ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಸಾಮಾಜಿಕ ಪರಿಶೋಧನಾ ಹಾಗೂ ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಇದರ ಶಾಲಾ ಪೋಷಕರ ಸಭೆ ಯು ಶಾಲೆಯ ಸಭಾಂಗಣದಲ್ಲಿ ನಡೆಯಿತು. ಬೆಳ್ತಂಗಡಿ ತಾಲ್ಲೂಕಿನ ಅತ್ಯುತ್ತಮ ಸರಕಾರಿ ಶಾಲೆಗಳಲ್ಲಿ ಒಂದಾಗಿರುವ ಕನ್ಯಾಡಿ ಶಾಲೆಯಲ್ಲಿ ಒಂದನೇ ತರಗತಿಯಿಂದ ಎಂಟನೇ ತರಗತಿಯ ತನಕ ಒಟ್ಟು 250ಮಕ್ಕಳು ಕಲಿಯುತ್ತಿದ್ದಾರೆ.ಇಂದಿನ ಸಭೆಯಲ್ಲಿ ಬಹುತೇಕ ಪೋಷಕರು ಅತ್ಯಂತ ಉತ್ಸಾಹದಲ್ಲಿ ಭಾಗವಹಿಸಿ ತಮ್ಮ ಸಲಹೆ ಸೂಚನೆ ನೀಡಿದರು. ವಿಶೇಷವಾಗಿ ಗ್ರಾಮೀಣ ಪ್ರದೇಶದ ಉತ್ತಮ ಸ್ಥಿತಿಯಲ್ಲಿ ಇರುವ ಕನ್ಯಾಡಿ ಶಾಲೆಗೆ ಕಳೆದ ಒಂದೂವರೆ ವರ್ಷಗಳಿಂದ […]
ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ
ಉಜಿರೆ:ಜು26 ಶ್ರೀ.ಧ.ಮಂ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಉಜಿರೆ ಇಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ದೇವಲ್ ಕುಲಾಲ್ ಕಾರ್ಗಿಲ್ ವಿಜಯ ದಿವಸದ ಮಹತ್ವದ ಕುರಿತು ಹೇಳಿದರು ಹಾಗೂ ಇತರ ವಿದ್ಯಾರ್ಥಿಗಳಿಂದ ಸಂಭಾಷಣ ನಾಟಕ, ಗುಂಪು ಗಾಯನ ಹಾಡಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಮನ್ಮೋಹಕ್ ನಾಯ್ಕ್ ಕೆ.ಜಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವಿದ್ಯಾರ್ಥಿ ಯಶಸ್ ಎ.ಎಸ್ ಕಾರ್ಯಕ್ರಮ ನಿರೂಪಿಸಿದರು.Read More
ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಹಳೆ ವಿದ್ಯಾರ್ಥಿನಿಗೆ ಅಭಿನಂದನ ಕಾರ್ಯಕ್ರಮ
ಉಜಿರೆ : ಜು24 ರಂದು ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಇಲ್ಲಿ 2024 ನೇ ಸಾಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) ಬಿ.ಇ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ಒಂಬತ್ತನೇ ರಾಂಕ್ ಪಡೆದಿರುವಶಾಲೆಯ ಹಳೆ ವಿದ್ಯಾರ್ಥಿನಿ ಕು.ಪ್ರತೀಕ್ಷಾ ಇವರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಮನ್ಮೋಹನ್ ನಾಯ್ಕ್ ಕೆ.ಜಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಶಾಂಟಿ ಜಾರ್ಜ್ ಕಾರ್ಯಕ್ರಮ ನಿರೂಪಿಸಿದರು.Read More
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ದಿನಾಂಕ: 18-07-2024ರಂದು ರೆಡ್ ಅಲರ್ಟ್ ಘೋಷಣೆಯಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ ಮತ್ತು ಕಡಬ ತಾಲೂಕಿನ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು (12ನೇ ತರಗತಿವರೆಗೆ) ಗಳಿಗೆ ದಿನಾಂಕ: 18-07-2024 ರಂದು ರಜೆಯನ್ನು ಘೋಷಿಸಿ ದ.ಕ. […]Read More
