ಪುತ್ತೂರು: ಇವರು ಮಾಧವ ಗೌಡ. ಪುತ್ತೂರು ತಾಲೂಕಿನ ಕೆಮ್ಮಾಯಿ ಬೀರಿಗ ನಿವಾಸಿಯಾಗಿದ್ದು, ಮಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ಕಾಲು ಜಾರಿ ಬಿದ್ದು ತಲೆಗೆ ತೀವ್ರವಾಗಿ ಏಟು ಬಿದ್ದು ಕೋಮ ಸ್ಥಿತಿಗೆ ತಲುಪಿದ್ದಾರೆ. ತೀವ್ರ ಬಡತನದ ಕುಟುಂಬ ಇವರದ್ದಾಗಿದ್ದು, ಚಿಕಿತ್ಸಾ ವೆಚ್ಚ ಭರಿಸಲು ಅಸಾಧ್ಯವಾದುದರಿಂದ ಸಹೃದಯಿ ದಾನಿಗಳಿಂದ ಇವರ ಕುಟುಂಬ ನೆರವನ್ನು ಕೇಳಿದ್ದಾರೆ. ತನ್ನ ಪತ್ನಿ ಗಂಡನನ್ನು ನೆನೆಯುತ್ತ ಮಕ್ಕಳು ತಂದೆಯ ಸ್ಥಿತಿಯನ್ನು ಕಂಡು ಕಣ್ಣೀರಿಡುತ್ತ ತನ್ನ ಯಜಮಾನನ ಮರುಜೀವಕ್ಕಾಗಿ ಸಹಾಯಕ್ಕೆ ಅಂಗಲಾಚುತ್ತಿರುವುದನ್ನು ಕಂಡರೆ ಮಾನವೀಯತೆಯಿದ್ದವರು […]
ನ್ಯಾಯತರ್ಪು ಗ್ರಾಮದ ನಾಳ ದೇವಿ ನಗರ ಶಂಕರ ಶೆಟ್ಟಿ ,ಕೃಷ್ಣಪ್ಪ ಪೂಜಾರಿ ಮತ್ತು ಅಂಬಿಕಾ ಇವರ ಮನೆಗೆ ಅ12 ರಂದು ಸಿಡಿಲು ಬಡಿದು ಅಪಾರ ಹಾನಿ ಸಂಭವಿಸಿದ್ದು ಇಂದು ಹಾನಿಯಾದ ಮನೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಕುಮಾರ್ ,ಅಬ್ದುಲ್ ಲತೀಪ್ ,ಮಾಜಿ ಪಂಚಾಯತ್ ಉಪಾಧ್ಯಕ್ಷರಾದ ಸತೀಶ್ ನಾಳ,ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.Read More
ಬೆಳ್ತಂಗಡಿ: ಎರಡು ದಿನಗಳ ಹಿಂದೆಯಷ್ಟೇ ಮಾಲಾಡಿ ನಿವಾಸಿ ಶಬೀರ್ ಎಂಬವರು ಅಳದಂಗಡಿ ನಿವಾಸಿ ಮರಿಯಮ್ಮ ಎಂಬವರನ್ನು ಆಂಬುಲೆನ್ಸ್ ನಲ್ಲಿ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಆಂಬುಲೆನ್ಸ್ ಪಲ್ಟಿಯಾಗಿ ಚಾಲಕ ಮೃತಪಟ್ಟಿದ್ದರು. ಆಂಬುಲೆನ್ಸ್ ನಲ್ಲಿದ್ದ ಮಹಿಳೆಯನ್ನು ತಕ್ಷಣ ಬೇರೊಂದು ಗಾಡಿಯಲ್ಲಿ ಕೊಂಡೊಯ್ಯಲಾಗಿತ್ತಾದರೂ ಇದೀಗ ಆ ಮಹಿಳೆಯೂ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಮೃತಪಟ್ಟ ಮಹಿಳೆ ಅಳದಂಗಡಿ ಸಮೀಪದ ಬಡಗಕಾರಂದೂರು ಗ್ರಾಮದ ಸುಂಕದಕಟ್ಟೆ ನಿವಾಸಿ ದಿ.ಹಸನ್ ಅವರ ಪತ್ನಿ ಮರಿಯಮ್ಮ ಎಂದು ತಿಳಿದುಬಂದಿದೆRead More
ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ವಿಘ್ನೇಶ್ ಎಂಬ ಯುವಕನಿಗೆ ಬೇಕಾಗಿದೆ ನೆರವಿನ ಹಸ್ತ:
