ಮೈರೋಳ್ತಡ್ಕ: ಬೆಳ್ತಂಗಡಿ ಮಂಡಲ ಬಂದಾರು ಶಕ್ತಿ ಕೇಂದ್ರದ ಮೈರೋಳ್ತಡ್ಕ 218ನೇ ವಾರ್ಡ್ ನ ದೇವಧುರ್ಲಭ ಕಾರ್ಯಕರ್ತ ಬಂಧುಗಳಿಂದ ಮಹಾ ಸಂಪರ್ಕ ಅಭಿಯಾನ ಮತ್ತು ಮತಯಾಚನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಶಕ್ತಿಕೇಂದ್ರ ಪ್ರಮುಖ್ ಅಶೋಕ ಗೌಡ ಪಾಂಜಾಳ,ಬೂತ್ ಅಧ್ಯಕ್ಷ ಪ್ರಶಾಂತ ಗೌಡ,ಕಾರ್ಯದರ್ಶಿ ಜನಾರ್ಧನ ಗೌಡ ಪುಯಿಲ,ಗ್ರಾ.ಪಂ ಸದಸ್ಯರಾದ ಶ್ರೀಮತಿ ಸುಚಿತ್ರ ಮುರ್ತಾಜೆ,ಪ್ರಮುಖರಾದ ಕೃಷ್ಣಯ್ಯ ಆಚಾರ್ಯ,ಬಾಬು ಗೌಡ ,ಸಂದೇಶ್ ಬಿ ಗೌಡ,ಗಿರೀಶ್ ಗೌಡ ಬಿ.ಕೆ,ಶ್ರೀಮತಿ ಮಮತ ನಿನ್ನಿಕಲ್ಲು,ಶ್ರೀಮತಿ ದಮಯಂತಿ ಪಾಂಜಾಳ,ಶ್ರೀಮತಿ ದಿವ್ಯ ಖಂಡಿಗ,ಜಗದೀಶ್ ಗೌಡ ಕೊಂಬೇಡಿ,ಬಾಸ್ಕರ ಹೊಳ್ಳ,ಲಕ್ಷ್ಮಣ ನಾಯ್ಕ,ಚಿದಾನಂದ […]
ಧರ್ಮಸ್ಥಳ: ಇತಿಹಾಸ ಪ್ರಸಿದ್ದ ಪುಣ್ಯಕ್ಷೇತ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಚುನಾವಣಾ ಅಭ್ಯರ್ಥಿಗಳು ಆಗನಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ ಅಂತೆಯೆ ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಪಡೆದುಕೊಂಡರು.Read More
ಗುರಿಪಳ್ಳ: ಹರೀಶ್ ಪೂಂಜಾರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಇಂದು ಕನ್ಯಾಡಿ1 ಗುರಿಪಳ್ಳ ಗ್ರಾಮದ ಮಾಜಿ ಕಾಂಗ್ರೆಸ್ ಸದಸ್ಯೆ , ಕನ್ಯಾಡಿ ನಡ ಪಂಚಾಯತಿಯ 2 ಬಾರಿ ಸದಸ್ಯರಾದಂತಹ ರೇಖಾ ನಾಯ್ಕ ಮತ್ತು ಬಾಲಕೃಷ್ಣ ನಾಯ್ಕ ಮತ್ತು ಅವರ ಬೆಂಬಲಿಗರು ಜಯಂತ ಗೌಡ ಇವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಇವರನ್ನು ಬಿಜೆಪಿ ಪಕ್ಷದ ಧರ್ವಜವನ್ನು ನೀಡಿ ಬರಮಾಡಿಕೊಂಡರುRead More
ಬೆಳ್ತಂಗಡಿ: ವಿಧಾನಸಭಾ ಕ್ಷೇತ್ರದ ಚುನಾವಣಾ ಕಣ ಕಾವೇರುತ್ತಿದ್ದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರಾ ನೇರ ಹಣಾಹಣಿ ನಡೆಯುತ್ತಿದೆ. ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಪರ ಅಭೂತಪೂರ್ವ ಸ್ಪಂದನೆ ದೊರೆಯುತ್ತಿದ್ದು, ಕ್ಷೇತ್ರದಲ್ಲಿ ಮತದಾರರು ಸಹಕಾರ ನೀಡುತ್ತಿದ್ದಾರೆ. ಕುವೆಟ್ಟು, ಅಳದಂಗಡಿ, ಮಚ್ಚಿನ ಗ್ರಾಮಗಳಲ್ಲಿ ಮಿಂಚಿನ ಮತಯಾಚನೆ ನಡೆಸುತ್ತಿರುವ ರಕ್ಷಿತ್ ಶಿವರಾಂಗೆ ಸ್ವಯಂ ಪ್ರೇರಿತವಾಗಿ ರಕ್ಷಿತ್ ಶಿವರಾಂ ಪರ ಕಾರ್ಯಕರ್ತರು ಪ್ರಚಾರ ನಡೆಸುತ್ತಿದ್ದಾರೆ. ಬೆಳ್ತಂಗಡಿ ಅಭಿವೃದ್ಧಿ ಗಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ರಕ್ಷಿತ್ ಶಿವರಾಂ ಮನವಿಯನ್ನು ಮಾಡುತ್ತಿದ್ದಾರೆRead More
ನಾಲ್ಕೂರು: ಹರೀಶ್ ಪೂಂಜರವರ ಕಾರ್ಯವೈಖರ್ಯವನ್ನು ಮೆಚ್ಚಿ ಅನೇಕ ಕಡೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ನಾಲ್ಕೂರು ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರಾದವ ವಿಠಲ್ ಪೂಜಾರಿ, ದಿನೇಶ್ ಪೂಜಾರಿ ಕುದ್ರೊಟ್ಟು, ದುಗ್ಗಯ್ಯ ಪೂಜಾರಿ ಹುಂಬೆಜೆ, ನೋಣಯ್ಯ ಪೂಜಾರಿ ಖಂಡಿಗ, ಜಗದೀಶ್ ಪೂಜಾರಿ ಕುದ್ರೊಟ್ಟು ಮೊದಲಾದವರು ಬಿಜೆಪಿಗೆ ಸೇರ್ಪಡೆಗೊಂಡರು. ಈ ವೇಳೆ ಹರೀಶ್ ಪೂಂಜರು ಬಿಜೆಪಿ ಧ್ವಜವನ್ನು ನೀಡಿ ಬರಮಾಡಿಕೊಂಡರುRead More
ಬೆಳ್ತಂಗಡಿ: ಕಾಂಗ್ರೆಸ್ ಪಕ್ಷದ ಕಡೆ ಜನರ ಒಲವು ಹೆಚ್ಚಾಗುತ್ತಿದೆ: ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್
ಬೆಳ್ತಂಗಡಿ: ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ಕಡೆ ಜನರ ಒಲವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ವಿಜಯ ಕಟ್ಟಿಟ್ಟ ಬುತ್ತಿ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ ತಾಲೂಕು ಘಟಕದ ನಗರ ಅದ್ಯಕ್ಷ ಸಲೀಂ ಗುರುವಾಯನಕೆರೆ ಮತ್ತು ಗ್ರಾಮೀಣ ಅಧ್ಯಕ್ಷ ಅಶ್ರಫ್ ನೆರಿಯ ಹೇಳಿದರು. ಅವರು ಬೆಳ್ತಂಗಡಿ ಗುರುನಾರಾಯಣ ಸಭಾಭವನದಲ್ಲಿ ಏ. 27 ರಂದು ಕರೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದರು. ಕಳೆದ 10 ದಿನಗಳಿಂದ ಈ ಪಕ್ಷದ ಕಾರ್ಯಕರ್ತರು ತಾಲೂಕಿನ ಮೂಲೆ ಮೂಲೆಗಳಲ್ಲಿ ಪಕ್ಷದ ನಾಲ್ಕು ಪ್ರಮುಖ […]Read More
