ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಉಜಿರೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ
ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಉಜಿರೆಯಲ್ಲಿ, (ರಾಜ್ಯ ಪಠ್ಯಕ್ರಮಯ)
ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವು ನಡೆಯಿತು.
ವಿದ್ಯಾರ್ಥಿಗಳಿಗೆ ಒಂದು ವಾರ ಶಾಲೆಯಲ್ಲಿ ಯೋಗ ಶಿಬಿರವನ್ನು ನೀಡಿದ ಶ್ರೀಮತಿ ಆತ್ಮೀಯವರು ಯೋಗದ ಪ್ರಾತ್ಯ ಕ್ಷಿತೆಯನ್ನು ನೀಡಿ ಎಲ್ಲಾ ವಿದ್ಯಾರ್ಥಿಗಳನ್ನು ಭಾಗವಹಿಸುವಂತೆ ಮಾಡಿದರು.
ವಿದ್ಯಾರ್ಥಿಗಳಿಗೆ ಅನುಕೂಲವಾದ ಕೆಲವು ಆಸನಗಳನ್ನು ಮಾಡಿದರು. ಯೋಗದಿಂದ ಆರೋಗ್ಯ ಯೋಗ ಮಾಡಿ ನಿರೋಗಿಗಳಾಗಿ ನುಡಿಯುತ್ತಾ ವಿದ್ಯಾರ್ಥಿಗಳಿಗೆ ಕಲಿಕೆಗೆ ಸಹಾಯಕವಾಗುವ ಏಕಾಗ್ರತೆಯ ಅಸನವನ್ನು ತಿಳಿಯಪಡಿಸಿದರು. ಅಂತೆಯೇ ಪತಂಗಾಸನ, ತ್ರಿಕೋನಸನ ಇತ್ಯಾದಿಗಳನ್ನು ಮಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು.
ಶಿಬಿರದ ವಿದ್ಯಾರ್ಥಿಗಳಿಬ್ಬರು ತಮ್ಮ ಅನುಭವಗಳನ್ನು ಬಹಳ ಸಂತೋಷದಿಂದ ಪ್ರಸ್ತುತಪಡಿಸಿದರು. ಶಾಲಾ ಮುಖ್ಯೋಪಾಧ್ಯಾಯನಿಯವರು ವಿದ್ಯಾರ್ಥಿಗಳಿಗೆ ಪ್ರತಿದಿನ ಕೆಲವು ಆಸನಗಳನ್ನು ಮಾಡುವಂತೆ ತಿಳಿಸಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು ತಿಳಿಯಪಡಿಸಿದರು.
10ನೇ ತರಗತಿ ವಿದ್ಯಾರ್ಥಿಯಾದ ಕುಮಾರಿ ಶರದಿಯವರು ಸ್ವಾಗತಿಸಿದರು ಹಾಗೂ ಕುಮಾರಿ ಪೂಜಾ ವಂದಿಸುವುದರ ಮೂಲಕ ಕಾರ್ಯಕ್ರಮ ಮುಕ್ತಾಯಗೊಂಡಿತು.