• September 12, 2024

ಪುತ್ತೂರು: ಕಾಲು ಜಾರಿ ಬಿದ್ದು ತಲೆಗೆ ತೀವ್ರವಾದ ಏಟಾಗಿ ಕೋಮ ಸ್ಥಿತಿಯಲ್ಲಿರುವ ಮಾಧವ ಗೌಡ: ತೀವ್ರ ಬಡಕುಟುಂಬಕ್ಕೆ ಬೇಕಾಗಿದೆ ನೆರವಿನ ಹಸ್ತ: ನಮ್ಮ ಸಣ್ಣ ಸಹಾಯ ಒಂದು ಜೀವವನ್ನು ಉಳಿಸಬಹುದಲ್ಲವೇ???

 ಪುತ್ತೂರು: ಕಾಲು ಜಾರಿ ಬಿದ್ದು ತಲೆಗೆ ತೀವ್ರವಾದ ಏಟಾಗಿ ಕೋಮ ಸ್ಥಿತಿಯಲ್ಲಿರುವ ಮಾಧವ ಗೌಡ: ತೀವ್ರ ಬಡಕುಟುಂಬಕ್ಕೆ ಬೇಕಾಗಿದೆ ನೆರವಿನ ಹಸ್ತ: ನಮ್ಮ ಸಣ್ಣ ಸಹಾಯ ಒಂದು ಜೀವವನ್ನು ಉಳಿಸಬಹುದಲ್ಲವೇ???

ಪುತ್ತೂರು: ಇವರು ಮಾಧವ ಗೌಡ. ಪುತ್ತೂರು ತಾಲೂಕಿನ ಕೆಮ್ಮಾಯಿ ಬೀರಿಗ ನಿವಾಸಿಯಾಗಿದ್ದು, ಮಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ಕಾಲು ಜಾರಿ ಬಿದ್ದು ತಲೆಗೆ ತೀವ್ರವಾಗಿ ಏಟು ಬಿದ್ದು ಕೋಮ ಸ್ಥಿತಿಗೆ ತಲುಪಿದ್ದಾರೆ. ತೀವ್ರ ಬಡತನದ ಕುಟುಂಬ ಇವರದ್ದಾಗಿದ್ದು, ಚಿಕಿತ್ಸಾ ವೆಚ್ಚ ಭರಿಸಲು ಅಸಾಧ್ಯವಾದುದರಿಂದ ಸಹೃದಯಿ ದಾನಿಗಳಿಂದ ಇವರ ಕುಟುಂಬ ನೆರವನ್ನು ಕೇಳಿದ್ದಾರೆ.

ತನ್ನ ಪತ್ನಿ ಗಂಡನನ್ನು ನೆನೆಯುತ್ತ ಮಕ್ಕಳು ತಂದೆಯ ಸ್ಥಿತಿಯನ್ನು ಕಂಡು ಕಣ್ಣೀರಿಡುತ್ತ ತನ್ನ ಯಜಮಾನನ ಮರುಜೀವಕ್ಕಾಗಿ ಸಹಾಯಕ್ಕೆ ಅಂಗಲಾಚುತ್ತಿರುವುದನ್ನು ಕಂಡರೆ ಮಾನವೀಯತೆಯಿದ್ದವರು ಕಂಡಿತ ಈ ದೃಶ್ಯವನ್ನು ಕಂಡಾಗ ಸಹಾಯವನ್ನು ನೀಡುವುದರಲ್ಲಿ ಸಂಶಯವೇ ಇಲ್ಲ.

ದಯವಿಟ್ಟು ಈ ಬಡಜೀವವನ್ನು ಉಳಿಸಲು ಸಹಾಯ ಮಾಡುವಿರಾ?ಬಡ ಕುಟುಂಬದಲ್ಲಿರುವ ಈ ಕುಟುಂಬಕ್ಕೆ ಆಧಾರಸ್ತಂಭವಾಗಿರುವ ಇವರನ್ನು ಉಳಿಸುವ ಸಣ್ಣ ಪ್ರಯತ್ನ ಮಾಡೋಣ. ಕೂಲಿ ಕೆಲಸವನ್ನು ಮಾಡುತ್ತ, ಮಕ್ಕಳನ್ನು ಸಾಕಿಕೊಂಡು, ಶಾಲಾ ಖರ್ಚುಗಳನ್ನು ನೋಡುತ್ತ ಇನ್ನೊಂದು ಕಡೆಯಲ್ಲಿ ತನ್ನ ಗಂಡನ ಪ್ರಾಣಕ್ಕಾಗಿ ಹಗಲು ರಾತ್ರಿಯೆನ್ನದೆ ದುಡಿದು ಜೀವನ ಸಾಗಿಸುತ್ತಿರುವ ಈ ಕುಟುಂಬದ ಯಜಮಾನನ್ನು ಉಳಿಸಬೇಕಾಗಿದೆ. ದಯವಿಟ್ಟು ದಾನಿಗಳು, ಸಂಘ ಸಂಸ್ಥೆಗಳು ನಾವೆಲ್ಲರೂ ಇವರ ಸಹಾಯಕ್ಕೆ ನಿಲ್ಲೋಣ. ಬಡಕುಟುಂಬದ ಕಣ್ಣೀರು ಒರೆಸುವ ಸಣ್ಣ ಪ್ರಯತ್ನ ನಮ್ಮದು.

ಸಹಾಯದ ನಿರೀಕ್ಷೆಯಲ್ಲಿ ಬಡಕುಟುಂಬ

W|o ಗೀತಾ ಬಿ
ಮಾಧವ ಗೌಡ
3|172 ಬೀರ್ನೆತ್ತಿಲು ಬೀರಿಗ ಪುತ್ತೂರು

ಬ್ರ್ಯಾಂಚ್: ಬೊಲ್ವಾರ್
ಎಂಕೌಂಟ್ ನಂಬರ್: 022422010000840
ಐಎಫ್ ಎಸ್ ಕೋಡ್:UBIN0 902241
ಫೋನ್ ನಂ: 9663833084

Related post

Leave a Reply

Your email address will not be published. Required fields are marked *

error: Content is protected !!