ.10ರಂದು ನಡೆದ ಬಗ್ಗೆ ವರದಿಯಾಗಿದೆ. ಬೆಳ್ತಂಗಡಿ ತಾಲೂಕಿನ ಪುದುಬೆಟ್ಟು ಉದ್ದದಪಳಿಕೆ ಪುರುಷೋತ್ತಮ ಎಂಬವರ ಪತ್ನಿ ಪುಣ್ಯಶ್ರೀ ಎಂಬವರು ಬಾವಿಗೆ ಬಿದ್ದು ಮೃತಪಟ್ಟವರು. ಬೆಟ್ಟಂಪಾಡಿ ಗ್ರಾಮದ ಗುಮ್ಮಟಗದ್ದೆಯ ಬಾಲಕೃಷ್ಣ ಎಂಬವರು ತನ್ನ ಪುತ್ರಿ ಪುಣ್ಯಶ್ರೀಯವರನ್ನು 2017ರ ಜ.1ಕ್ಕೆ ಬೆಳ್ತಂಗಡಿಯ ಪುರುಷೋತ್ತಮ ಎಂಬವರಿಗೆ ವಿವಾಹ ಮಾಡಿಸಿದ್ದರು. ಪುರುಷೋತ್ತಮ ಮತ್ತು ಪುಣ್ಯಶ್ರಿ ದಂಪತಿಗೆ ಇಬ್ಬರು ಮಕ್ಕಳಿದ್ದರು. ಎ.4ರಂದು ತವರು ಮನೆಗೆ ಪುಣ್ಯಶ್ರೀಯವರು […]Read More
ಪುಂಜಾಲಕಟ್ಟೆ: ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆ, ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ತವ್ಯ ನಿರತರಾಗಿದ್ದ ಫ್ಲೈಯಿಂಗ್ ಸ್ಕ್ವಾಡ್ ಕಾರ್ತಿ ಮಧುಬಾಬು ಅವರ ತಂಡ ಕುಕ್ಕಳ ಗ್ರಾಮದ ಬಸವೇಶ್ವರ ದೇವಸ್ಥಾನದ ಬಳಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ದಾಖಲೆ ಇಲ್ಲದೆ ರೂ. 10 ಲಕ್ಷ ಸಾಗಾಟ ಮಾಡುತ್ತಿದ್ದ ಎಟಿಎಂ ವಾಹನವನ್ನು ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎ. 10 ರಂದು ರಾತ್ರಿ ವಶಕ್ಕೆ ಪಡೆದಿದ್ದಾರೆ. ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Read More
ಓಡಿಲ್ನಾಳ: ಅಬಕಾರಿ ಜಂಟಿ ಆಯುಕ್ತರು ಮಂಗಳೂರು ಹಾಗೂ ಅಬಕಾರಿ ಉಪ ಆಯುಕ್ತರು , ದಕ್ಷಿಣ ಕನ್ನಡ ಜಿಲ್ಲೆ ಅವರ ಮಾರ್ಗದರ್ಶನದಲ್ಲಿ ಮತ್ತು ಅಬಕಾರಿ ಉಪ ಅಧೀಕ್ಷಕರು ಬಂಟ್ವಾಳ ಉಪ ವಿಭಾಗದವರ ಹಾಗೂ ಅಬಕಾರಿ ನಿರೀಕ್ಷಕರು ಬೆಳ್ತಂಗಡಿ ವಲಯದವರ ನಿರ್ದೇಶನದಂತೆ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಓಡಿಲ್ನಾಳದ ರತ್ನಾಕರ ಎಂಬವರು ಬೆಳ್ತಂಗಡಿ ಕಸಬದ ಕೆಲ್ಲಗುತ್ತು ಎಂಬಲ್ಲಿ ಅಕ್ರಮವಾಗಿ ಮದ್ಯಮಾರಾಟ ಮಾಡುತ್ತಿರುವುದನ್ನು ವಶಪಡಿಸಿಕೊಂಡಿರುವ ಘಟನೆ ಎ. 10 ರಂದು ನಡೆದಿದೆ. 17,280 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದು ಆರೋಪಿ ಪರಾರಿಯಾಗಿದ್ದಾನೆ.ವಾಹನ ಹಾಗೂ […]Read More
ನಾವೂರು: ಪುರುಷ ಕಟ್ಟುವ ಕಾರ್ಯಕ್ರಮದಲ್ಲಿ ಇಸ್ಲಾಂ ಧರ್ಮಕ್ಕೆ ಮತ್ತು ಮಹಿಳೆಯರಿಗೆ ಅವಮಾನ ಆರೋಪ:
