• October 16, 2024

ಎರಡು ದಿನಗಳ ಹಿಂದೆಯಷ್ಟೇ ಅಪಘಾತವಾದ ಆಂಬುಲೆನ್ಸ್ ನಲ್ಲಿದ್ದ ಮಹಿಳೆ ಸಾವು

 ಎರಡು ದಿನಗಳ ಹಿಂದೆಯಷ್ಟೇ ಅಪಘಾತವಾದ ಆಂಬುಲೆನ್ಸ್ ನಲ್ಲಿದ್ದ ಮಹಿಳೆ ಸಾವು

 

ಬೆಳ್ತಂಗಡಿ: ಎರಡು ದಿನಗಳ ಹಿಂದೆಯಷ್ಟೇ ಮಾಲಾಡಿ ನಿವಾಸಿ ಶಬೀರ್ ಎಂಬವರು ಅಳದಂಗಡಿ ನಿವಾಸಿ ಮರಿಯಮ್ಮ ಎಂಬವರನ್ನು ಆಂಬುಲೆನ್ಸ್ ನಲ್ಲಿ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಆಂಬುಲೆನ್ಸ್ ಪಲ್ಟಿಯಾಗಿ ಚಾಲಕ ಮೃತಪಟ್ಟಿದ್ದರು. ಆಂಬುಲೆನ್ಸ್ ನಲ್ಲಿದ್ದ ಮಹಿಳೆಯನ್ನು ತಕ್ಷಣ ಬೇರೊಂದು ಗಾಡಿಯಲ್ಲಿ ಕೊಂಡೊಯ್ಯಲಾಗಿತ್ತಾದರೂ ಇದೀಗ ಆ ಮಹಿಳೆಯೂ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಮೃತಪಟ್ಟ ಮಹಿಳೆ ಅಳದಂಗಡಿ ಸಮೀಪದ ಬಡಗಕಾರಂದೂರು ಗ್ರಾಮದ ಸುಂಕದಕಟ್ಟೆ ನಿವಾಸಿ ದಿ.ಹಸನ್ ಅವರ ಪತ್ನಿ ಮರಿಯಮ್ಮ ಎಂದು ತಿಳಿದುಬಂದಿದೆ

Related post

Leave a Reply

Your email address will not be published. Required fields are marked *

error: Content is protected !!