ಮಚ್ಚಿನ: ಮಚ್ಚಿನ ಗ್ರಾಮದ ಕಿನ್ನಿಪಲ್ಕೆ ಜಯ ಪೂಜಾರಿಯವರ ಹಟ್ಟಿಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಹಾನಿಯಾದ ಘಟನೆ ಜು.6 ರಂದು ರಾತ್ರಿ ನಡೆದಿದೆ. ಮಳೆಗಾಲಕ್ಕೆ ಶೇಖರಿಸಿಟ್ಟ ಕಟ್ಟಿಗೆ, ತೆಂಗಿನಕಾಯಿ, ಹಾಗೂ ಇತರ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು ಅಪಾರ ನಷ್ಟವುಂಟಾಗಿದೆ. ಸ್ಥಳಕ್ಕೆ ಗ್ರಾ.ಪಂ ಅಧ್ಯಕ್ಷರು, ಗ್ರಾಮಕರಣೀಕ ಭೇಟಿ ನೀಡಿದರು.
ಕಾಸರಗೋಡು: ಭಾರಿ ಗಾಳಿ ಮಳೆಗೆ ಮರ ಬಿದ್ದು ಆಟವಾಡುತ್ತಿದ್ದ ಬಾಲಕಿ ಸಾವನ್ನಪ್ಪಿದ ಘಟನೆ ಕಾಸರಗೋಡಿನ ಪುತ್ತಿಗೆ ಸಮೀಪದ ಅಂಗಡಿಮೊಗರಿನಲ್ಲಿ ನಡೆದಿದೆ. ಆರನೆ ತರಗತಿ ವಿದ್ಯಾರ್ಥಿನಿ ಆಯಿಷತ್ ಮಿನ್ ಹಾ ಮೃತ ಬಾಲಕಿ ನೆನ್ನೆ ಸಂಜೆ ನಾಲ್ಕು ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಬಾಲಕಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಮರ ಮುರಿದು ಬಿದ್ದಿದೆ. ಕೂಡಲೆ ಅಲ್ಲಿದ್ದ ಸ್ಥಳೀಯ ರು ಬಾಲಕಿಯನ್ನು ಮರದಡಿಯಿಂದ ಹೊರ ತೆಗೆದು ಕುಂಬಳೆಯ ಆಸ್ಪತ್ರೆಗೆ ಸಾಗಿಸಿದ್ದಾರೆ ಈ ವೇಳೆ ಬಾಲಕಿ ಮೃತಪಟ್ಟಿದ್ದಾಳೆRead More
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಗುಂಡೂರಿ ಗ್ರಾಮದ ರಾಜೇಶ್ ಅವರ ಪತ್ನಿ ಅನುಷಾ ಎಂಬವರಿಗೆ ಪ್ರಸವ ಪೂರ್ವ ಹೆರಿಗೆ ನೋವು ಮತ್ತು ಮೂತ್ರ ಸೊಂಕಿನ ಕೇಸ್ ಇದೆ ಎಂದು 10.51am ಗೆ ಸಮುದಾಯ ಆರೋಗ್ಯ ಕೇಂದ್ರ ವೇಣೂರು ಇಲ್ಲಿಂದ ಮಂಗಳೂರು ಸರಕಾರಿ ಲೇಡಿಗೋಸಾನ್ ಆಸ್ಪತ್ರೆಗೆ ರೋಗಿಯನ್ನು ಕರೆದುಕೊಂಡು ಹೋಗಬೇಕೆಂದು ಎಮರ್ಜೆನ್ಸಿ ಕರೆ ಬಂದಿದ್ದು.. ಕರೆ ಬಂದ ತಕ್ಷಣ ಕಾರ್ಯ ಪ್ರವೃತ್ತ ರಾದ ಬೆಳ್ತಂಗಡಿ 108 ಆಂಬುಲೆನ್ಸ್ ಸಿಬ್ಬಂದಿಗಳು 11.30am ಒಳಗೆ ವೇಣೂರು ಆಸ್ಪತ್ರೆಯಿಂದ ರೋಗಿಯನ್ನು ಕರೆದುಕೊಂಡು,,ಹೋಗುವಷ್ಟರಲ್ಲಿ ರೋಗಿಯ […]Read More
ಕರಾಯ: ಹೆರಿಗೆ ವೇಳೆ ಹಿರೇಬಂಡಾಡಿ ಗ್ರಾಮದ ಆಶಾ ಕಾರ್ಯಕರ್ತೆ ಭವ್ಯ ಮೊನ್ನೆ ಹೆರಿಗೆ ವೇಳೆ ರಕ್ತಸ್ರಾವದಿಂದ ಮೃತಪಟ್ಟಿದ್ದ ಬೆನ್ನಿಗೆ ಅವರ ಹಸುಗೂಸು ಗುರುವಾರ ಮುಂಜಾನೆ ಮೃತಪಟ್ಟಿದೆ ಎನ್ನಲಾಗಿದೆ. ಭವ್ಯ ಅವರು ಕಳೆದ ಮಂಗಳವಾರ ರಾತ್ರಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಹೆರಿಗೆಯಾಗುತ್ತಲೇ ರಕ್ತಸ್ರಾವ ಉಂಟಾಗಿ ಸಾವನ್ನಪ್ಪಿದ್ದಾರೆ. ಜನಿಸಿದ ಗಂಡು ಮಗುವನ್ನು ಮಂಗಳೂರಿನ ಸರಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮುಂಜಾನೆ ಮಗು ಮೃತಪಟ್ಟಿದೆ ಎನ್ನಲಾಗಿದೆRead More
ಉಪ್ಪಿನಂಗಡಿ: ಹೆರಿಗೆ ಸಂದರ್ಭದಲ್ಲಿ ಉಂಟಾದ ತೀವ್ರ ರಕ್ತಸ್ರಾವದಿಂದ ಮಗುವಿಗೆ ಜನ್ಮನೀಡಿದ ಬಳಿಕ ಹಿರೇಬಂಡಾಡಿ ಗ್ರಾಮದ ಆಶಾ ಕಾರ್ಯಕರ್ತೆ ಮೃತಪಟ್ಟ ದಾರುಣ ಘಟನೆ ಜೂ.21 ರಂದು ಬೆಳಗ್ಗೆ ನಡೆದಿದೆ. ಮೃತಪಟ್ಟ ದುರ್ದೈವಿ ಹಿರೇಬಂಡಾಡಿ ಗ್ರಾಮದ ಮುರ ಕಾಲೋನಿ ನಿವಾಸಿ ಭವ್ಯ ಎಂದು ತಿಳಿದುಬಂದಿದೆ. ಮೃತರು ಪತಿ ಬಾಲಕೃಷ್ಣ ಗೌಡ, ಪುತ್ರ ಭವಿಷ್, ಸ್ವಸ್ತಿಕ್ ಮತ್ತು ಹಸುಗೂಸು ಮಗುವನ್ನು ಅಗಲಿದ್ದಾರೆ.Read More