ಧರ್ಮಸ್ಥಳ: ಸ್ಕೂಟರ್- ಟಿಪ್ಪರ್ ನಡುವೆ ಡಿಕ್ಕಿ: ಸ್ಕೂಟರ್ ಸವಾರ ಕೂಟದಕಲ್ಲು ನಿವಾಸಿ ಸುಧಾಕರ್ ರವರಿಗೆ ಗಾಯ
ಧರ್ಮಸ್ಥಳ ಕಡೆ ಬರುತ್ತಿದ್ದ ಸ್ಕೂಟರ್ ಹಾಗೂ ಧರ್ಮಸ್ಥಳ ದಿಂದ ಮುಂಡ್ರುಪ್ಪಾಡಿ ಕಡೆ ಸಾಗುತ್ತಿದ್ದ ಟಿಪ್ಪರ್ ನಡುವೆ ಅಪಘಾತ ಸಂಭವಿಸಿದ ಘಟನೆ ಎ.5 ರಂದು ವರದಿಯಾಗಿದೆ.
ಅಪಘಾತದಲ್ಲಿ ಸ್ಕೂಟರ್ ಸವಾರ ಕೂಟದ ಕಲ್ಲು ನಿವಾಸಿ ಸುಧಾಕರ್ ಗುಡಿಗಾರ್ ರವರ ಕಾಲಿಗೆ ಪೆಟ್ಟಾಗಿದ್ದು, ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.