ಬೆಳ್ತಂಗಡಿ: ಕಾಶಿಬೆಟ್ಟು ಎಂಬಲ್ಲಿ ದ್ವಿಚಕ್ರ ವಾಹನ ಮತ್ತು ಗೂಡ್ಸ್ ವಾಹನ ನಡುವೆ ಅಪಘಾತ ಸಂಭವಿಸಿದ್ದು ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿರುವ ಘಟನೆ ಡಿ.25 ರಂದು ಸಂಜೆ ವೇಳೆ ನಡೆದಿದೆ. ಚಿಕ್ಕಮಗಳೂರು ಕಡೆಗೆ ಹೋಗುತ್ತಿದ್ದ ವಾಹನ ಉಜಿರೆಯಿಂದ ಬೆಳ್ತಂಗಡಿ ಗೆ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ದ್ವಿಚಕ್ರ ವಾಹನ ಸವಾರ ಚಾರ್ಮಾಡಿ ಗ್ರಾಮದ ಪುರುಷೋತ್ತಮ ಪೂಜಾರಿ(20) ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.ಶವವನ್ನು ಬೆಳ್ತಂಗಡಿ ಶವಾಗಾರದಲ್ಲಿ […]
ಮಲೆಬೆಟ್ಟು: ಗೂಡ್ಸ್ ರಿಕ್ಷಾ ಹಾಗೂ ಶಾಲಾ ಬಸ್ ಮುಖಾ ಮುಖಿ ಡಿಕ್ಕಿ ಹೊಡೆದಿದ್ದು, ಓರ್ವ ಸಾವನ್ನಪ್ಪಿದ್ದಾನೆ, ಮೂವರು ಗಂಭೀರ ಗಾಯಗೊಂಡಿರುವ ಘಟನೆ ಡಿ.24 ರಂದು ಮಲೆಬೆಟ್ಟು ವನದುರ್ಗಾ ದೇವಸ್ಥಾನದ ಬಳಿ ನಡೆದಿದೆ. ಕೊಯ್ಯೂರಿನಿಂದ ಶಾಲಾ ಬಸ್ ಮಕ್ಕಳನ್ನು ಉಜಿರೆಗೆ ಕರೆದೊಯ್ಯುತ್ತಿದ್ದ ವೇಳೆ ಬೆಳ್ತಂಗಡಿಯಿಂದ ಕೊಯ್ಯೂರು ಕಡೆಗೆ ಹೋಗುತ್ತಿದ್ದ ಗೂಡ್ಸ್ ರಿಕ್ಷಾಗೆ ಡಿಕ್ಕಿ ಹೊಡೆದಿದ್ದು ರಿಕ್ಷಾದಲ್ಲಿದ್ದ ಕುವೆಟ್ಟು ಗ್ರಾಮದ ಪಿಲಿಚಾಮುಂಡಿ ನಿವಾಸಿ ಹನೀಫ್, ಪಣಕಜೆ ನಿವಾಸಿ ಮೊಹಮ್ಮದ್ ಗಾಯಗೊಂಡಿದ್ದು ಚಾಲಕ ಹನೀಫ್ ಗಂಭೀರ ಗಾಯಗೊಂಡಿದ್ದಾರೆ ರಝಾಕ್ ಸಾವನ್ನಪ್ಪಿದ್ದಾರೆ.Read More
ಮುಂಡಾಜೆ: ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಕಾಪು ಚಡವು ಉಳ್ಳಾಲ್ತಿ ಕಟ್ಟೆ ಬಳಿ ಶಬರಿಮಲೆಗೆ ಸಾಗುತ್ತಿದ್ದ ಮಿನಿ ಬಸ್ಸೊಂದು ಬ್ರೇಕ್ ಫೈಲ್ ಆಗಿ ಅರಣ್ಯಕ್ಕೆ ನುಗ್ಗಿದ ಘಟನೆ ಡಿ.23 ರಂದು ಬೆಳಗ್ಗೆ ನಡೆದಿದೆ. ಪರಿಣಾಮ ಗಾಯಗೊಂಡು ಮಿನಿ ಬಸ್ ನಲ್ಲಿದ್ದ ಶಬರಿಮಲೆ ಯಾತ್ರಾರ್ಥಿಗಳನ್ನು ಕಕ್ಕಿಂಜೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಆರು ಆಂಬುಲೆನ್ಸ್ ಆಗಮಿಸಿದ್ದು, ಬೆಳ್ತಂಗಡಿ ಸಂಚಾರಿ ಪೊಲೀಸರು ಹಾಗೂ ಸ್ಥಳೀಯರು ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.Read More
ಲಾಯಿಲ: ಉಜಿರೆಯಿಂದ ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ತೆರಳುತ್ತಿರುವ ವೇಳೆ ಕೊಯ್ಯೂರು ಕ್ರಾಸ್ ಬಳಿ ಬೈಕ್ ಗೆ ಹುಬ್ಬಳ್ಳಿಯಿಂದ ಧರ್ಮಸ್ಥಳ ಕ್ಕೆ ಬರುತ್ತಿದ್ದ ಕೆ ಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ಸಾವನ್ನಪ್ಪಿದ್ದು ಇನ್ನೋರ್ವ ಸವಾರ ಸಣ್ಣ ಪುಟ್ಟ ಗಾಯಗೊಂಡಿರುವ ಘಟನೆ ಡಿ.20 ರಂದು ನಡೆದಿದೆ. ಬೈಕ್ ಸವಾರ ವಿಜಯ್ ಎಂಬಾತ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಮತ್ತೋರ್ವ ಸಣ್ಣ ಪುಟ್ಟ ಗಾಯಗಳಿಂದ […]Read More
