ಧರ್ಮಸ್ಥಳ: ಹಿಂದೂ ಯುವತಿಯನ್ನು ಪರಿಚಯಸ್ಥ ಅನ್ಯಕೋಮಿನ ಆಟೋ ಚಾಲಕ ಡ್ರಾಪ್ ಮಾಡಿದ್ದ ವಿಚಾರವಾಗಿ ಅಪರಿಚಿತ ಯುವಕರ ತಂಡ ಆಟೋ ಚಾಲಕನಿಗೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಆಟೋ ಚಾಲಕ ಉಜಿರೆ ಗ್ರಾಮದ ಅತ್ತಾಜೆ ನಿವಾಸಿ ಅಬ್ದುಲ್ ಹಮೀದ್ ಎಂದು ತಿಳಿದು ಬಂದಿದೆ. ಉಜಿರೆ ಖಾಸಗಿ ಕಾಲೇಜಿನ ಹಿಂದೂ ವಿದ್ಯಾರ್ಥಿ ಬೆಂಗಳೂರಿಗೆ ತೆರಳಲು ಪರಿಚಯಸ್ಥ ಅನ್ಯಕೋಮಿನ ಯುವಕನ ಆಟೋ ಗೆ ಕರೆ ಮಾಡಿದ್ದು ಆತ ಆಕೆಯನ್ನು ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ಡ್ರಾಪ್ ಮಾಡಿದ್ದ ಈ ವೇಳೆ ಆತ […]
ಪಶ್ಚಿಮ ಬಂಗಾಳ, : ಐಫೋನ್ ಖರೀದಿಸಲು ಹೆತ್ತ ಮಗುವನ್ನೇ ದಂಪತಿ ಮಾರಾಟ ಮಾಡಿರುವ ಆಘಾತಕಾರಿ ಘಟನೆಯೊಂದು ಪಶ್ಚಿಮ ಬಂಗಾಳದಲ್ಲಿ ಬೆಳಕಿಗೆ ಬಂದಿದೆ.ಪಶ್ಚಿಮ ಬಂಗಾಳದ ದಂಪತಿ ಇನ್ಸ್ಟಾಗ್ರಾಮ್ ರೀಲ್ಗಳನ್ನು ಮಾಡಲು ಐಫೋನ್ ಖರೀದಿಸಲು ಬಯಸಿದ್ದರು. ಆದರೆ ಫೋನ್ ಖರೀದಿಸಲು ಆರ್ಥಿಕ ಸಮಸ್ಯೆ ಎದುರಾಗಿದೆ ಹೀಗಾಗಿ ತಮ್ಮ ಮಗುವನ್ನೇ ಮಾರಾಟ ಮಾಡಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿ ಮಗುವಿನ ತಾಯಿ ಸತಿ ಹಾಗೂ ಮಗುವನ್ನು ಖರೀದಿಸಿದ ಮಹಿಳೆಯನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಮಗುವಿನ ತಂದೆ ಜೈದೇವ್ ಇನ್ನೂ ತಲೆಮರೆಸಿಕೊಂಡಿದ್ದು […]Read More
ಬೆಳ್ತಂಗಡಿ: ಸೌಜನ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರು ತನಿಖೆಗೆ ಆಗ್ರಹಿಸಿ ಸಿಎಂ ಸಿದ್ದರಾಮಯ್ಯ ರವರಿಗೆ ಶಾಸಕ ಹರೀಶ್ ಪೂಂಜರವರು ಮನವಿ ಮಾಡಿದ್ದಾರೆ. 2023 ರವರೆಗೂ ನಡೆದ ಸಿಬಿಐ ತನಿಖೆಯಲ್ಲಿ ಶಂಕಿತ ಆರೋಪಯನ್ನು ದೋಷ ಮುಕ್ತಗೊಳಿಸಿ ನ್ಯಾಯಾಲಯವು ಆದೇಶ ನೀಡಿದೆ. ಈ ತನಿಖೆಯ ಫಲಶೃತಿಯ ಬಗ್ಗೆ ಅಪರಾಧಿಗಳನ್ನು ಕಾನೂನಿನ ಚೌಕಟ್ಟಿನೊಳಗೆ ತಂದು ಶಿಕ್ಷೆ ನೀಡಲು ಆಡಳಿತ ವ್ಯವಸ್ಥೆ ವಿಫಲವಾಗಿದೆ. ನಾಗರೀಕರ ಭಾವನೆಗಳನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರವು ಸೌಜನ್ಯಾಳ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮರು ತನಿಖೆಗೆ ಒಳಪೆಇಸಿ […]Read More
ಧರ್ಮಸ್ಥಳದ ಹೆಗ್ಗಡೆಯವರ ವಿರುದ್ಧ ಅವಹೇಳನ ಸುದ್ದಿಗೆ ನಿರ್ಬಂಧ: ಹೈಕೋರ್ಟ್ ತಾತ್ಕಾಲಿಕ ಪ್ರತಿಬಂಧಕಾಜ್ಞೆ
ಧರ್ಮಸ್ಥಳ: ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ ಡಿ ವೀರೇಂದ್ರ ಹೆಗ್ಗಡೆಯವರ ವಿರುದ್ಧ ಅವಹೇಳನಕಾರಿ ವರದಿ ಮಾಡದಂತೆ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ಕೆಲ ವ್ಯಕ್ತಿಗಳು ಮತ್ತು ಮಾಧ್ಯಮದ ವಿರುದ್ಧ ತಾತ್ಕಾಲಿಕ ಪ್ರತಿಬಂಧಕಾಜ್ಞೆ ಹೊರಡಿಸಿದೆ. ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತು ಸುದ್ದಿ ವಿಶ್ಲೇಷಣೆ ಅಥವಾ ಪ್ರಸಾರ ಮಾಡಿದ್ದರೆ ತಕ್ಷಣ ಅದನ್ನು ತೆಗೆದುಹಾಕುವಂತೆ ನ್ಯಾಯಪೀಠ ತನ್ನ ಆದೇಶವನ್ನು ಹೊರಡಿಸಿದೆ.Read More
ದೇವನಹಳ್ಳಿ: ಜನಮೆಚ್ಚುಗೆ ಪಡೆದ ಕಾಂತಾರ ಸಿನೆಮಾದಲ್ಲಿ ದೈವಗಳಿಗೆ ನೀಡಿದ ಮಹತ್ವ ಅತ್ಯಂತ ವಿಭಿನ್ನವಾಗಿ ಮೂಡಿಬಂದಿದ್ದು, ಸಿನಿ ಪ್ರಿಯರು ಅದನ್ನೇ ಅನುಕರಣೆ ಮಾಡುತ್ತಿರುವುದು ಇತ್ತೀಚೆಗೆ ಸುದ್ದಿಯಾಗುತ್ತಿದೆ. ಇದರಿಂದ ಬೇಸತ್ತ ನಟ ರಿಷಭ್ ಶೆಟ್ಟಿ ದೈವದ ನುಡಿಯನ್ನು ಅನುಕರಣೆ ಮಾಡಬಾರದು ಎಂದು ಅದೆಷ್ಟೇ ಭಾರಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ ಆದರೆ ಕೆಲವೊಂದು ಕಡೆಗಳಲ್ಲಿ ಈಗಲೂ ಅನುಕರಣೆ ಮಾಡುತ್ತಿರುವುದು ನಮಗೆ ಕಾಣಸಿಗುತ್ತದೆ. ಅಂತೆಯೆ ಇದೀಗ ದೇವನಹಳ್ಳಿಯಲ್ಲಿರುವ ಎಪಿಟಿಕ ಕಂಪೆನಿಯೊಂದರ ಕಾರ್ಯಕ್ರಮವು ಕ್ಲಾರ್ಕ್ಸ್ ಎಕ್ಸೋಟಿಕ ಕನ್ವೆನ್ಶನ್ ರೆಸೋರ್ಟ್ ನಲ್ಲಿ ನಡೆದಿದ್ದು ಕಾಂತರ […]Read More
ವೇಣೂರು: ವೈದ್ಯರ ನಿರ್ಲಕ್ಷ್ಯಕ್ಕೆ ಮೆದುಳು ನಿಷ್ಕ್ರಿಯಗೊಂಡು ಗರ್ಭಿಣಿ ಸಾವನ್ನಪ್ಪಿರುವ ಘಟನೆ ಮಂಗಳೂರಿನ ಆಸ್ಪತ್ರೆಯಲ್ಲಿ ನಡೆದಿದೆ. ಸಾವನ್ನಪ್ಪಿರುವ ಗರ್ಭಿಣಿ ವೇಣೂರಿನ ಶಿಲ್ಪಾ ಎಂದು ತಿಳಿದುಬಂದಿದೆ. ಈಕೆ ತನ್ನ ಎರಡನೇ ಮಗುವಿನ ಹೆರಿಗೆಗಾಗಿ ಜುಲೈ.2 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರ ಚಿಕಿತ್ಸೆಯ ಮೂಲಕ ಹೆಣ್ಣುಮಗುವನ್ನು ಹೊರತೆಗೆದರೂ ಗರ್ಭಕೋಶದಲ್ಲಿ ಸಮಸ್ಯೆ ಇದೆ ಎಂದು ಹೇಳಿ ಬಳಿಕ ಅದರ ನಿವಾರಣೆಯ ಸಂದರ್ಭ ರಕ್ತಸ್ರಾವವಾಗಿದೆ ಎನ್ನಲಾಗಿದೆ. ರಕ್ತದೊತ್ತಡದ ಏರಿಳಿತದಿಂದ ಸಮಸ್ಯೆ ಉಲ್ಬಣಗೊಂಡು ಮೆದುಳು ನಿಷ್ಕ್ರಿಯಗೊಂಡು ಕೋಮಾಕ್ಕೆ ತಲುಪಿದ್ದರು ಎಂದು ಆರೋಪಿಸಲಾಗಿದೆ.Read More
