• December 9, 2024

ಹೊಸ್ಮಾರು: ಪಪ್ಪಾಯಿಯ ಒಳಭಾಗದಲ್ಲಿ ಕಂಡು ಬಂತು ಎರಡು ಪಪ್ಪಾಯಿಗಳು: ಪ್ರಕೃತಿಯ ವಿಸ್ಮಯವನ್ನು ಕಂಡು ಮೂಕವಿಸ್ಮಿತರಾದ ಗ್ರಾಮಸ್ಥರು

 ಹೊಸ್ಮಾರು: ಪಪ್ಪಾಯಿಯ ಒಳಭಾಗದಲ್ಲಿ ಕಂಡು ಬಂತು ಎರಡು ಪಪ್ಪಾಯಿಗಳು: ಪ್ರಕೃತಿಯ ವಿಸ್ಮಯವನ್ನು ಕಂಡು ಮೂಕವಿಸ್ಮಿತರಾದ ಗ್ರಾಮಸ್ಥರು

 

ಈದು: ಮನವನ್ನು ಕದಿಯುವ ಹಲವಾರು ಅಂಶಗಳು ಪ್ರಕೃತಿಯಲ್ಲಿ ಜಗತ್ತಿನಲ್ಲಿ ನಡೆಯುತ್ತಿರುತ್ತವೆ. ಈ ಕೌತುಕಗಳು ನಮ್ಮ ಕಣ್ಣಿಗೆ ಅತಿ ವಿಶೇಷವಾದ ಅಂಶಗಳನ್ನು ನೀಡುತ್ತಿರುತ್ತವೆ. ಈ ಕೌತುಕಗಳನ್ನು ನಾವು ನಮ್ಮ ಕಣ್ಣಲ್ಲಿ ಮನದಲ್ಲಿ ಹಿಡಿದಿಟ್ಟಾಗ ಅತ್ಯಂತ ಮನೋಹರವಾದ ಅನುಭವ ನಮಗುಂಟಾಗುತ್ತದೆ. 

ಪ್ರಕೃತಿಯಲ್ಲಿ ಎಷ್ಟೇಷ್ಟೋ ಅಚ್ಚರಿಯ ಅದ್ಭುತ ಸಂಗತಿಗಳು ನಡೆಯುತ್ತಿರುತ್ತವೆ. ಈ ಅಚ್ಚರಿಗಳು ನಮ್ಮಲ್ಲಿ ಕೌತುಕಕ್ಕೆ ಕಾರಣವಾಗುತ್ತದೆ. ನಮ್ಮಲ್ಲಿ ಆನಂದವನ್ನು ಅದ್ಭುತದ ಸರಮಾಲೆಯನ್ನು ಉಂಟುಮಾಡುವಂತಹ ಈ ಚಿತ್ರಗಳು ಅದ್ಭುತ ದೃಶ್ಯಾವಳಿಗಳೆಂದು ಕರೆಯಿಸಿಕೊಳ್ಳುತ್ತವೆ. ಈ ನಿಗೂಢತೆಗಳನ್ನು ಬಿಚ್ಚಿಡುತ್ತಾ ಹೋದಂತೆಲ್ಲಾ ನಮಗೆ ಕುತೂಹಲಪೂರ್ಣ ಅಂಶಗಳು ಹೆಚ್ಚು ಹೆಚ್ಚು ಕಣ್ಣಿಗೆ ಬೀಳುತ್ತಿರುತ್ತವೆ. ಅಂತಹ ಘಟನೆ ಇದೀಗ  ಕಾರ್ಕಳ ತಾಲೂಕಿನ, ಈದು ಗ್ರಾಮದ ಹೊಸ್ಮಾರ್ ಮಜಲೋಡಿ ಶ್ರೀಧಕ್ಷ್ ನಿವಾಸಿ ಬಾಲಕೃಷ್ಣ ಎಂಬವರ ಮನೆಯಲ್ಲಿ ಕಂಡುಬಂದಿದೆ.

ಹೌದು ಬಾಲಕೃಷ್ಣ ಇವರು ಬೆಳೆಸಿದಂತಹ ಪಪ್ಪಾಯಿ ಗಿಡದಲ್ಲಾದಂತಹ ವಿಸ್ಮಯ ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ ಎಂದರೆ ತಪ್ಪಾಗಲಾರದು. ಪಪ್ಪಾಯಿಯ ಒಳಭಾಗದಲ್ಲಿ ಎರಡು ಪಪ್ಪಾಯಿಗಳು ಕಾಣಿಸಿಕೊಂಡಿದ್ದು ಅಚ್ಚರಿಯನ್ನು ಮೂಡಿಸಿದೆ.  ಸಾಮಾನ್ಯವಾಗಿ ಪಪ್ಪಾಯಿಯ ಒಳಭಾಗದಲ್ಲಿ ಪಪ್ಪಾಯಿ ಬೀಜಗಳು ಕಾಣಿಸಿಕೊಳ್ಳುವುದು ಸಹಜ ಆದರೆ ಬಾಲಕೃಷ್ಣ ಅವರ ಮನೆಯಲ್ಲಿ ಬೆಳೆಸಲಾದ ಪಪ್ಪಾಯಿ ಗಿಡದಲ್ಲಿ ವಿಸ್ಮಯ ಕಾರಿಯಾದಂತಹ ಘಟನೆ ನಡೆದಿದ್ದು, ಅಲ್ಲಿಯ ಗ್ರಾಮಸ್ಥರಿಗೆ ಅಚ್ಚರಿಯನ್ನು ಮೂಡಿಸಿದೆ.  ಬಾಲಕೃಷ್ಣರವರ ಪತ್ನಿ ಪಪ್ಪಾಯಿಯನ್ನು ತುಂಡರಿಸುವ ವೇಳೆ ಪಪ್ಪಾಯಿಯ ಒಂದು ಭಾಗದೊಳಗೆ ಎರಡು ಸಣ್ಣ ಗಾತ್ರದ ಪಪ್ಪಾಯಿಗಳು ಕಾಣಿಸಿಕೊಂಡಿರುವುದು ಪ್ರಕೃತಿಯ ವಿಸ್ಮಯಕಾರಿ ಘಟನೆಯೇ ಹೌದು

Related post

Leave a Reply

Your email address will not be published. Required fields are marked *

error: Content is protected !!