ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಸುತ್ತಮುತ್ತ ಖಾಸಗಿ ಹೋಟೆಲ್ಗಳಿಗೆ ಅವಕಾಶ ನೀಡಬೇಡಿ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಅಭಿವೃದ್ಧಿ ಕಾರ್ಯ ಉದ್ಘಾಟನೆ ಬಳಿಕ ಮಾತನಾಡಿದ ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ ದೇವಸ್ಥಾನದ ಒಂದೂವರೆ, ಎರಡು ಕಿಲೋ ಮೀಟರ್ ಸುತ್ತಮುತ್ತ ಖಾಸಗಿ ಹೊಟೇಲ್ಗಳಿಗೆ ಅವಕಾಶ ನೀಡಬೇಡಿ. ಮಾಂಸಹಾರ ಹೊಟೇಲ್ಗಳು ಬಂದರೆ ಬಾರ್ಗಳೂ ಬರುತ್ತವೆ. ನೇತ್ರಾವತಿ ನದಿ ಸೇರಿದಂತೆ, ಇತರ ನದಿಗಳ ಸುತ್ತ ಹೊಟೇಲ್ಗಳಿಗೆ ಅವಕಾಶ ನೀಡುವುದು ಬೇಡ. […]
ಪೋಷಕರಿಗೊಂದು ಎಚ್ಚರ!! ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡು, ಮೈ ಬಣ್ಣ ನೀಲಿ ಬಣ್ಣಕ್ಕೆ ತಿರುಗಿದ್ರೆ
ಬೆಂಗಳೂರು: ಹವಾಮಾನ ಬದಲಾಗುತ್ತಿದ್ದಂತೆ ಮನುಷ್ಯರ ಮೇಲೂ ಕೆಟ್ಟ ಪರಿಣಾಮಗಳೂ ಬೀರುತ್ತಲೇ ಇರುತ್ತದೆ. ಇತ್ತೀಚೆಗೆ ಹವಾಮಾನ ಬದಲಾಗುತ್ತಿದ್ದಂತೆ ಜನರಲ್ಲಿ ಆರೋಗ್ಯದ ಸಮಸ್ಯೆಯು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ವಿಚಾರ. ಇತ್ತೀಚಿನ ಹವಾಮಾನಕ್ಕೆ ಜ್ವರ, ಶೀತ, ತಲೆನೋವು ಕಾಣಿಸಿಕೊಂಡರೆ ನಿರ್ಲಕ್ಷ್ಯ ಬೇಡವೇ ಬೇಡ. ಅದರಲ್ಲೂ ಮಕ್ಕಳಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆ ಪೋಷಕರಲ್ಲಿ ಆತಂಕ ಮನೆಮಾಡಿದೆ. ಹೌದು ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡು, ಮೈ ಬಣ್ಣ ನೀಲಿ ಬಣ್ಣಕ್ಕೆ ತಿರುಗಿದ್ರೆ ನಿರ್ಲಕ್ಷ್ಯ ಮಾಡಬೇಡಿ. ಏಕೆಂದರೆ ರಾಜಧಾನಿಯಲ್ಲಿ ಶುರುವಾಗಿದೆ ಆತಂಕಕಾರಿ ಬ್ಲೂ ಫೀವರ್ ಭೀತಿ […]Read More
ಬೆಳ್ತಂಗಡಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಕ್ಷಿತ್ ಶಿವರಾಂ: ಕೆಪಿಸಿಸಿ ಕಚೇರಿಯಿಂದ ಬಂತು ಬುಲಾವ್
ಬೆಳ್ತಂಗಡಿ: 2023ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಯಾಗಿ ಇದೀಗ ಬೆಳ್ತಂಗಡಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಕ್ಷಿತ್ ಶಿವರಾಂ ಅವರನ್ನು ಅಂತಿಮ ಮಾಡಿ ಕೆಪಿಸಿಸಿ ಕಚೇರಿಯಿಂದ ಬುಲಾವ್ ಬಂದಿದೆ. ಬೆಸ್ಟ್ ಫೌಂಡೇಶನ್ ಮೂಲಕ ಬೆಳ್ತಂಗಡಿ ತಾಲೂಕಿನಲ್ಲಿ ಸಮಾಜ ಸೇವೆ ಮಾಡುತ್ತಿರುವ ಯುವ ನಾಯಕ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ರಕ್ಷಿತ್ ಶಿವರಾಂ ಅವರಿಗೆ ಕೆಪಿಸಿಸಿ ಯಿಂದ 2023 ರ ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಗೆ ತಯಾರಿ ಮಾಡಿ ತಾಲೂಕಿನಲ್ಲಿ ಕ್ಯಾಂಪೇನ್ ಆರಂಭಿಸಬೇಕೆಂದು ಕರೆ ಬಂದಿದೆ ಎಂದು […]Read More
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾಸದಸ್ಯರಾದ ಡಾ||ಡಿ ವೀರೇಂದ್ರ ಹೆಗ್ಗಡೆಯವರು ಡಿ.9 ರಂದು ನವದೆಹಲಿಯಲ್ಲಿ ಉಪರಾಷ್ಟ್ರಪತಿ ಜಗ್ ದೀಪ್ ಧನ್ ಕರ್ ಅವರನ್ನು ಭೇಟಿ ಮಾಡಿ ಸೌಹಾರ್ದಯುತ ಮಾತುಕತೆ ನಡೆಸಿದರು. ಈ ವೇಳೆ ಧರ್ಮಸ್ಥಳದ ಪರವಾಗಿ ಉಪರಾಷ್ಟ್ರಪತಿಗೆ ಹೆಗ್ಗಡೆಯವರು ಗೌರವಿಸಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಹ್ವಾನಿಸಿದರು.Read More
ಕೆಲವೇ ತಿಂಗಳಲ್ಲಿ ವಿಧಾನ ಸಭೆ ಚುನಾವಣೆ..!: ಪಕ್ಷಗಳಲ್ಲಿ ಪಕ್ಷಾಂತರ ಪರ್ವ ಆರಂಭ..!: ಕಾಂಗ್ರೆಸ್
ಬೆಳ್ತಂಗಡಿ: ವಿಧಾನ ಸಭೆ ಚುನಾವಣೆ ಕೆಲವೇ ತಿಂಗಳಲ್ಲಿ ಆರಂಭವಾಗಲಿದ್ದು ಈ ನಡುವೆ ಪಕ್ಷಗಳಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ. ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಕೈಗೆ ಕೈಕೊಟ್ಟು ಕಮಲದ ಪತಾಕೆ ಹಿಡಿದಿದ್ದಾರೆ. ಬೆಳ್ತಂಗಡಿಯಲ್ಲಿ ನಡೆದ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ಪದಾಧಿಕಾರಿಗಳ ಸಭೆಯಲ್ಲಿ ಹಲವು ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಒಂದೆಡೆ ಕಾಂಗ್ರೆಸ್ ಪಕ್ಷದಲ್ಲಿ ಮೂವರು ನಾಯಕರುಗಳು ಮುಂದಿನ ಚುನಾಣೆಯಲ್ಲಿ ಸ್ಪರ್ಧಿಸಲು ಹಾತೊರೆಯುತ್ತಿದ್ದು, ಪಕ್ಷದೊಳಗೆ ಅಸಮಧಾನ, ಗೊಂದಗಳಿವೆ. ಜೊತೆಗೆ ಈ ಬಾರಿ […]Read More
ಭಾರತೀಯ ಸೇನೆಯ ಅಗ್ನಿಪಥ ಯೋಜನೆಗೆ ಅಗ್ನಿವೀರರಾಗಿ ಆಯ್ಕೆಯಾದ ಬೆಳ್ತಂಗಡಿ ತಾಲೂಕಿನ 4 ಜನ
