ಪಡಂಗಡಿ: ಕೆಲಸಗಾರರು ಮಾಲಕನನ್ನೇ ದರೋಡೆ ಮಾಡಿ ಪರಾರಿಯಾದ ಪ್ರಕರಣ: ಆರೋಪಿಗಳನ್ನು ವೇಣೂರು ಬಸ್ ನಿಲ್ದಾಣದಿಂದ ಹೆಡೆಮುರಿ ಕಟ್ಟಿದ ಬೆಳ್ತಂಗಡಿ ಪೊಲೀಸರು
ಪಡಂಗಡಿ: ಕೆಲಸಕ್ಕಿದ್ದ ವ್ಯಕ್ತಿಗಳಿಬ್ಬರು ತನ್ನ ಮಾಲಕನನ್ನೇ ದರೋಡೆ ಮಾಡಿ ಕಟ್ಟಿಗೆಯಿಂದ ಕಾಲು, ಕೈ ಹಣೆ ಎದೆ ಭಾಗಗಳಿಗೆ ಸೇರಿದಂತೆ ಹಲವು ಕಡೆ ಹಲ್ಲೆ ನಡೆಸಿ ಗೂಗಲ್ ಪೇ ಪಿನ್ ನಂಬರ್ ಪಡೆದು ಮಾಲಕನ ಖಾತರಯಿಂದ 82 ಸಾವಿರ ರೂಪಾಯಿ ಹಣವನ್ನು ವರ್ಗಾಯಿಸಿ, ಅಂಗಲದಲ್ಲಿ ನಿಲ್ಲಿಸಿದ್ದ ಮಹೀಂದ್ರಾ ಇಲೆಕ್ಟ್ರಿಕ್ ಮೊಬಾಲಿಟಿ ತ್ರಿಚಕ್ರ ವಾಹನವನ್ನ ಕಳವು ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಮಾಲಕ ಫೋನ್ ನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸಕ್ಕಿದ್ದ ಇಬ್ಬರು ಈ ಆರೋಪಿಗಳು ಮಾಲಕನ ಮೇಲೆ ಹಲ್ಲೆ ನಡೆಸಿ ಅವರ ಖಾತೆಯಲ್ಲಿದ್ದ 82 ಸಾವಿರ ರೂಪಾಯಿತನ್ನು ತನ್ನ ಹೆಅಮಡತಿಯ ಖಾತೆಗೆ ವರ್ಗಾಯಿಸಿ ಪರಾರಿಯಾಗಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಬೆಳ್ತಂಗಡಿ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದು, ಎ. 7 ರಂದು ಆರೋಪಿಗಳಾದ ಕೇರಳದ ಮುಹಮ್ಮದ್ ರಿಯಾಸುದ್ದಿನ್, ಪೈಸಲ್ ಎಂಬವರನ್ನು ವೇಣೂರು ಬಸ್ ನಿಲ್ದಾಣದಿಂದ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪೆಇಸಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದೆ.