• July 16, 2024

ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣೆ ಸಮಿತಿ ಕಣಿಯೂರು ಘಟಕದ ವತಿಯಿಂದ ಸ. ಹಿ. ಪ್ರಾ ಶಾಲೆ ಬಂದಾರುವಿನಲ್ಲಿ ಶ್ರಮದಾನ

 ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣೆ ಸಮಿತಿ ಕಣಿಯೂರು ಘಟಕದ ವತಿಯಿಂದ ಸ. ಹಿ. ಪ್ರಾ ಶಾಲೆ ಬಂದಾರುವಿನಲ್ಲಿ ಶ್ರಮದಾನ

ಕಣಿಯೂರು : ಜುಲೈ 8, ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣೆ ಸಮಿತಿ ಕಣಿಯೂರು ಘಟಕದ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂದಾರು ಇಲ್ಲಿ ಜುಲೈ ತಿಂಗಳ ಶ್ರಮದಾನವನ್ನು ನಡೆಸಲಾಯಿತು.


ಶ್ರಮದಾನದಲ್ಲಿ ಶಾಲಾ ಅಡಿಕೆ ತೋಟದಲ್ಲಿ ಕಳೆ ಗಿಡಗಳನ್ನು ಸ್ವಚ್ಚ ಗೊಳಿಸುವ ಮತ್ತು ಅಡಿಕೆ ಗಿಡಕ್ಕೆ ಗೊಬ್ಬರ ಮತ್ತು ಸೊಪ್ಪು ಹಾಕುವ ಕೆಲಸವನ್ನು ನಿರ್ವಹಿಸಲಾಯಿತು.
ಈ ಶ್ರಮದಾನ ದಲ್ಲಿ ಶಾಲೆಯ ಪೋಷಕರು ಮತ್ತು ವಿಪತ್ತು ಸ್ವಯಂ ಸೇವಕರಾದ ಉಮೇಶ್ ಗೌಡ, ಶ್ರೀಲತಾ, ವಿಮಲಾ ಬಂದಾರು, ಶರತ್, ರೋಹಿತ್ ಕಣಿಯೂರು, ವಿನಯಚಂದ್ರ, ಆನಂದ ಗೌಡ ಮೊಗ್ರು ಭಾಗವಹಿಸಿದರು.ಸೇವಾಪ್ರತಿನಿಧಿ ಶ್ರೀಮತಿ ಚಂದ್ರಕಲಾ, ವಲಯದ ಮೇಲ್ವಿಚಾರಕರಾದ ಶಿವಾನಂದ ರವರು ಪ್ರೇರಣೆ ನೀಡಿದರು.
ಶ್ರಮದಾನ ದಲ್ಲಿ ಭಾಗವಹಿಸಿದ ಎಲ್ಲರಿಗೂ ಶಾಲಾ ಮುಖ್ಯ್ಯೊಪಾಧ್ಯಾಯರಾದ ಶ್ರೀ ವಿಶ್ವನಾಥ್ ರವರು ಧನ್ಯವಾದ ಸಲ್ಲಿಸಿದರು.

Related post

Leave a Reply

Your email address will not be published. Required fields are marked *

error: Content is protected !!