ನಾವರ: ಸುಳ್ಕೇರಿ ಗ್ರಾ.ಪಂ ವ್ಯಾಪ್ತಿಯ ನಾವರ ಗ್ರಾಮದ ಗಿರಿಯಪ್ಪ ನಾಯ್ಕ ಇವರ ಪುತ್ರ ವಿಘ್ನೇಶ್ ಎಂಬ ಯುವಕ ಆ.20 ರಂದು ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ತಲೆ ಮತ್ತು ಎದೆ ಭಾಗಕ್ಕೆ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಈ ಕುಟುಂಬವು ತೀರ ಬಡತನದಲ್ಲಿದೆ. ಆಸ್ಪತ್ರೆಯ ವೆಚ್ಚ ಲಕ್ಷಕ್ಕೂ ಅಧಿಕವಾಗಿ ಖರ್ಚಾಗುತ್ತದರ ಎಂದು ಡಾಕ್ಟರ್ ತಿಳಿಸಿದ್ದಾರೆ. ಈ ಕುಟುಂಬವು ಡಾಕ್ಟರ್ ಹೇಳಿದಷ್ಟು ಹಣ ಬರಿಸಲು ಅಸಮರ್ಥರಾಗಿದ್ದು ದಾನಿಗಳು, ಸಂಘ ಸಂಸ್ಥೆಗಳ, ನಮ್ನೆಲ್ಲರ ಆರ್ಥಿಕ ಸಹಾಯದ ಅವಶ್ಯಕತರ […]Read More
ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯನ್ನು ಸಾಗಿಸುತ್ತಿದ್ದ ಆಂಬುಲೆನ್ಸ್ ಪಲ್ಟಿ: ಆಂಬುಲೆನ್ಸ್ ಚಾಲಕ ಮಾಲಾಡಿ ನಿವಾಸಿ
ಬೆಳ್ತಂಗಡಿ: ತುರ್ತಾಗಿ ರೋಗಿಯೋರ್ವರನ್ನು ಬೆಳ್ತಂಗಡಿ ಯಿಂದ ಮಂಗಳೂರು ಕೆಎಂಸಿ ಆಸ್ಪತ್ರೆಗೆ ಸಾಗಿಸುತ್ತಿದ್ದ ಖಾಸಗಿ ಆ್ಯಂಬುಲೆನ್ಸ್ ವಾಹನವೊಂದು ವಗ್ಗ ಸಮೀಪದ ಅಂಚಿಕಟ್ಟೆ ಎಂಬಲ್ಲಿ ಪಲ್ಟಿಯಾಗಿದ್ದು, ವಾಹನ ಚಾಲಕ ಮೃತಪಟ್ಟಿರುವ ಘಟನೆ ಇಂದು ನಡೆದಿದೆ. ಮೃತಪಟ್ಟ ಆಂಬುಲೆನ್ಸ್ ಚಾಲಕ ಮಾಲಾಡಿ ನಿವಾಸಿ ಶಬೀರ್( 36) ಎಂದು ಗುರುತಿಸಲಾಗಿದೆ. ರೋಗಿಯನ್ನು ಬೇರೆ ವಾಹನದಲ್ಲಿ ಕೊಂಡೊಯ್ಯಲಾಯಿತು.Read More
ಮುಂಡಾಜೆ: ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಬಳಿ ರಾಷ್ಟ್ರೀಯ ಹೆದ್ದಾರಿಗೆ ಭಾರೀ ಗಾತ್ರದ ಮರವೊಂದು ಉರುಳಿ ಬಿದ್ದಿದ್ದು, ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಂಡಿರುವ ಘಟನೆ ಇಂದು ನಡೆದಿದೆ. ಸ್ಥಳೀಯರು ತಕ್ಷಣ ಶೌರ್ಯ ಸ್ವಯಂ ಸೇವಕರಿಗೆ ಮಾಹಿತಿ ತಿಳಿಸಿದ್ದು, ಜಗದೀಶ ನಾಯ್ಕ ಹಾಗೂ ಸಚಿನ್ ಬಿಢೆ ಕೂಡಲೇ ಕಾರ್ಯಪ್ರವೃತರಾಗಿ ಮರವನ್ನು ತೆರವುಗೊಳಿಸಲಾಗಿದೆ.Read More
ಬೆಳ್ತಂಗಡಿ: ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ ಮಹಿಳೆಯೊಬ್ಬರು ಆಸ್ಪತ್ರೆಯಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ. ಸಾವಿಗೆ ವೈದ್ಯರ ನಿರ್ಲಕ್ಷ್ಯ ಎನ್ನುವ ಗಂಭೀರ ಆರೋಪ ವ್ಯಕ್ತವಾದ ಬೆನ್ನಲ್ಲೇ ಮಹಿಳೆಯ ಸಂಬಂಧಕರು ಪ್ರತಿಭಟಿಸಿದಾಗ ಪೊಲೀಸ್ ಬಲ ಪ್ರಯೋಗ ನಡೆದಿದ್ದು, ಸಾವಿಗೆ ಕಾರಣವಾದ ವೈದ್ಯರ ವಿರುದ್ಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ನಿವಾಸಿ ಪ್ರದೀಪ್ ಆಚಾರ್ಯ ಎಂಬವರ ಪತ್ನಿ ಶಿಲ್ಪಾ ಆಚಾರ್ಯ ಮೃತ ದುರ್ದೈವಿ. ತುಂಬು ಗರ್ಭಿಣಿ ಮಹಿಳೆ ಶಿಲ್ಪಾ ಆಚಾರ್ಯ ಚೊಚ್ಚಲ ಹೆರಿಗೆಗಾಗಿ ಮಂಗಳೂರಿನ ಹೆಸರಾಂತ […]Read More