ಕನ್ಯಾಡಿ : ಜು 13 ಕನ್ಯಾಡಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಭತ್ತ ನಾಟಿ ಮತ್ತು ಕೃಷಿಯ ಪ್ರಾತ್ಯಕ್ಷಿಕೆ ಗಂಗ್ಯೆತ್ಯಾರು ಗದ್ದೆಯಲ್ಲಿ ನಡೆಯಿತು. ಕನ್ಯಾಡಿ ಗಂಗೆತ್ಯಾರಿನ ಪಡ್ವೆಟ್ನಾಯರ ಕುಟುಂಬದ ಗದ್ದೆಯಲ್ಲಿ ಶಾಲೆಯ ಏಳನೇ ಹಾಗೂ ಏoಟನೇ ತರಗತಿ ಮಕ್ಕಳಿಗೆ ಭತ್ತದ ನಾಟಿ ಪ್ರಾತ್ಯಕ್ಷಿಕೆಯು ಮುಖ್ಯ್ಯೊಪಾಧ್ಯಾಯರಾದ ಮರಿಯಪ್ಪ ಹಾಗೂ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ನಂದ ಭಟ್ ಕೆ ಇವರ ನೇತೃತ್ವದಲ್ಲಿ ಬಹಳ ಅಚ್ಚುಕಟ್ಟಾಗಿ ನಡೆಯಿತು.ಈ ಸಂದರ್ಭದಲ್ಲಿ ಮಾಧವ ಪಡ್ವೆಟ್ನಾಯರ ಶಾಂತಾ ಅವರು ಮಕ್ಕಳಿಗೆ ಹಲವು ಮಾಹಿತಿಗಳನ್ನು […]Read More
ಎಸ್.ಡಿ.ಎಂ ಸಿ.ಬಿ.ಎಸ್.ಇ ಸ್ಕೌಟ್-ಗೈಡ್ ವಿದ್ಯಾರ್ಥಿಗಳಿಂದ ಪ್ಲಾಸ್ಟಿಕ್ ದುಷ್ಪರಿಣಾಮದ ಜಾಗೃತಿ ಕಾರ್ಯಕ್ರಮ
ಉಜಿರೆ(13ಜುಲೈ): ದಿನಾಂಕ 13-07-2024 ರಂದು ಎಸ್.ಡಿ.ಎಮ್. ಆಂಗ್ಲ ಮಾಧ್ಯಮ ಸಿ.ಬಿ.ಎಸ್.ಇ ಶಾಲೆಯ ಸ್ಕೌಟ್/ಗೈಡ್, ಕಬ್-ಬುಲ್ ವಿದ್ಯಾರ್ಥಿಗಳು ಹೆಚ್ಚುತ್ತಿರುವ ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಪ್ಲಾಸ್ಟಿಕ್ ಬಳಕೆ ಕಡಿಮೆಗೊಳಿಸಿ ಬದಲಿ ಬಟ್ಟೆ ಚೀಲ ಉಪಯೋಗಿಸಿ ಎಂಬ ಮಾಹಿತಿಯ ಕರಪತ್ರವನ್ನು ಶಾಲಾ ಮುಖ್ಯೋಪಾಧ್ಯಾಯರು ಬಿಡುಗಡೆಗೊಳಿಸಿ, ವಿದ್ಯಾರ್ಥಿಗಳ ಸಮಾಜಮುಖಿ ಕಾರ್ಯಕ್ಕೆ ಶುಭಹಾರೈಸಿದರು. ಕರಪತ್ರದ ಜೊತೆಗೆ ಮಕ್ಕಳೇ ತಯಾರಿಸಿದ ಕಾಗದದ ಕವರ್ಗಳನ್ನು ಉಜಿರೆ ಆಸುಪಾಸಿನ ಮೆಡಿಕಲ್ ಶಾಪ್ಗಳಿಗೆ ಹಂಚಿ, ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆಗೊಳಿಸುವಲ್ಲಿ ಜಾಗೃತಿ ಮೂಡಿಸಿ ಸ್ವಸ್ಥ […]Read More
ಕಣಿಯೂರು : ಜುಲೈ 8, ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣೆ ಸಮಿತಿ ಕಣಿಯೂರು ಘಟಕದ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂದಾರು ಇಲ್ಲಿ ಜುಲೈ ತಿಂಗಳ ಶ್ರಮದಾನವನ್ನು ನಡೆಸಲಾಯಿತು. ಶ್ರಮದಾನದಲ್ಲಿ ಶಾಲಾ ಅಡಿಕೆ ತೋಟದಲ್ಲಿ ಕಳೆ ಗಿಡಗಳನ್ನು ಸ್ವಚ್ಚ ಗೊಳಿಸುವ ಮತ್ತು ಅಡಿಕೆ ಗಿಡಕ್ಕೆ ಗೊಬ್ಬರ ಮತ್ತು ಸೊಪ್ಪು ಹಾಕುವ ಕೆಲಸವನ್ನು ನಿರ್ವಹಿಸಲಾಯಿತು.ಈ ಶ್ರಮದಾನ ದಲ್ಲಿ ಶಾಲೆಯ ಪೋಷಕರು ಮತ್ತು ವಿಪತ್ತು ಸ್ವಯಂ ಸೇವಕರಾದ ಉಮೇಶ್ ಗೌಡ, ಶ್ರೀಲತಾ, ವಿಮಲಾ ಬಂದಾರು, ಶರತ್, ರೋಹಿತ್ […]Read More