ಬೆಳ್ತಂಗಡಿ : ದಲಿತ ವ್ಯಕ್ತಿಯನ್ನು ಮನಬಂದಂತೆ ಥಳಿಸಿ, ಬೆತ್ತಲೆಗೊಳಿಸಿ ತೋಟಕ್ಕೆ ಎಸೆದು ಹೋದ
ಶಿಬಾಜೆ: ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಗುತ್ತುಮನೆ ಎಂಬಲ್ಲಿರುವ ಎಸಿ ಕುರಿಯನ್ ಎಂಬವರ ಬಾಬ್ತು ಮಾಲಿಕತ್ವದ ಸಾರ ಫಾರ್ಮ್ ತೋಟದಲ್ಲಿ ಕೆಲಸಕ್ಕಿದ್ದ ದಲಿತ ವ್ಯಕ್ತಿ ಶ್ರೀಧರ ಎಂಬಾತನಿಗೆ 4 ಜನ ಆರೋಪಿಗಳಾದ ತಿಮ್ಮಪ್ಪ ಪೂಜಾರಿ, ಲಕ್ಷ್ಮಣ ಪೂಜಾರಿ, ಕೆಕೆ ಆನಂದ ಗೌಡ ಹಾಗೂ ಮಹೇಶ್ ಎಂಬವರು ಕಿಬ್ಬೊಟ್ಟೆಗೆ ಮತ್ತು ಎದೆಗೆ ಕೈಯಿಂದ ಹೊಡೆದಿದ್ದಾರೆ. ತೋಟದ ಆಫೀಸ್ನ ಎದುರು ಇರುವ ಸಾರ್ವಜನಿಕ ಡಾಮಾರು ರಸ್ತೆಯ ಬದಿಯಲ್ಲಿ ಜೋರಾಗಿ ಬೊಬ್ಬೆ ಹಾಕಿತ್ತಿರುವುದು ಕೇಳಿ ಹೊರಗೆ ಬಂದ ಸಾರ ಫಾರ್ಮ್ […]Read More
ಬೆಳ್ತಂಗಡಿ: ಕಾರ್ಕಳದಿಂದ ಬೆಳ್ತಂಗಡಿಗೆ ಹೋಗುತ್ತಿದ್ದ ಎಚ್ ಟಿ ಕಂಪೆನಿ ಲಿಮಿಟೆಡ್ ಸಂಸ್ಥೆಗೆ ಸೇರಿದ ಬಸ್ ಹುಂಡೈ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, 2 ವರ್ಷದ ಮಗು ಸೇರಿ ಸ್ಥಳದಲ್ಲೇ 3 ಮಂದಿ ಸಾವಿಗೀಡಾದ ದಾರುಣ ಘಟನೆ ಇಂದು ಬೆಳಗ್ಗೆ ನೆಲ್ಲಿಕಾರಿನಲ್ಲಿ ಸಂಭವಿಸಿದೆ. ಬೆಂಗಳೂರಿನಲ್ಲಿ ವಾಸವಾಗಿದ್ದ ಾಂಧ್ರದ ಕುಟುಂಬ ಧರ್ಮಸ್ಥಳಕ್ಕೆ ಭೇಟಿ ನೀಡಿ ಅಲ್ಲಿಂದ ಶೃಂಗೇರಿ ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಮೃತರು ಬೆಂಗಳೂರು ಮೂಲದ ನಾಗರಾಜ್(40) ಪತ್ನಿ ಪ್ರತ್ಯುಷಾ(32) 2 ವರ್ಷದ ಮಗು […]Read More
ಮಲವಂತಿಗೆ: ಅಬ್ಬಿ ಎಂಬಲ್ಲಿ ಅಪರಿಚಿತ ವ್ಯಕ್ತಿಗೆ ಡಿಕ್ಕಿ ಹೊಡೆದ ಟ್ರಾಕ್ಟರ್: ಮೃತಪಟ್ಟ ಅಪರಿಚಿತ
ಬೆಳ್ತಂಗಡಿ: ಮಲವಂತಿಗೆ ಗ್ರಾಮದ ಅಬ್ಬಿ ಎಂಬಲ್ಲಿ ರಸ್ತೆ ಅಪಘಾತ ಪ್ರಕರಣದಲ್ಲಿ ಗಾಯಗೊಂಡು ಮೃತಪಟ್ಟಿರುವ ಅಪರಿಚಿತ ವ್ಯಕ್ತಿ ಲೋಕೇಶ್ ಎಂಬಾತನ ಬಗ್ಗೆ ಮಾಹಿತಿ ತಿಳಿದಲ್ಲಿ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಗೆ (08256-234100) ತಿಳಿಸುವಂತೆ ಬೆಳ್ತಂಗಡಿ ಪೊಲೀಸ್ ಉಪನಿರೀಕ್ಷಕರು ಮಾಹಿತಿ ನೀಡುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಡಿ.7ರಂದು ನೊಂದಣಿಯಾಗದ ಹೊಸ ಟ್ರಾಕ್ಟರ್ ವಾಹನವನ್ನು ಚಾಲಕ ದೀಪಕ್ ಎಂಬಾತ ಮಲವಂತಿಗೆ ಗ್ರಾಮದ ಅಬ್ಬಿ ಎಂಬಲ್ಲಿ ಡಿ.7ರಂದು ಚಾಲಕ ದೀಪಕ್ ಎಂಬಾತ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಪಾದಾಚಾರಿ ಲೋಕೇಶ್ ಎಂಬಾತನಿಗೆ ಡಿಕ್ಕಿ […]Read More
ಮಲವಂತಿಗೆ: ಮಲವಂತಿಗೆ ಗ್ರಾ.ಪಂ ವ್ಯಾಪ್ತಿಯ ದುರ್ಗಮ ಎಳನೀರು ಭಾಗದ ಬಂಗಾರ ಬಳಿಗೆ ಎಂಬಲ್ಲಿ ಕಬ್ಬಿಣದ ಸರಳು ಸಾಗಿಸುತ್ತಿದ್ದ ವೇಳೆ ಟ್ರಾಕ್ಟರ್ ಪಲ್ಟಿಯಾಗಿ ಚಿಕ್ಕಮಗಳೂರು ಮೂಲದ ಕಾರ್ಮಿಕ ಅಶೋಕ್ ಮೃತಪಟ್ಟಿರುವ ಘಟನೆ ಡಿ.7 ರಂದು ನಡೆದಿದೆ. ಬಂಗಾರ ಬಳಿಗೆ ಎಂಬಲ್ಲಿ ಕಿಂಡಿಅಣೆಕಟ್ಟು ನಿರ್ಮಾಣವಾಗುತ್ತಿದ್ದು, ಇದರ ಕಾಮಗಾರಿಗೆಂದು ಕಬ್ಬಿಣದ ಸರಳು ಸಾಗಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟ್ರಾಕ್ಟರ್ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮತ್ತು ಮತ್ತೋರ್ವ ಪ್ರಾಣಾಪಾಯದಿಂದ ಪಾರಾಗಿದ್ದು, ಹಿಂಬದಿ ಕುಳಿತಿದ್ದ ಕಾರ್ಮಿಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ […]Read More
ಬಂಟ್ವಾಳ: ಕಾರಿಗೆ ಡಿಕ್ಕಿ ಹೊಡೆದು ಮನೆಗೆ ನುಗ್ಗಿದ ಪಿಕಪ್: ಕೂದಲೆಳೆ ಅಂತರದಲ್ಲಿ ಪಾರಾದ
ಬಂಟ್ವಾಳ: ಮಡಂತ್ಯಾರ್ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ಪಿಕಪ್ ಹಾಗೂ ಮಂಗಳೂರಿನಿಂದ ಮಡಂತ್ಯಾರ್ ಕಡೆ ಸಾಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು,ಪಿಕಪ್ ವಾಹನ ಮನೆಗೆ ನುಗ್ಗಿದ ಘಟನೆ ನ.26 ರಂದು ಬಂಟ್ವಾಳದಲ್ಲಿ ನಡೆದಿದೆ. ಪರಿಣಾಮ ಮನೆಗೆ ಅಪಾರ ಹಾನಿಯಾಗಿದ್ದು ಮನೆಯವರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಚಾಲಕರಿಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಭಾರೀ ಅನಾಹುತದಿಂದ ಬಚಾವ್ ಆಗಿದ್ದಾರೆ.Read More
ಮುಂಡಾಜೆ: ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಬಿದ್ದ ರಿಕ್ಷಾ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ
ಮುಂಡಾಜೆ: ಧರ್ಮಸ್ಥಳದಿಂದ ಚಿಕ್ಕಮಗಳೂರಿಗೆ ಪ್ರಯಾಣಿಸುತ್ತಿದ್ದ ರಿಕ್ಷಾ, ಬಸ್ ಗೆ ಸೈಡ್ ಕೊಡುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಮುಂಡಾಜೆ ಗ್ರಾಮದ ಕಾಪು ನರ್ಸರಿ ಬಳಿ ನ.24 ರಂದು ನಡೆದಿದೆ. ಪಲ್ಟಿಯಾದ ರಿಕ್ಷಾ ಜಖಂಗೊಂಡಿದೆ. ಇದರಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕಿತ್ಸೆಗಾಗಿ ಸ್ಥಳೀಯರು ಆಸ್ಪತ್ರೆ ಗೆ ದಾಖಲಿಸಿದ್ದಾರೆ.Read More