ಅಳದಂಗಡಿ: ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಪರವಾಗಿ ಒಂದು ಕಡೆ ಸಹೋದರಿ ಸ್ಪಂದನಾ ವಿಜಯರಾಘವೇಂದ್ರ ಚುನಾವಣಾ ಪ್ರಚಾರ ನಡೆಸುತ್ತಿದ್ದರೆ ಇನ್ನೊಂದು ಕಡೆ ಅಳದಂಗಡಿ ಕುದ್ಯಾಡಿಯಲ್ಲಿ ಚುನಾವಣಾ ಪ್ರಚಾರ ನಿರತರಾದ ನಿವೃತ್ತ ಎಸ್ಪಿ ಕಾಂಗ್ರೆಸ್ ಮುಖಂಡ ಪಿತಾಂಬರ ಹೆರಾಜೆ, ಪಕ್ಷದ ಮುಖಂಡರು, ಕಾರ್ಯಕರ್ತರು ಮನೆ ಮನೆ ಭೇಟಿ ಕಾರ್ಯಕ್ರಮ ನಡೆಸಿದರು.Read More
ಕಳೆಂಜ: ಚುನಾವಣಾ ಪ್ರಚಾರ ಭರದಿಂದ ಸಾಗುತ್ತಿದ್ದಂತೆ ಹಲವು ಕಾರ್ಯಕರ್ತರು ತನ್ನ ಪಕ್ಷವನ್ನು ತೊರೆದು ಇನ್ನೊಂದು ಪಕ್ಷವನ್ನು ಸೇರುತ್ತಿದ್ದಾರೆ. ಇದೀಗ ಕಳೆಂಜ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಾದ ಬಾಲಕೃಷ್ಣ ಉದ್ರಾಜೆ, ಎಜೆ ಜೋಸೆಫ್ ಕಾಯಡ, ಸಿಬಿನ್ ಎಕೊ ಅವರನ್ನು ಹರೀಶ್ ಪೂಂಜ ಅವರು ಪಕ್ಷದ ಧ್ವಜ ನೀಡಿ ಬಿಜೆಪಿಗೆ ಬರಮಾಡಿಕೊಂಡರು.Read More
ಬೆಳ್ತಂಗಡಿ: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಗ್ರಾಮೀಣ ಪತ್ರಕರ್ತ ಅಶ್ರಫ್ ಆಲಿಕುಂಞ ಮುಂಡಾಜೆ ಅವರು ಅಂತಿಮ ಕಣದಲ್ಲಿದ್ದು, ಅವರ ಪ್ರಚಾರಾರ್ಥ ಹಾಗೂ ಕಾರ್ಯಕರ್ತರ ಚುನಾವಣಾ ಸಂಪರ್ಕ ಕಚೇರಿಯು ಏ.26 ರಂದು ಬೆಳ್ತಂಗಡಿ ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಉದ್ಘಾಟನೆಗೊಂಡಿತು. ತಾಲೂಕು ಹಿರಿಯ ಮುಖಂಡ ಸಯ್ಯದ್ ಸಲೀಂ ತಂಞಲ್ ಸಬರಬೈಲು ಕಚೇರಿಯನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ ವಹಿಸಿದ್ದರು. ಈ ವೇಳೆ ತಾಲೂಕು ಕಾರ್ಯಾಧ್ಯಕ್ಷ ರಾಮಾ […]Read More
ಬೆಳ್ತಂಗಡಿ: ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಮನೆ ಮನೆಗೆ ತೆರಲಿ ಚುನಾವಣಾ ಪ್ರಚಾರ ವೇಳೆ ಪ್ರತೀದಿನ ಮೂರರಿಂದ ಮೂರುವರೆ ಕೋಟಿ ರೂಪಾಯಿ ಹಣ ಹಂಚುತ್ತಿದ್ದಾರೆ. ಚುನಾವಣಾ ಪ್ರಚಾರಕ್ಕೆ ಹೋಗುವಾಗ ಪೂಂಜರ ಜೊತೆಗೆ ನಾಲ್ಕು ಕಾರುಗಳು ಹೋಗುತ್ತಿದ್ದು, ಒಂದು ಕಾರಲ್ಲಿ ದೊಡ್ಡ ಮೊತ್ತದ ಹಣವನ್ನು ರವಾನಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ ವಸಂತ ಬಂಗೇರ ಆರೋಪಿಸಿದರು. ಅವರು ಬೆಳ್ತಂಗಡಿ ಗುರುನಾರಾಯಣ ಸಭಾಭವನದಲ್ಲಿ ಏ.26 ರಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಹರೀಶ್ ಪೂಂಜ ಚುನಾವಣಾ ಪ್ರಚಾರ ವೇಳೆ ಮನೆ […]Read More