ಬೆಳ್ತಂಗಡಿ: ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿ ಇಲ್ಲಿನ ಪೂರ್ಣಕಾಲಿಕ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯಾಗಿದ್ದ ಭುವನೇಶ ಜೆ ಅವರು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಯಾಗಿ ಪದೋನ್ನತಿಗೊಂಡಿದ್ದಾರೆ.ಸರಕಾರಿ ಆದೇಶ ಸಂಖ್ಯೆ ಇಪಿ 57 ಡಿಪಿಐ 2023 – ದಿನಾಂಕ 28.06.2024 ರ ಪ್ರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಅವರು ಆದೇಶ ಹೊರಡಿಸಿದ್ದಾರೆ. ಮೂಲತಃ ಪುತ್ತೂರು ತಾಲೂಕಿನ ಹಿರೆಬಂಡಾಡಿ ಗ್ರಾಮದ ಜಾಡೆಂಕಿ ನಿವಾಸಿ, ಬೆಳ್ತಂಗಡಿ ಬಿಇಒ ಕಚೇರಿಯಲ್ಲಿ ತನಿಖಾಧಿಕಾರಿಯಾಗಿದ್ದ […]Read More
ಮೈರೋಳ್ತಡ್ಕ ಸರಕಾರಿ ಉನ್ನತಿಕರಿಸೀದ ಹಿರಿಯ ಪ್ರಾಥಮಿಕ ಶಾಲೆ ವಠಾರ ದಲ್ಲಿ ಶಾಲಾಭಿವೃದ್ಧಿ ಸಮಿತಿ
ಮೈರೋಳ್ತಡ್ಕ: ಬಂದಾರು ಗ್ರಾಮದ ಮೈರೋಳ್ತಡ್ಕ ಸರಕಾರಿ ಉನ್ನತಿಕರಿಸೀದ ಹಿರಿಯ ಪ್ರಾಥಮಿಕ ಶಾಲೆ ವಠಾರ ದಲ್ಲಿ ಜೂನ್ 29 ರಂದು ಶಾಲಾ ಕಟ್ಟಡದ ಬಳಿ ಇರುವ ಮರದ ಕೊಂಬೆ ತೆರವು ಕಾರ್ಯ ಹಾಗೂ ಶಾಲಾ ಅಡಿಕೆ ತೋಟದಲ್ಲಿ ಗಿಡ ಗಂಟಿಗಳ ತೆರವು ಮಾಡುವ ಮೂಲಕ ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು,ಮಕ್ಕಳ ಪೋಷಕರ ನೇತೃತ್ವದಲ್ಲಿ ಶ್ರಮದಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕುರಾಯ ಅರ್ಥ್ ಮೂವರ್ಸ್ ಮಾಲಕರಾದ ದಾಮೋದರ ಚಾಕೋಟೆದಡಿ ಇವರು ಮರದ ಕೊಂಬೆ ತೆರವು ಮಾಡಲು ಹಿಟಾಚಿ ನೀಡಿ ಸಹಕರಿಸಿದರು, […]Read More
ಮಡಂತ್ಯಾರ್: ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ಕ್ರೀಡಾ ಸಾಧಕರಾದ ಫ್ಲಾಯಿಡ್ ಮಿಸ್ಕಿತ್ ಹಾಗೂ ಸಿದ್ಧಾರ್ಥ್
ಮಡಂತ್ಯಾರ್: ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಯ ಕ್ರೀಡಾ ಸಾಧಕರಾಗಿರುವ 9ನೇ ತರಗತಿಯ ಪ್ಲಾಯಿಡ್ ಮಿಸ್ಕಿತ್ ಮತ್ತು ದ್ವಿತೀಯ ಕಲಾ ವಿಭಾಗದ ಸಿದ್ದಾರ್ಥ್ ಎಂ.ಸಿ ಇವರು ಭಾರತೀಯ ಟಾರ್ಗೆಟ್ ಬಾಲ್ ಅಸೋಸಿಯೇಶನ್ (ರಿ) ಇದರ ವತಿಯಿಂದ ರಾಜಸ್ಥಾನದ ಅಲ್ಬಾರ್ ನಲ್ಲಿ ಜರುಗಿದ ರಾಷ್ಟ್ರಮಟ್ಟದ ಟಾರ್ಗೆಟ್ ಬಾಲ್ ಪಂದ್ಯಾಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ನೇಪಾಳದ ಕಠ್ಮಂಡುವಿನಲ್ಲಿ ಜುಲೈ 8 ರಿಂದ ನಡೆಯಲಿರುವ ದಕ್ಷಿಣ ಏಷ್ಯಾ ಟಾರ್ಗೆಟ್ ಬಾಲ್ ಚಾಂಪಿಯನ್ ಶಿಪ್ ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸಲು […]Read More