ಬೆಳ್ತಂಗಡಿ 108 ಆಂಬುಲೆನ್ಸ್ ನಲ್ಲಿ ಹೆಣ್ಣು ಮಗುವಿನ ಜನನ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಗುಂಡೂರಿ ಗ್ರಾಮದ ರಾಜೇಶ್ ಅವರ ಪತ್ನಿ ಅನುಷಾ ಎಂಬವರಿಗೆ ಪ್ರಸವ ಪೂರ್ವ ಹೆರಿಗೆ ನೋವು ಮತ್ತು ಮೂತ್ರ ಸೊಂಕಿನ ಕೇಸ್ ಇದೆ ಎಂದು 10.51am ಗೆ ಸಮುದಾಯ ಆರೋಗ್ಯ ಕೇಂದ್ರ ವೇಣೂರು ಇಲ್ಲಿಂದ ಮಂಗಳೂರು ಸರಕಾರಿ ಲೇಡಿಗೋಸಾನ್ ಆಸ್ಪತ್ರೆಗೆ ರೋಗಿಯನ್ನು
ಕರೆದುಕೊಂಡು ಹೋಗಬೇಕೆಂದು ಎಮರ್ಜೆನ್ಸಿ ಕರೆ ಬಂದಿದ್ದು.. ಕರೆ ಬಂದ ತಕ್ಷಣ ಕಾರ್ಯ ಪ್ರವೃತ್ತ ರಾದ ಬೆಳ್ತಂಗಡಿ 108 ಆಂಬುಲೆನ್ಸ್ ಸಿಬ್ಬಂದಿಗಳು 11.30am ಒಳಗೆ ವೇಣೂರು ಆಸ್ಪತ್ರೆಯಿಂದ ರೋಗಿಯನ್ನು ಕರೆದುಕೊಂಡು,,
ಹೋಗುವಷ್ಟರಲ್ಲಿ ರೋಗಿಯ ಚಲನ ವಲನ ಗಮನಿಸಿದ ತುರ್ತು ವೈದ್ಯಕೀಯ ತಜ್ಞ ಕೇಶವ. ಕೆ. ಅವರು ಆಂಬುಲೆನ್ಸ್ ಮಂಗಳೂರಿನ ಪಡೀಲ್ ತಲುಪುತಿದ್ದಂತೆ ಆಂಬುಲೆನ್ಸ್ ನಲ್ಲಿಯೇ ಬಹಳ ಕ್ಲಿಷ್ಟಕರವಾದ (7 ತಿಂಗಳ ಪ್ರಸವ ಪೂರ್ವ ಗರ್ಭಿಣಿ ಮತ್ತು ,ಮಗು ಹೊಟ್ಟೆಯಲ್ಲಿಯೇ ಮಲ ವಿಸರ್ಜನೆ ಮಾಡಿದ್ದು ಅಲ್ಲದೆ ಬ್ರೀಚ್ ಪ್ರಸ್ತುತಿ (breach presentation)ಹೆರಿಗೆ ಯನ್ನು ಮಾಡಿ ಮಗುವನ್ನು ಮತ್ತು ತಾಯೀಯನ್ನು ಮಂಗಳೂರಿನ ಸರಕಾರಿ ಲೇಡಿಗೊಶನ್ ಆಸ್ಪತ್ರೆಗೆ ಬಹಳ ಸುರಕ್ಷಿತವಾಗಿ ದಾಖಲಿಸಿದರು.
ಇಷ್ಟರ ರವರೆಗೆ ಕೇಶವ ಕೆ ಇವರು ಮಾಡಿದ ಸುರಕ್ಷಿತ 60ನೇ ಆಂಬುಲೆನ್ಸ್ ಹೆರಿಗೆಯಾಗಿರುತ್ತದೆ. ಬೆಳ್ತಂಗಡಿಗೆ ಹೊಸದಾಗಿ ಆಯ್ಕೆಗೊಂಡಿರುವ ಎಮರ್ಜೆನ್ಸಿ (ಪೈಲೆಟ್) ಚಾಲಕ ಮಂಜುನಾಥ್ ಎಚ್. ಕೆ. ಅವರು ಸಹಕರಿಸಿ ಕಾರ್ಯಪ್ರವೃತರಾದರು.