ಬೆಳ್ತಂಗಡಿ: ಶಾಲಾ ಮಕ್ಕಳಿಗೆ ವಾರದಲ್ಲಿ ಒಂದು ದಿನ ಬ್ಯಾಗ್ ರಹಿತವಾಗಿ ಖುಷಿಯಿಂದ ಕಲಿಯುವ ವಾತಾವರಣ ನಿರ್ಮಿಸುವ ಉದ್ದೇಶದಿಂದ ರಾಜ್ಯದ ಶಾಲೆಗಳಲ್ಲಿ ಪ್ರತಿ ತಿಂಗಳ 3 ನೇ ಶನಿವಾರವನ್ನು ಬ್ಯಾಗ್ ರಹಿತ ದಿನ ಅಥವಾ ಸಂಭ್ರಮ ಶನಿವಾರ ಕಾರ್ಯಕ್ರಮ ನಡೆಸುವಂತೆ ಶಿಕ್ಷಣ ಇಲಾಖೆಯು ಸೂಚನೆ ನೀಡಿದೆ. ಮಕ್ಕಳಿಗೆ ಸಂತಸದಾಯಕ ಕಲಿಕೆಯನ್ನು ನೀಡಲು ಹಾಗೂ ಮಕ್ಕಳಿಗೆ ಪಠ್ಯವನ್ನು ಉಲ್ಲಾಸದಿಂದ ಹೊರೆಯಾಗಿಸದೆ ಕಲಿಯುವಂತೆ ಮಾಡುವ ಉದ್ದೇಶದಿಂದ ಪ್ರತೀ ತಿಂಗಳು ಒಂದು ಶನಿವಾರದಂದು ಬ್ಯಾಗ್ ರಹಿತ ದಿನವೆಂದು ಆಚರಿಸುವಂತೆ ಆದೇಶಿಸಲಾಗಿದೆ
Feature Post
ಬೆಳ್ತಂಗಡಿ: ದ.ಕ ಜಿಲ್ಲೆಯಲ್ಲಿ ವ್ಯಾಪಕ ಮಳೆ ಹಿನ್ನೆಲೆ: ನಾಳೆಯೂ(ಜುಲೈ.6) ರಂದು ಶಾಲಾ ಕಾಲೇಜುಗಳಿಗೆ
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಜು.6 ರಂದು ಆರೆಂಜ್ ಅಲರ್ಟ್ ಘೋಷಣೆಯಾಗಿದ್ದು, ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ದ.ಕ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ತುರ್ತು ಕ್ರಮಗಳನ್ನು ಕೈಗೊಂಡಿದೆ. ದ.ಕ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ & ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆ ಗಳಿಗೆ ಜು.6 ರಂದು ರಜೆ […]Read More
ಉಜಿರೆ : “ಕಲಿಕೆ ಮತ್ತು ಕಲ್ಪನೆಗೆ ಕೊನೆಯಿರಬಾರದು. ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳು ಇತರೆ ಚಟುವಟಿಕೆಗಳ ಮೂಲಕ ಜ್ಞಾನ ಗಳಿಸಬೇಕು” ಎಂದು ಶ್ರೀಮತಿ ಸೋನಿಯಾ ವರ್ಮ ಹೇಳಿದರು. ಇವರು ಎಸ್. ಡಿ. ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ. ಬಿ. ಎಸ್. ಇ), ಉಜಿರೆ ಇಲ್ಲಿ ಜು.4 ರಂದು ನಡೆದ ಶಾಲಾ ಸಂಘಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಘಗಳ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದರು. ವೇದಿಕೆಯಲ್ಲಿ ಎಸ್. ಡಿ. ಎಮ್ ಮಾಹಿತಿ ತಂತ್ರಜ್ಞಾನ ಮುಖ್ಯ ಕಾರ್ಯನಿರ್ವಾಹಕ ಮತ್ತು ವಿದ್ಯಾರ್ಥಿ ನಿಲಯಗಳ […]Read More
ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದ ವಿದ್ಯಾರ್ಥಿಗಳು ಗುರು ಪೂರ್ಣಿಮಾದ ಪ್ರಯುಕ್ತ ಶ್ರೇಷ್ಠ ಸಾಹಿತಿ ಶಿವರಾಮ ಶಿಶಿಲ ಇವರ ಮನೆಗೆ ಭೇಟಿಕೊಟ್ಟರು.ಅವರೊಂದಿಗೆ ಒಂದಷ್ಟು ಹೊತ್ತು ಹಾಡು ಹರಟೆಯೊಂದಿಗೆ ಅರ್ಥಪೂರ್ಣವಾದ ಗುರು ಪೂರ್ಣಿಮಾ ಆಚರಿಸಿದರು. ಶಿವರಾಮ್ ಶಿಶಿಲಾ ಇವರು ನಾಡು ಕಂಡ ಶ್ರೇಷ್ಠ ಸಾಹಿತಿ. ಇವರು ವಿದ್ಯಾರ್ಥಿಗಳಿಗೆ ಹಾಡನ್ನು ಭಾವಪೂರ್ಣವಾಗಿ ಹಾಡುವುದು ಹೇಗೆ? ಕವಿತೆ ಬರೆಯುವ ರೀತಿ ಹೇಗೆ ಪ್ರಾಸಭದ್ಧವಾದ ಹಾಡು ಬರೆಯುವ ರೀತಿ ಕಥೆಗಳಿಗೆ ರೂಪ ಕೊಡುವ ರೀತಿ ಇತ್ಯಾದಿಗಳನ್ನು ತಮ್ಮ […]Read More
ಧರ್ಮಸ್ಥಳ: ಶ್ರೀ.ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಶಾಲಾ ಒಂಭತ್ತು ಸಂಘಗಳ ಉದ್ಘಾಟನೆ ಅದ್ದೂರಿಯಾಗಿ ಇಂದು ನೆರವೇರಿತು. ದೀಪ ಪ್ರಜ್ವಲನೆಯೊಂದಿಗೆ ಶಾಲಾ ಸಂಚಾಲಕರಾದ ಅನಂತಪದ್ಮನಾಭ ಭಟ್ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದರು.ತದ ನಂತರ ಶಾಲಾ ಸಾಂಸ್ಕೃತಿಕ ಸಂಘವು ಧರ್ಮಸ್ಥಳ ದೇವಳದ ಪಾರುಪತ್ಯಗಾರರಾದ ಶ್ರೀಯುತ ಲಕ್ಷ್ಮೀನಾರಾಯಣ ರಾವ್ ಇವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು. ರಾಜ ದರ್ಬಾರಿನ ಮಂತ್ರಿಗಳಿಂದ ಆ ಸಂಘದ ವಾರ್ಷಿಕ ಯೋಜನೆಯನ್ನು ವಿವರಿಸಲಾಯಿತು.ತದನಂತರ ಮಾತನಾಡಿದ ಅತಿಥಿಗಳು ಸಾಂಸ್ಕೃತಿಕ ಸಂಘದ ಯೋಜನೆಗಳನ್ನು ಶ್ಲಾಘಿಸಿ ಶುಭ ಹಾರೈಸಿದರು. ಪರಿಸರ […]Read More
ಬೆಳ್ತಂಗಡಿ: ವಾಣಿ ಆಂ.ಮಾ.ಪ್ರೌ.ಶಾಲಾ ಮಂತ್ರಿಮಂಡಲ ರಚನೆ:ಶಾಲಾ ನಾಯಕಿಯಾಗಿ ಕು.ನವಮಿ ಎಮ್, ಉಪನಾಯಕನಾಗಿ ಮಾ.ಯಶ್ವಿತ್
ಬೆಳ್ತಂಗಡಿ: ವಾಣಿ ಆಂಗ್ಲ ಮಾಧ್ಯಮ ಫ್ರೌಢಶಾಲೆ ಹಳೆಕೋಟೆ ಬೆಳ್ತಂಗಡಿ ಇಲ್ಲಿಯ 2023-24 ನೇ ಸಾಲಿನ ನೂತನ ಮಂತ್ರಿ ಮಂಡಲ ರಚನೆಯಾಗಿದ್ದು, ಶಾಲಾ ನಾಯಕಿಯಾಗಿ ಕು.ನವಮಿ ಎಮ್ ಹಾಗೂ ಉಪನಾಯಕನಾಗಿ ಮಾ ಯಶ್ವಿತ್ ರವರು ಆಯ್ಕೆಯಾಗಿದ್ದಾರೆ.Read More
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಉಜಿರೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ
ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಉಜಿರೆಯಲ್ಲಿ, (ರಾಜ್ಯ ಪಠ್ಯಕ್ರಮಯ)ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವು ನಡೆಯಿತು. ವಿದ್ಯಾರ್ಥಿಗಳಿಗೆ ಒಂದು ವಾರ ಶಾಲೆಯಲ್ಲಿ ಯೋಗ ಶಿಬಿರವನ್ನು ನೀಡಿದ ಶ್ರೀಮತಿ ಆತ್ಮೀಯವರು ಯೋಗದ ಪ್ರಾತ್ಯ ಕ್ಷಿತೆಯನ್ನು ನೀಡಿ ಎಲ್ಲಾ ವಿದ್ಯಾರ್ಥಿಗಳನ್ನು ಭಾಗವಹಿಸುವಂತೆ ಮಾಡಿದರು. ವಿದ್ಯಾರ್ಥಿಗಳಿಗೆ ಅನುಕೂಲವಾದ ಕೆಲವು ಆಸನಗಳನ್ನು ಮಾಡಿದರು. ಯೋಗದಿಂದ ಆರೋಗ್ಯ ಯೋಗ ಮಾಡಿ ನಿರೋಗಿಗಳಾಗಿ ನುಡಿಯುತ್ತಾ ವಿದ್ಯಾರ್ಥಿಗಳಿಗೆ ಕಲಿಕೆಗೆ ಸಹಾಯಕವಾಗುವ ಏಕಾಗ್ರತೆಯ ಅಸನವನ್ನು ತಿಳಿಯಪಡಿಸಿದರು. ಅಂತೆಯೇ ಪತಂಗಾಸನ, ತ್ರಿಕೋನಸನ ಇತ್ಯಾದಿಗಳನ್ನು ಮಾಡಿ […]Read More