ನಾವೂರು: ನಾವೂರು ಗ್ರಾಮದಲ್ಲಿ ನಡೆದ ಪುರುಷ ಕಟ್ಟುವ ಕಾರ್ಯಕ್ರಮದಲ್ಲಿ ಇಸ್ಲಾಂ ಧರ್ಮಕ್ಕೆ ಹಾಗೂ ಮಹಿಳೆಯರಿಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿ, ಕಾರ್ಯಕ್ರಮದ ಆಯೋಜಕರ ಹಾಗೂ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಎಸ್ ಡಿಪಿಐ ವತಿಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಎ.6 ರಂದು ನಾವೂರಿನಲ್ಲಿ ನಡೆದ ಪುರುಷ ಕಟ್ಟುವುದು ಕಾರ್ಯಕ್ರಮದಲ್ಲಿ ಯುವಕರು ಬುರ್ಖಾ ಹಾಗೂ ಟೊಪ್ಪಿ ಹಾಕಿಕೊಂಡು ಧರ್ಮಕ್ಕೆ ಅವಮಾನವಾಗುವ ರೀತಿಯಲ್ಲಿ ವರ್ತಿಸುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಕಾಣಿಸುತ್ತಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದ್ದು, ಈ ವಿರುದ್ದ ಕ್ರಮ ಕೈಗೊಳ್ಳುವಂತೆ […]Read More
ರೆಖ್ಯ: ಯಾವುದೋ ವೈಯಕ್ತಿಕ ಕಾರಣದಿಂದ ಅಣ್ಣ ತಮ್ಮಂದಿರ ನಡುವೆ ಜಗಳವುಂಟಾಗಿ ತಮ್ಮ ಅಣ್ಣನಿಗೆ ಕತ್ತಿಯಿಂದ ಹಲ್ಲೆ ಮಾಡಿರುವ ಘಟನೆ ಎ.5 ರಂದು ರಾತ್ರಿ ವೇಳೆ ರೆಖ್ಯ ಗ್ರಾಮದ ಪರ್ಕಳ ಎಂಬಲ್ಲಿ ನಡೆದಿದೆ. ಒಂದೇ ಮನೆಯಲ್ಲಿ ವಾಸವಿದ್ದ ಇವರಿಬ್ಬರ ನಡುವೆ ನೆನ್ನೆ ರಾತ್ರಿ ಜಗಳ ನಡೆದಿದೆ. ಅಣ್ಣ ರಾಜಶೇಖರ್ ಹಲ್ಲೆಗೊಳಗಾದ ವ್ಯಕ್ತಿ. ತಮ್ಮ ಪ್ರಕಾಶ್ ಹಲ್ಲೆ ಮಾಡಿದ ವ್ಯಕ್ತಿ ಎಂದು ತಿಳಿಸದುಬಂದಿದೆ. ಹಲ್ಲೆಗೊಳಗಾದ ಅಣ್ಣ ರಾಜಶೇಖರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಗಳಕ್ಕೆ ನಿಖರ ಕಾರಣ ತಿಳಿದುಬರಬೇಕಾಗಿದೆ.Read More
ಬೆಳ್ತಂಗಡಿ ನಗರ ಪಂಚಾಯತ್ ನಲ್ಲಿ ಎರಡು ವರ್ಷಗಳ ಕಾಲ ಹೊರಗುತ್ತಿಗೆ ಸಿಬ್ಬಂದಿಯಾಗಿ ಕರ್ತವ್ಯನಿರ್ವಹಿಸುತ್ತಿದ್ದ ಯಶಸ್ವಿನಿ ಎಂಬ ಯುವತಿ ಎ.4 ರಂದು ರಾತ್ರಿ ಮಂಗಳೂರಿನಲ್ಲಿ ತನ್ನ ಬಾಡಿಗೆ ರೂಂ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಈಕೆ ಮದುವೆಯಾಗಿ 5 ವರ್ಷಗಳಾಗಿದ್ದು ಮೂಲತಃ ಮುಡಿಪುವಿನ ಮಂಚಿ ಎಂಬಲ್ಲಿ ನೆಲೆಸಿದ್ದರು. ಕೆಲಸದ ನಿಮಿತ್ತ ವಾಮಂಜೂರಿನ ಬಾಡಿಗೆ ರೂಂ ನಲ್ಲಿ ವಾಸವಿದ್ದರು. ಇದೀಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಾಗಿದೆ.Read More
