ಪುತ್ತೂರಿನ ಮಹಿಳೆಯಿಂದ ಅಪೂರ್ವ ಸಾಧನೆ: ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆಯನ್ನು ತುಳು ಲಿಪಿಯ ಮೂಲಕ ಓದುವ ಅವಕಾಶ
ಪುತ್ತೂರು: ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆಯನ್ನು ಇದೀಗ ತುಳು ಲಿಪಿಯ ಮೂಲಕ ಓದುವ ಅವಕಾಶವನ್ನು ಪುತ್ತೂರಿನ ಮಹಿಳೆಯೋರ್ವರು ಮಾಡಿ ಕೊಟ್ಟಿದ್ದಾರೆ.
ಪುತ್ತೂರಿನ ನರಿಮೊಗರು ಸಮೀಪದ ಕೊಡಂಕೇರಿ ನಿವಾಸಿ ಅಪರ್ಣಾ ಕೊಡಂಕೇರಿ ಇಂತಹದೊಂದು ಅಪೂರ್ವ ಅವಕಾಶವನ್ನು ತುಳುವರಿಗೆ ಮಾಡಿ ಕೊಟ್ಟಿದ್ದಾರೆ. ತುಳು ಲಿಪಿಯಲ್ಲಿ ಭಗವದ್ಗೀತೆಯನ್ನು ಬರೆದಿರುವುದು ಇದೇ ಮೊದಲಾಗಿದೆ.