ಮಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಲಾಯಿಲದ ಮಹಿಳೆ
![ಮಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಲಾಯಿಲದ ಮಹಿಳೆ](https://namanachannel.in/wp-content/uploads/2023/04/IMG_20230405_142211-720x560.jpg)
![](https://namanachannel.in/wp-content/uploads/2023/04/IMG_20230405_142149-580x1024.jpg)
ಬೆಳ್ತಂಗಡಿ ನಗರ ಪಂಚಾಯತ್ ನಲ್ಲಿ ಎರಡು ವರ್ಷಗಳ ಕಾಲ ಹೊರಗುತ್ತಿಗೆ ಸಿಬ್ಬಂದಿಯಾಗಿ ಕರ್ತವ್ಯನಿರ್ವಹಿಸುತ್ತಿದ್ದ ಯಶಸ್ವಿನಿ ಎಂಬ ಯುವತಿ ಎ.4 ರಂದು ರಾತ್ರಿ ಮಂಗಳೂರಿನಲ್ಲಿ ತನ್ನ ಬಾಡಿಗೆ ರೂಂ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಈಕೆ ಮದುವೆಯಾಗಿ 5 ವರ್ಷಗಳಾಗಿದ್ದು ಮೂಲತಃ ಮುಡಿಪುವಿನ ಮಂಚಿ ಎಂಬಲ್ಲಿ ನೆಲೆಸಿದ್ದರು. ಕೆಲಸದ ನಿಮಿತ್ತ ವಾಮಂಜೂರಿನ ಬಾಡಿಗೆ ರೂಂ ನಲ್ಲಿ ವಾಸವಿದ್ದರು. ಇದೀಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ನಿಖರ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಾಗಿದೆ.