ಮಲೆಬೆಟ್ಟು: ಗೂಡ್ಸ್ ರಿಕ್ಷಾ ಹಾಗೂ ಶಾಲಾ ಬಸ್ ಮುಖಾ ಮುಖಿ ಡಿಕ್ಕಿ: ಗೂಡ್ಸ್ ರಿಕ್ಷಾದಲ್ಲಿದ್ದ ಮೂವರಿಗೆ ಗಂಭೀರ ಗಾಯ, ಓರ್ವ ಸಾವು
ಮಲೆಬೆಟ್ಟು: ಗೂಡ್ಸ್ ರಿಕ್ಷಾ ಹಾಗೂ ಶಾಲಾ ಬಸ್ ಮುಖಾ ಮುಖಿ ಡಿಕ್ಕಿ ಹೊಡೆದಿದ್ದು, ಓರ್ವ ಸಾವನ್ನಪ್ಪಿದ್ದಾನೆ, ಮೂವರು ಗಂಭೀರ ಗಾಯಗೊಂಡಿರುವ ಘಟನೆ ಡಿ.24 ರಂದು ಮಲೆಬೆಟ್ಟು ವನದುರ್ಗಾ ದೇವಸ್ಥಾನದ ಬಳಿ ನಡೆದಿದೆ.
ಕೊಯ್ಯೂರಿನಿಂದ ಶಾಲಾ ಬಸ್ ಮಕ್ಕಳನ್ನು ಉಜಿರೆಗೆ ಕರೆದೊಯ್ಯುತ್ತಿದ್ದ ವೇಳೆ ಬೆಳ್ತಂಗಡಿಯಿಂದ ಕೊಯ್ಯೂರು ಕಡೆಗೆ ಹೋಗುತ್ತಿದ್ದ ಗೂಡ್ಸ್ ರಿಕ್ಷಾಗೆ ಡಿಕ್ಕಿ ಹೊಡೆದಿದ್ದು ರಿಕ್ಷಾದಲ್ಲಿದ್ದ ಕುವೆಟ್ಟು ಗ್ರಾಮದ ಪಿಲಿಚಾಮುಂಡಿ ನಿವಾಸಿ ಹನೀಫ್, ಪಣಕಜೆ ನಿವಾಸಿ ಮೊಹಮ್ಮದ್ ಗಾಯಗೊಂಡಿದ್ದು ಚಾಲಕ ಹನೀಫ್ ಗಂಭೀರ ಗಾಯಗೊಂಡಿದ್ದಾರೆ ರಝಾಕ್ ಸಾವನ್ನಪ್ಪಿದ್ದಾರೆ.