ಉಪ್ಪಿನಂಗಡಿ: ಜ್ವರದಿಂದ ಬಳಲುತ್ತಿದ್ದ ಎಂಟು ತಿಂಗಳ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡದಿದೆ. ಮಗುವಿನ ಸಾವಿಗೆ ಪತಿಯೇ ಕಾರಣ ಎಂದು ಪತ್ನಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ನೆಕ್ಕಿಲಾಡಿ ಗ್ರಾಮದ ಸಂತ್ಯಡ್ಕ ನಿವಾಸಿಗಳಾದ ಶ್ರೀಧರ ನಾಯ್ಕ ಮತ್ತು ಚಿತ್ರಾ ದಂಪತಿಯ ಪುತ್ರ ಎಂಟು ತಿಂಗಳ ಕಂದ ಜೀವಿತ್ ತೀವ್ರ ಜ್ವರದ ಕಾರಣ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜು.1 ರಂದು ಸಾವನ್ನಪ್ಪಿದೆ. ಜು.2 ರಂದು ಚಿತ್ರಾ ತನ್ನ ಮಗುವಿನ […]Read More
ಕಾಸರಗೋಡು: ಭಾರಿ ಗಾಳಿ ಮಳೆಗೆ ಮರ ಬಿದ್ದು ಆಟವಾಡುತ್ತಿದ್ದ ಬಾಲಕಿ ಸಾವನ್ನಪ್ಪಿದ ಘಟನೆ ಕಾಸರಗೋಡಿನ ಪುತ್ತಿಗೆ ಸಮೀಪದ ಅಂಗಡಿಮೊಗರಿನಲ್ಲಿ ನಡೆದಿದೆ. ಆರನೆ ತರಗತಿ ವಿದ್ಯಾರ್ಥಿನಿ ಆಯಿಷತ್ ಮಿನ್ ಹಾ ಮೃತ ಬಾಲಕಿ ನೆನ್ನೆ ಸಂಜೆ ನಾಲ್ಕು ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಬಾಲಕಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಮರ ಮುರಿದು ಬಿದ್ದಿದೆ. ಕೂಡಲೆ ಅಲ್ಲಿದ್ದ ಸ್ಥಳೀಯ ರು ಬಾಲಕಿಯನ್ನು ಮರದಡಿಯಿಂದ ಹೊರ ತೆಗೆದು ಕುಂಬಳೆಯ ಆಸ್ಪತ್ರೆಗೆ ಸಾಗಿಸಿದ್ದಾರೆ ಈ ವೇಳೆ ಬಾಲಕಿ ಮೃತಪಟ್ಟಿದ್ದಾಳೆRead More
ಸುಳ್ಯ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳು ಜೂ.30 ರೊಳಗೆ ಶರಣಾಗದಿದ್ದರೆ ಅವರ ಮನೆಯನ್ನು ಜಪ್ತಿ ಮಾಡುವುದಾಗಿ ಎನ್ ಐಎ ಅಧಿಕಾರಿಗಳು ಸುಳ್ಯ ನಗರದಲ್ಲಿ ಸಾರ್ವಜನಿಕವಾಗಿ ಧ್ವನಿ ವರ್ಧಕದ ಮೂಲಕ ಎನ್ ಐಎ ಅಧಿಕಾರಿಗಳು ಅನೌನ್ಸ್ ಮಾಡುತ್ತಿದ್ದಾರೆ. ಆರೋಪಿಯ ಸುಳಿವು ಕೊಟ್ಟಲ್ಲಿ ನಗದು ಬಹುಮಾನವನ್ನು ನೀಡಲಾಗುವುದು ಎಂದು ಸಾರ್ವಜನಿಕರಿಗೆ ತಿಳಿಸಲಾಗಿದೆ.Read More