ಬೆಳ್ತಂಗಡಿ: ಭಾರತೀಯ ಸೇನೆಗೆ ಅಗ್ನಿವೀರ್ ನೇಮಕಾತಿಯಲ್ಲಿ ಬೆಳ್ತಂಗಡಿ ತಾಲೂಕಿನಿಂದ ಅಗ್ನಿವೀರರಾಗಿ ನಾಲ್ಕು ಜನ ಆಯ್ಕೆಗೊಂಡಿರುವುದು ಶ್ಲಾಘನೀಯ. ಭಾರತೀಯ ಭೂ ಸೇನೆ ತಾಂತ್ರಿ ವಿಭಾಗಕ್ಕೆ ಬೆಳ್ತಂಗಡಿ ತಾಲೂಕಿನ ಧನುಷ್ ಗೌಡ, ಭಾರತೀಯ ನೌಕಾ ಸೇನೆಗೆ ಸೂರಜ್ ಶೆಟ್ಟಿ, ಭಾರತೀಯ ಭೂ ಸೇನೆಗೆ ರಜನೀಶ್ ಹಾಗೂ ವಿಜೇತ್ ಆಯ್ಕೆಗೊಂಡಿದ್ದಾರೆ. ಇವರಿಗೆ ಬೆಳ್ತಂಗಡಿ ತಾಲೂಕಿನ ಜನತೆಯ ಪರವಾಗಿ ಬೆಳ್ತಂಗಡಿ ಶಾಸಕರು ಹರೀಶ್ ಪೂಂಜ ಅಭಿನಂದನೆಯನ್ನು ತಿಳಿಸಿದ್ದಾರೆ.Read More
ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಪಾದಯಾತ್ರೆ: 17 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು
ಉಜಿರೆ: ಸಾವಿರಾರು ಭಕ್ತರ ತಾಣವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಸಂಭ್ರಮ. ಮಂಜುನಾಥ ಸ್ವಾಮಿಯ ದಿವ್ಯ ಸನ್ನಿಧಿಯಲ್ಲಿ ಕಾರ್ತಿಕ ಮಾಸದ ಶುಭ ಸಂದರ್ಭದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮದ ಅಂಗವಾಗಿ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಧರ್ಮಸ್ಥಳದವರೆಗೆ ದಶಮಾನೋತ್ಸವ ಪಾದಯಾತ್ರೆ ನ.19ರಂದು ಜರುಗಿತು. 17 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳ ಹಾಗೂ ಹೊರ ತಾಲೂಕಿನ ಭಕ್ತರು ಭಾಗಿಯಾಗಿದ್ದರು. ವಿವಿಧ ವೇಷ ಭೂಷಣಗಳು, ಭಜನಾ ತಂಡಗಳು ಪಾದಯಾತ್ರೆಯ ವಿಶೇಷ ಆಕರ್ಷಣೆಯಾಗಿದೆ. ಉಜಿರೆ […]Read More
ಹೊಸ್ಮಾರು: ಪಪ್ಪಾಯಿಯ ಒಳಭಾಗದಲ್ಲಿ ಕಂಡು ಬಂತು ಎರಡು ಪಪ್ಪಾಯಿಗಳು: ಪ್ರಕೃತಿಯ ವಿಸ್ಮಯವನ್ನು ಕಂಡು
ಈದು: ಮನವನ್ನು ಕದಿಯುವ ಹಲವಾರು ಅಂಶಗಳು ಪ್ರಕೃತಿಯಲ್ಲಿ ಜಗತ್ತಿನಲ್ಲಿ ನಡೆಯುತ್ತಿರುತ್ತವೆ. ಈ ಕೌತುಕಗಳು ನಮ್ಮ ಕಣ್ಣಿಗೆ ಅತಿ ವಿಶೇಷವಾದ ಅಂಶಗಳನ್ನು ನೀಡುತ್ತಿರುತ್ತವೆ. ಈ ಕೌತುಕಗಳನ್ನು ನಾವು ನಮ್ಮ ಕಣ್ಣಲ್ಲಿ ಮನದಲ್ಲಿ ಹಿಡಿದಿಟ್ಟಾಗ ಅತ್ಯಂತ ಮನೋಹರವಾದ ಅನುಭವ ನಮಗುಂಟಾಗುತ್ತದೆ. ಪ್ರಕೃತಿಯಲ್ಲಿ ಎಷ್ಟೇಷ್ಟೋ ಅಚ್ಚರಿಯ ಅದ್ಭುತ ಸಂಗತಿಗಳು ನಡೆಯುತ್ತಿರುತ್ತವೆ. ಈ ಅಚ್ಚರಿಗಳು ನಮ್ಮಲ್ಲಿ ಕೌತುಕಕ್ಕೆ ಕಾರಣವಾಗುತ್ತದೆ. ನಮ್ಮಲ್ಲಿ ಆನಂದವನ್ನು ಅದ್ಭುತದ ಸರಮಾಲೆಯನ್ನು ಉಂಟುಮಾಡುವಂತಹ ಈ ಚಿತ್ರಗಳು ಅದ್ಭುತ ದೃಶ್ಯಾವಳಿಗಳೆಂದು ಕರೆಯಿಸಿಕೊಳ್ಳುತ್ತವೆ. ಈ ನಿಗೂಢತೆಗಳನ್ನು ಬಿಚ್ಚಿಡುತ್ತಾ ಹೋದಂತೆಲ್ಲಾ ನಮಗೆ ಕುತೂಹಲಪೂರ್ಣ […]Read More
ಬೆಳ್ತಂಗಡಿ :ದಿನದಿಂದ ದಿನಕ್ಕೆ ಹರಡುತ್ತಿರುವ ಕೆಂಗಣ್ಣು ವೈರಸ್: ಬೆಳ್ತಂಗಡಿ ತಾಲೂಕಿನ ಜನತೆಯಲ್ಲಿ ಆವರಿಸಿದ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿಗೂ ಕೆಂಗಣ್ಣು ಕಾಯಿಲೆ ವಕ್ಕರಿಸಿದ್ದು ಈ ಕಾಯಿಲೆಯಿಂದ ಜನ ಸುಸ್ತಾಗಿ ಹೋಗಿದ್ದಾರೆ. ಕಣ್ಣಿನ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು ಜಿಲ್ಲಾ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ. ಬೆಳ್ತಂಗಡಿ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೆಂಗಣ್ಣು ಕಾಯಿಲೆ ಹೆಚ್ಚಾಗುತ್ತಿದ್ದು. ಹೆಚ್ಚಿನ ಜನರಲ್ಲಿ ಈ ರೋಗ ಆವರಿಸಿದೆ. ಇಡೀ ಊರಿನಲ್ಲಿ ಕಪ್ಪು ಕನ್ನಡಕ ಧರಿಸಿ ಓಡಾಡೋ ಜನ ಕಾಣಸಿಗುತ್ತಿದ್ದಾರೆ. ಭಾದಿತರಲ್ಲಿ ವಿದ್ಯಾರ್ಥಿಗಳು, ವ್ಯಾಪಾರಿಗಳು ಹೆಚ್ಚಿದ್ದು ಇವರ ಮೂಲಕ ಈ ವೈರಸ್ ಇತರರಿಗೆ ವೇಗವಾಗಿ […]Read More
ಹಿಂದೂ ಜನಜಾಗೃತಿ ಸಮಿತಿಯಿಂದ ಮಂಗಳೂರು ತಾಲೂಕಿನ ಸುರತ್ಕಲ್ ಮದ್ಯದಲಿ ಹಿಂದೂ ರಾಷ್ಟ್ರಜಾಗೃತಿ ಸಭೆ
ಮಂಗಳೂರು : ಹಿಂದೂ ಧರ್ಮವೂ ಅನಾದಿ ಮತ್ತು ಅನಂತವಾಗಿದೆ. ಹಿಮಾಲಯದಿಂದ ಕನ್ಯಾಕುಮಾರಿವರೆಗೆ ಇರುವಂತಹ ದೇವ ನಿರ್ಮಿತ ದೇಶವಿದು. ಭಾರತ ದೇಶವು ಪ್ರಪಂಚದ ದೇವರ ಕೋಣೆಯಾಗಿದೆ. ಕೇವಲ ಹಿಂದೂ ಧರ್ಮದಲ್ಲಿ ಮಾತ್ರ ಮೋಕ್ಷ ಪಡೆಯುವ ವಿಚಾರ ಮಾಡಲಾಗುತ್ತದೆ. ಹಿಂದೂ ಧರ್ಮವು ಒಂದು ದೊಡ್ಡ ಮುಷ್ಟಿ ಇದ್ದಂತೆ. ಆದರೆ ಅದನ್ನು ಸಡಿಲ ಮಾಡುವ ಷಡ್ಯಂತ್ರ ಈಗ ನಡೆಯುತ್ತಿದೆ. ಆದರೆ ನಾವೆಲ್ಲರೂ ಒಗ್ಗಟ್ಟಾಗಿ ಇದನ್ನು ತಡೆಯಬೇಕಾಗಿದೆ ಎಂದು ನಟರಾಜ ಪರ್ಕಳ ಇವರು ಹಿಂದೂ ಜನಜಾಗೃತಿ ಸಮಿತಿ ನ.15 ರಂದು ಆಯೋಜಿಸಿದ […]Read More