ಧರ್ಮಸ್ಥಳ: ಪರಿಚಯಸ್ಥ ಅನ್ಯಕೋಮಿನ ಆಟೋ ಚಾಲಕ ಹಿಂದೂ ಯುವತಿಗೆ ಡ್ರಾಪ್ : ಅಪರಿಚಿತ ಯುವಕರಿಂದ ಆಟೋ ಚಾಲಕನಿಗೆ ಹಲ್ಲೆ

ಧರ್ಮಸ್ಥಳ: ಹಿಂದೂ ಯುವತಿಯನ್ನು ಪರಿಚಯಸ್ಥ ಅನ್ಯಕೋಮಿನ ಆಟೋ ಚಾಲಕ ಡ್ರಾಪ್ ಮಾಡಿದ್ದ ವಿಚಾರವಾಗಿ ಅಪರಿಚಿತ ಯುವಕರ ತಂಡ ಆಟೋ ಚಾಲಕನಿಗೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಆಟೋ ಚಾಲಕ ಉಜಿರೆ ಗ್ರಾಮದ ಅತ್ತಾಜೆ ನಿವಾಸಿ ಅಬ್ದುಲ್ ಹಮೀದ್ ಎಂದು ತಿಳಿದು ಬಂದಿದೆ.
ಉಜಿರೆ ಖಾಸಗಿ ಕಾಲೇಜಿನ ಹಿಂದೂ ವಿದ್ಯಾರ್ಥಿ ಬೆಂಗಳೂರಿಗೆ ತೆರಳಲು ಪರಿಚಯಸ್ಥ ಅನ್ಯಕೋಮಿನ ಯುವಕನ ಆಟೋ ಗೆ ಕರೆ ಮಾಡಿದ್ದು ಆತ ಆಕೆಯನ್ನು ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ಡ್ರಾಪ್ ಮಾಡಿದ್ದ ಈ ವೇಳೆ ಆತ ಹಿಂತಿರುಗುವ ವೇಳೆ ಯಾರೋ ಅಪರಿಚಿತ ತಂಡ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಆಟೋ ಚಾಲಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