ಬೆಳ್ತಂಗಡಿ: ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುಸ್ಲಿಂ ಹುಡುಗನೋರ್ವ ಬಸ್ಸಿನಲ್ಲಿ ಊರಿಗೆ ಬರುತ್ತಿದ್ದ ವೇಳೆ ತನ್ನ ಪರಿಚಯದ ಯುವತಿಯೊಂದಿಗೆ ಮಾತನಾಡುತ್ತಾ ಪ್ರಯಾಣಿಸುತ್ತಿದ್ದ ವೇಳೆ ತಂಡವೊಂದು ಆತನನ್ನು ಬಸ್ಸಿನಿಂದ ಹೊರಗೆಳೆದು ಹಲ್ಲೆ ನಡೆಸಿದ ಘಟನೆ ಉಜಿರೆಯಲ್ಲಿ ಎ.4 ರಂದು ವರದಿಯಾಗಿದೆ. ಹಲ್ಲೆಗೊಳಗಾದ ಯುವಕ ಕಕ್ಕಿಂಜೆ ನಿವಾಸಿ ಸಾಹಿಲ್ ಎಂದು ಗುರುತಿಸಲಾಗಿದೆ. ಆಕೆಯೊಂದಿಗೆ ಬಸ್ಸಿನಲ್ಲಿ ಆತ ಮಾತನಾಡುತ್ತಿದ್ದುದನ್ನು ನೋಡಿದ ಯಾರೋ ಉಜಿರೆಯ ಯುವಕರಿಗೆ ಮಾಹಿತಿ ನೀಡಿದ್ದು ಈತನನ್ನು ಉಜಿರೆಯಲ್ಲಿ ಕಾದು ನಿಂತಿದ್ದ ಯುವಕರ ತಂಡ ಬಸ್ಸಿನಿಂದ ಹೊರಗೆಳೆದು ಹಲ್ಲೆ ಮಾಡಿದ್ದಾರೆ […]Read More
ಮೇಲಂತಬೆಟ್ಟು: ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮದ ಶ್ರೀ ದೇವಿ ಭಗವತಿ ಅಮ್ಮನವರ ದೇವಸ್ಥಾನದಲ್ಲಿ ಎ.3 ರಿಂದ ಎ 7 ರವರೆಗೆ ಬ್ರಹ್ಮಕಲಶೋತ್ಸವ ವೈಭವದಿಂದ ಜರುಗಲು ಸಜ್ಜಾಗುತ್ತಿದ್ದ ಬೆನ್ನಲ್ಲೇ ದೇವಸ್ಥಾನಕ್ಕೆ ಸಾಗುವ ರಸ್ತೆಗೆ ಎ. 2 ರಂದು ಖಾಸಗಿ ವ್ಯಕ್ತಿಯೋರ್ವರು ಬೇಲಿ ಹಾಕಿರುವ ವಿವಾದ ತಾರಕಕ್ಕೇರುತ್ತಿದ್ದಂತೆ ಪೊಲೀಸ್ ಪಂಚಾಯತ್ ಪ್ರಮುಖರ ಸಮ್ಮುಖದಲ್ಲಿ ವಿವಾದ ಇತ್ಯರ್ಥಗೊಂಡಿದೆ. ಈಗಾಗಲೆ ಇರುವ ರಸ್ತೆಗೆ ಬೇಲಿ ಹಾಕದಂತೆ ಸೂಚಿಸಲಾಗಿದ್ದು ಮೊದಲಿನಂತೆ ರಸ್ತೆ ಮತ್ತೆ ಸಂಚಾರಕ್ಕೆ ಮುಕ್ತವಾಗಿದೆ.Read More
ಮೇಲಂತಬೆಟ್ಟು: ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮದ ಶ್ರೀ ದೇವಿ ಭಗವತಿ ಅಮ್ಮನವರ ದೇವಸ್ಥಾನದಲ್ಲಿ ಎ.3 ರಿಂದ ಎ 7 ರವರೆಗೆ ಬ್ರಹ್ಮಕಲಶೋತ್ಸವ ವೈಭವದಿಂದ ಜರುಗಲು ಸಜ್ಜಾಗುತ್ತಿದ್ದ ಬೆನ್ನಲ್ಲೇ ದೇವಸ್ಥಾನಕ್ಕೆ ಸಾಗುವ ರಸ್ತೆಗೆ ಎ. 2 ರಂದು ಖಾಸಗಿ ವ್ಯಕ್ತಿಯೋರ್ವರು ಬೇಲಿ ಹಾಕಿರುವ ಘಟನೆ ನಡೆದಿದೆ. ಜೇಸಿಬಿ ಮೂಲಕ ಮೇಲಂತಬೆಟ್ಟು ಗ್ರಾ.ಪಂ ನಿಂದ ರಸ್ತೆ ಸರಿಪಡಿಸುವ ಕಾರ್ಯವನ್ನು ಆರಂಭಿಸಿರುವ ವೇಳೆ ಏಕಾಏಕಿ ಖಾಸಗಿ ವ್ಯಕ್ತಿಯೋರ್ವ ನುಗ್ಗಿ ಜೆಸಿಬಿ ಕೆಲಸವನ್ನು ತಡೆಗಟ್ಟಿ ಜೆಸಿಬಿಯನ್ನು ವಾಪಾಸ್ ಕಳಹಿಸಿ, ಬೇಲಿ ಹಾಕಿ […]Read More