ಬೆಳ್ತಂಗಡಿ :ದಿನದಿಂದ ದಿನಕ್ಕೆ ಹರಡುತ್ತಿರುವ ಕೆಂಗಣ್ಣು ವೈರಸ್: ಬೆಳ್ತಂಗಡಿ ತಾಲೂಕಿನ ಜನತೆಯಲ್ಲಿ ಆವರಿಸಿದ ಖಾಯಿಲೆ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿಗೂ ಕೆಂಗಣ್ಣು ಕಾಯಿಲೆ ವಕ್ಕರಿಸಿದ್ದು ಈ ಕಾಯಿಲೆಯಿಂದ ಜನ ಸುಸ್ತಾಗಿ ಹೋಗಿದ್ದಾರೆ.
ಕಣ್ಣಿನ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು ಜಿಲ್ಲಾ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ. ಬೆಳ್ತಂಗಡಿ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೆಂಗಣ್ಣು ಕಾಯಿಲೆ ಹೆಚ್ಚಾಗುತ್ತಿದ್ದು. ಹೆಚ್ಚಿನ ಜನರಲ್ಲಿ ಈ ರೋಗ ಆವರಿಸಿದೆ. ಇಡೀ ಊರಿನಲ್ಲಿ ಕಪ್ಪು ಕನ್ನಡಕ ಧರಿಸಿ ಓಡಾಡೋ ಜನ ಕಾಣಸಿಗುತ್ತಿದ್ದಾರೆ. ಭಾದಿತರಲ್ಲಿ ವಿದ್ಯಾರ್ಥಿಗಳು, ವ್ಯಾಪಾರಿಗಳು ಹೆಚ್ಚಿದ್ದು ಇವರ ಮೂಲಕ ಈ ವೈರಸ್ ಇತರರಿಗೆ ವೇಗವಾಗಿ ಹರಡುತ್ತಿದೆ.