• October 16, 2024

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

 ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

 

ಉಜಿರೆ: ಅ.18: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಇಂದು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ನೆರವೇರಿತು.

ಉದ್ಘಾಟಿಸಿ ಮಾತನಾಡಿದ ಶ್ರೀ ಧ.ಮಂ. ಕಲಾ ಕೇಂದ್ರದ ರಂಗ ನಿರ್ದೇಶಕ ಯಶವಂತ್, “ಬದುಕು ಎಂಬುದು ಒಂದು ಕಲೆ. ಇದರಲ್ಲಿ ನಾವು ಪಾತ್ರಧಾರಿಗಳು. ಆದರೆ ವೇದಿಕೆಯಲ್ಲಿ ಪಾತ್ರ ಮಾಡಲು ನಿರಂತರ ಅಭ್ಯಾಸ ಅಗತ್ಯ” ಎಂದರು.
“ನಾವು ಕಲಿಯುವಾಗ ನಿಷ್ಕಲ್ಮಶ ಮನಸ್ಸಿನಿಂದ ಹೇಳಿದ್ದನ್ನು ಕೇಳಬೇಕು ಮಾತ್ರವಲ್ಲ ಗುರುಗಳಿಗೆ ಕಲಿಕೆ ವಿಷಯಕ್ಕೆ ಗುಲಾಮನ ರೀತಿಯಲ್ಲಿ ಇದ್ದಾಗ ಮಾತ್ರ ಎಲ್ಲವನ್ನೂ ತಿಳಿದುಕೊಳ್ಳಲು ಸಾಧ್ಯ”
“ಮನುಷ್ಯ ಹುಟ್ಟಿ ಸಾಯುವ ತನಕ ಆತನ ಜೀವನವನ್ನು ದಶಾವತಾರಕ್ಕೆ ಹೋಲಿಸಬಹುದು. ಗುರಿಯನ್ನು ಸಾಧಿಸಲು ದಾರಿಯಲ್ಲಿ ಸಿಗುವ ಅಪಾಯಗಳ ಕುರಿತು ಆಲೋಚಿಸುವ ಬದಲು ಗುರಿಯ ಕಡೆಗೆ ಗಮನ ಇರಲಿ” ಎಂದು ಅವರು ತಿಳಿಸಿದರು.


ವೇದಿಕೆಯಲ್ಲಿ ಸಂಸ್ಥೆಯ ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್ ಉಪಸ್ಥಿತರಿದ್ದರು. ಕಾರುಣ್ಯ ಮತ್ತು ಬಳಗದವರು ಪ್ರಾರ್ಥಿಸಿದರು. ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು. ನಂತರ ವಿದ್ಯಾರ್ಥಿನಿಯರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

Related post

Leave a Reply

Your email address will not be published. Required fields are marked *

error: Content is protected !!