ಧರ್ಮಸ್ಥಳ: ಶ್ರೀ.ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಶಾಲಾ ಮಂತ್ರಿಮಂಡಲದ ಉದ್ಘಾಟನಾ ಸಮಾರಂಭ ಇಂದು ನೆರವೇರಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿವೃತ್ತ ಪ್ರಾದೇಶಿಕ ಅಧಿಕಾರಿಯಾಗಿರುವ ಶ್ರೀಯುತ ಶ್ರೀಹರಿ ಶಗ್ರಿತ್ತಾಯ ಆಗಮಿಸಿದ್ದರು.ಕಾರ್ಯಕ್ರಮವನ್ನು ಶಾಲಾ ಸಂಚಾಲಕರಾದ ಶ್ರಿ.ಅನಂತ ಪದ್ಮನಾಭ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ತದ ನಂತರ ಶಾಲಾ ಮಂತ್ರಿ ಮಂಡಲಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಯುತ ಶ್ರೀಹರಿ ಶಗ್ರಿತ್ತಾಯ ಪ್ರಮಾಣವನವನ್ನು ಬೋಧಿಸಿದರು. ತದನಂತರ ಮಾತನಾಡಿದ ಅವರು […]Read More
ಶ್ರೀ.ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ರಕ್ತದಾನಿಗಳ ದಿನದ ಆಚರಣೆ
ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ರಕ್ತದಾನಿಗಳ ದಿನದ ಆಚರಣೆಯನ್ನು ಇಂದು ಮಾಡಲಾಯಿತು. ಈ ದಿನದ ಮುಖ್ಯ ಅತಿಥಿಗಳಾಗಿ ನಿವೃತ್ತ ವಾಯುಪಡೆಯ ಫೈಟರ್ ಪೈಲಟ್, ಅಮೃತ ಕಾಲ ಇದರಲ್ಲಿ ಸೇವೆ ಸಲ್ಲಿಸುತ್ತಿರುವ ವಿಕ್ರಂ ದೀಶ್ ಅವರು ಯುವ ಜನರ ಆಶೋತ್ತರ ,ಮುಂದಿನ ಸಮಾಜದ ಭವಿಷ್ಯ ಹಾಗೂ ಮುಂದಿನ ಪ್ರಕೃತಿಯ ಭವಿಷ್ಯ ಯುವಜನರ ಕೆಲಸ,ಕನಸು ನನಸು ಮಾಡುವ ವಿವಿಧ ರೀತಿ ಹಾಗೂ ಜೊತೆಯಲ್ಲಿರುವವರನ್ನು ಸಂತಸದಿಂದ ಕಾಣುವಂತೆ ಮಾಡುವ ರೀತಿ ವಿವರಿಸಿದರು. ತದನಂತರ ಧರ್ಮಸ್ಥಳ […]Read More
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಶಾಲಾ ಸಂಸತ್ತಿಗಾಗಿ ಚುನಾವಣೆ
ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಶಾಲಾ ಸಂಸತ್ತಿಗಾಗಿ ಚುನಾವಣೆ ನಡೆಸಲಾಯಿತು. ಚುನಾವಣೆಯ ವಿವಿಧ ಹಂತಗಳಾದ ನಾಮಪತ್ರ ಸಲ್ಲಿಕೆ ನಾಮಪತ್ರ ಹಿಂಪಡೆಯುವಿಕೆ ನಾಮಪತ್ರ ಪರಿಶೀಲಿಸುವಿಕೆ ಇತ್ಯಾದಿಗಳು ಕ್ರಮ ಪ್ರಕಾರವಾಗಿ ನಡೆದು ಇಂದು ಚುನಾವಣೆಯನ್ನು ನಡೆಸಲಾಯಿತು. ಈ ಬಾರಿಯ ಮತದಾನಕ್ಕಾಗಿ ಇವಿಯಂ ಮತ ಯಂತ್ರ ಬಳಸಿದ್ದು ವಿಶೇಷವಾಗಿತ್ತು. ವಿದ್ಯಾರ್ಥಿಗಳಲ್ಲಿ ಮತದಾನದ ಮಹತ್ವ ಹಾಗೂ ಅದರ ವಿವಿಧ ಹಂತಗಳನ್ನು ತಿಳಿಯಲು ಈ ಮೂಲಕ ಸಹಾಯವಾಯಿತು. ಶಾಲಾ ನಾಯಕನಾಗಿ 10ನೇ ತರಗತಿ ಜಸ್ವಿನ್ ಉಪಮುಖ್ಯಮಂತ್ರಿಯಾಗಿ 9ನೇ […]Read More